ಸುಬ್ರಹ್ಮಣ್ಯ: ಇಲ್ಲಿನ ಕೊಲ್ಲಮೊಗ್ರ ಸಮೀಪದಲ್ಲಿ ಬೆಳಗ್ಗೆ ಹಾಲು ಡೈರಿಗೆ ಹೋಗುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ನಡೆಸಿದೆ.ಯುವಕ ತೀವ್ರ ಸ್ವರೂಪದ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೊಲ್ಲಮೊಗ್ರದ ಗುರುಪ್ರಸಾದ್‌ (22)ಎಂಬವರು ಭಾನುವಾರ ಬೆಳಗ್ಗೆ ಹಾಲನ್ನು ಡೈರಿಗೆ ಹಾಕಲು ತೆರಳಿದ್ದರು. ಮುಂಜಾನೆ ಮಂಜು ಕವಿದಿದ್ದು ಅವರಿಗೆ ದಾರಿಯ ಪಕ್ಕದಲ್ಲಿ ಕಾಡಾನೆ ನಿಂತಿದ್ದು ಗೊತ್ತಾಗಿರಲಿಲ್ಲ. ಹತ್ತಿರಕ್ಕೆ ಬಂದ ಗುರುಪ್ರಸಾದ್‌ರನ್ನು ಆನೆ ಸೊಂಡಿಲಿನಲ್ಲಿ ಎತ್ತಿ ಎಸೆದಿರುವುದು ಮಾತ್ರವಲ್ಲ ಕಾಲಿನಿಂದಲೂ ತುಳಿದಿದೆ. ಯುವಕನ ಪಕ್ಕೆಲುಬು ಮುರಿದಿದ್ದಲ್ಲದೆ ಬೆನ್ನೆಲುಬಿಗೂ ಹಾನಿಯಾಗಿದೆ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
