ಹಾಸನ:ನಾಲ್ಕು ದಿನದ ಹಿಂದಷ್ಟೇ ಜನಿಸಿದ ಮರಿಯಾನೆಯ ಕರುಣಾಜನಕ ಕತೆಯಿದು. ಕಾಲು ಪೆಟ್ಟಾಗಿ ಕಾಡುತ್ತಿರುವ ತೀವ್ರ ನೋವಿನಲ್ಲೂ ಮಾತೃವಾತ್ಸಲ್ಯ ಕಾಣದೆ ಕಣ್ಣೀರಿಡುತ್ತಿದೆ. ಇಂತಹ ಮನಕಲಕುವ ದೃಶ್ಯಕ್ಕೆ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮಸ್ಥರು ಸಾಕ್ಷಿಯಾಗಿದ್ದು,‌ ಮರಿಯಾನೆ ಸ್ಥಿತಿ ಕಂಡು ಮಮ್ಮಲ‌‌ ಮರುಗುತ್ತಿದ್ದಾರೆ.
ಮಳಲಿಯ ಅನಿಲ್ ಎಂಬುವರ ಕಾಫಿ ತೋಟದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಜನಿಸಿದ ಆನೆಮರಿ ತಾಯಿಯಿಂದ ಪರಿತ್ಯಕ್ತವಾಗಿ ಬಿದ್ದಿದ್ದು, ಯಾವುದೋ ಗುಂಡಿಗೆ ಸಿಲುಕಿ‌ ಮುಂಗಾಲು ಮುರಿದಿದೆ. ತನ್ನ ಮರಿಯನ್ನು ಎತ್ತಿ ನಿಲ್ಲಿಸಲು, ಹಾಲುಣಿಸಲು ಎರಡು‌ ದಿನಗಳ ಕಾಲ ಯತ್ನಿಸಿದ್ದ ತಾಯಿಆನೆ ಯಾರನ್ನೂ ಸಮೀಪಕ್ಕೆ ಹೋಗಲು ಬಿಟ್ಟಿರಲಿಲ್ಲ. ಈ ವೇಳೆ ಗಜಪಡೆ ಕೂಡ ತಾಯಿ ಆನೆಗೆ ಸಾಥ್ ನೀಡಿದ್ದವು.
ಆದರೆ, ಇನ್ನು ಮರಿಯಾನೆ ಎದ್ದು ನಿಂತು ಹಾಲುಕುಡಿಯೋಕೆ ಆಗಲ್ಲ ಎಂಬ ನಿರ್ಧಾರಕ್ಕೆ ಬಂದ ತಾಯಿಆನೆ ಶುಕ್ರವಾರ ಬೆಳಗ್ಗೆ ಸ್ಥಳ ತೊರೆದಿದೆ. ತೋಟದಲ್ಲಿ ಅನಾಥವಾಗಿ ನರಳುತ್ತ ಬಿದ್ದಿರುವ ಮರಿಯಾನೆ ಆರೈಕೆ ಹೊಣೆಯನ್ನು ಅರಣ್ಯ ಇಲಾಖೆ ಹೊತ್ತುಕೊಂಡಿದೆ.
ಪಶುವೈದ್ಯರು ಡ್ರಿಪ್ ಹಾಕಿ, ಬಾಟಲಿಯಲ್ಲಿ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಮರಿಯಾನೆ ಮಾತ್ರ, ಕಾಲಿನ ನೋವಿನ ಜತೆಗೆ ತಾಯಿಗಾಗಿ ರೋದಿಸುತ್ತಿದೆ.
ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಕಾಫಿ ತೋಟದಲ್ಲಿ 4 ದಿನಗಳ ಹಿಂದಷ್ಟೇ ಜನಿಸಿದ ಆನೆಮರಿಯ ಮುಂಗಾಲು ಮುರಿದಿದೆ. ಮರಿಯನ್ನು ಎತ್ತಿ ನಿಲ್ಲಿಸಿ ಹಾಲುಣಿಸಲು 2‌ ದಿನ ಕಾಲ ತಾಯಿಆನೆ ನಡೆಸಿದ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ತಾಯಿಆನೆ ಮರಿ ಬಿಟ್ಟು ಹೋಗಿದ್ದು, ಅರಣ್ಯ ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ.#Elephant#Cub#Cryingpic.twitter.com/z8eWDFjNQi
— Vijayavani (@VVani4U)October 2, 2020

ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + thirteen =
Remember me
