ಮಂಡ್ಯ:ಮಳವಳ್ಳಿ ತಾಲೂಕಿನ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಆನೆಗಳು ಚೀರಾಡುತ್ತಿದ್ದವು. ಶಬ್ಧ ಬಂದ ದಿಕ್ಕಿನತ್ತ ಭಾನುವಾರ ನುಸುಕಿನಲ್ಲಿ ಅರಣ್ಯಾಧಿಕಾರಿಗಳು ಹೋಗುತ್ತಿದ್ದಂತೆ ಆನೆಮರಿಯ ರೋದನ ಕಣ್ಣಿಗೆ ಬಿತ್ತು!
ಹೌದು, ಕಳೆದ ರಾತ್ರಿ ಕಾಡಾನೆಗಳ ಹಿಂಡಿನೊಂದಿಗೆ ನೀರು ಕುಡಿಯಲು ಬಂದಿದ್ದ ಮರಿಯಾನೆ, ನೀರಿನ ತೊಟ್ಟಿಯೊಳಗೆ ಬಿದ್ದು ಒದ್ದಾಡುತ್ತಿತ್ತು. ಪ್ರಾಣಿಗಳು ನೀರು ಕುಡಿಯಲೆಂದು ನಿರ್ಮಿಸಿದ್ದ ಸಿಮೆಂಟ್ ತೊಟ್ಟಿಯೊಳಕ್ಕೆ ಬಿದ್ದಿದ್ದ ಆನೆಮರಿಗೆ ಹೊರಬಾರಲು ಆಗದೆ ಅಲ್ಲೇ ರೋದಿಸುತ್ತಿತ್ತು. ತೊಟ್ಟಿಯಲ್ಲಿ ಮರಿ ಸಿಲುಕಿದ್ದರಿಂದ ಉಳಿದ ಆನೆಗಳೂ ಚೀರಾಡುತ್ತಿದ್ದವು. ಮರಿಯನ್ನು ತೊಟ್ಟಿಯಿಂದ ಮೇಲೆತ್ತಲು ಆನೆಗಳ ಹಿಂಡು ಪ್ರಯತ್ನಿಸುತ್ತಲೇ ಇತ್ತು.
ನೀರಿನ ತೊಟ್ಟಿ ಬಳಿ ಬಿಡಾರ ಹೂಡಿದ್ದ ಗಜಪಡೆಯನ್ನು ಓಡಿಸಿದ ಅರಣ್ಯ ಸಿಬ್ಬಂದಿ ಮರಿಯಾನೆಯ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜೆಸಿಬಿ ಸಹಾಯದಿಂದ ತೊಟ್ಟಿಯ ಒಂದು ಭಾಗ ಹೊಡೆಯುತ್ತಿದ್ದಂತೆ ಮೇಲೆ ಆನೆಮರಿ ಬಂತು. ಮೊದಲೇ ಗಾಬರಿಗೊಂಡಿದ್ದ ಆನೆಮರಿ ಕಾಡಿನೊಳಕ್ಕೆ ಓಡಿಹೋಯಿತು. ವಲಯ ಅರಣ್ಯಾಧಿಕಾರಿ ಮಹದೇವಸ್ವಾಮಿ ನೇತೃತ್ವದಲ್ಲಿ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಕಾಡಾನೆಗಳ ಹಿಂಡಿನ ಜತೆಗೆ ನೀರು ಕುಡಿಯಲು ಬಂದಿದ್ದ ಮರಿಯಾನೆ ನೀರಿನ ತೊಟ್ಟಿಯೊಳಗೆ ಬಿದ್ದು ಒದ್ದಾಡುತ್ತಿತ್ತು. ಭಾನುವಾರ ಜೆಸಿಬಿ ಸಹಾಯದಿಂದ ಅರಣ್ಯ ಸಿಬ್ಬಂದಿ ಆನೆಮರಿಯನ್ನು ಮೇಲಕ್ಕೆತ್ತಿದ್ದರು.#Elephant#Waterhttps://t.co/OCRwXmpLdipic.twitter.com/22vkZhnEDl
— Vijayavani (@VVani4U)November 22, 2020

ವಿಷವಿಕ್ಕಿ ಹುಲಿ ಕೊಂದ ದುರುಳರು? ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ರೋದನ

ದನ ಕಾಯೋಕೆ ಹೋಗಿ… ವೈದ್ಯರಿಗೆ ಸಚಿವ ಸುಧಾಕರ್​ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
