ಮಂಡ್ಯ:ಆನೆಗಳನ್ನು ಕಾಡಿಗಟ್ಟುವಾಗ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಫಾರೆಸ್ಟ್​ ವಾಚರ್​ ಸಾವಿಗೀಡಾಗಿರುವ ಘಟನೆ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹೊರಗುತ್ತಿಗೆ ಆಧಾರಿತ ಫಾರೆಸ್ಟ್ ವಾಚರ್ ಆಗಿ ಶಿವನಂಜಯ್ಯ(30) ಎಂಬುವರು ಕೆಲಸ ಮಾಡುತ್ತಿದ್ದರು. ಕೂನನಕೊಪ್ಪಲು ಗ್ರಾಮದ ಬಳಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವಾಗ ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ಶಿವನಂಜಯ್ಯರಿಗೆ ತಗುಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಪಾಮಿರ್​ ಪರ್ವತ ಶ್ರೇಣಿಯೆಲ್ಲ ತನ್ನದೇ..! ಚೀನಾ ವಿಸ್ತರಣಾ ದಾಹಕ್ಕೆ ಕೊನೆಯೇ ಇಲ್ಲ; ತಜಕಿಸ್ತಾನ್​ಗೆ ಆತಂಕ
ಶಿಂಷಾ ಅರಣ್ಯ‌ ಪ್ರದೇಶದಿಂದ ಹತ್ತು ಕಾಡಾನೆಗಳು ಗ್ರಾಮಕ್ಕೆ ಆಗಮಿಸಿದ್ದವು. ಶಬ್ದ ಮಾಡಿ ಕಾಡಿಗೆ ಓಡಿಸುತ್ತಿದ್ದ ವೇಳೆ ಆನೆಗಳು ಸಿಬ್ಬಂದಿಗಳನ್ನೇ ಹಿಮ್ಮೆಟ್ಟಿಸಿವೆ. ಈ ವೇಳೆ ಸಿಬ್ಬಂದಿ ಭಯದಿಂದ ಓಡುವಾಗ ಆಕಸ್ಮಿಕವಾಗಿ ಫಾರೆಸ್ಟ್ ಗಾರ್ಡ್ ಬಂದೂಕಿನಿಂದ ಗುಂಡು ಹಾರಿದೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಗುಜರಾತ್​ನ ಜುನಾಗಢ್​ ತನ್ನದೆನ್ನಲು ಪಾಕಿಸ್ತಾನಕ್ಕೆ ಧೈರ್ಯ ನೀಡಿದ್ದು ಈ ವಿದ್ಯಮಾನ; ಜನರೇ ಬುದ್ಧಿ ಕಲಿಸಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eight =
Remember me
