ಮೈಸೂರು:ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿದ್ದ ಲಕ್ಷ್ಮಿ ಎಂಬ ಆನೆ ಸೆ.13 ರಂದು ಅರಮನೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಗಂಡು ಮರಿಗೆ ಜನ್ಮ ನೀಡಿತ್ತು. ಇದೀಗ ಈ ಆನೆ ಮರಿಗೆ ಪ್ರಮೋದಾದೇವಿ ಒಡೆಯರ್ ಶ್ರೀ ದತ್ತಾತ್ರೇಯ ಎಂದು ಹೆಸರಿಟ್ಟಿದ್ದಾರೆ.
ದಸರಾ ಹಬ್ಬಕ್ಕೆ ಮೈಸೂರಿಗೆ ಬಂದಿದ್ದ ಲಕ್ಷ್ಮೀ ಆನೆ ಬಂದಿತ್ತು. ಈ ವೇಳೆ ಆನೆ ಗರ್ಭಿಣಿಯಾಗಿತ್ತು ಎನ್ನುವುದು ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ತುಂಬು ಗರ್ಭಿಣಿ ಆನೆ ದಸರಾ ತಾಲೀಮಿನಲ್ಲೂ ಭಾಗವಹಿಸಿತ್ತು. ಸೆ.13ರಂದು ಗಂಡು ಮರಿಗೆ ಜನ್ಮ ನೀಡಿದಾಗ ಆನೆ ಗರ್ಭಿಣಿಯಾಗಿತ್ತು ಎಂಬುವುದು ಗಮನಕ್ಕೆ ಬಂದಿತ್ತು.
ಆನೆ ಮತ್ತು ಮರಿ ಆನೆ ಆರೋಗ್ಯವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಲಕ್ಷಿ ಆನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸದ್ಯ ಯಾರನ್ನೂ ಆನೆಯ ಬಳಿ ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮರಿ ಆನೆಯನ್ನು ವೀಕ್ಷಿಸಬಹುದು ಎಂದು ಅರಮನೆಯಲ್ಲಿ ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 5 =
Remember me
