
ಬೆಂಗಳೂರು: ದೇಶಾದ್ಯಂತ ಆನೆಗಳ ಸಂಖ್ಯೆಯನ್ನು ಗಣತಿಯನ್ನು ಸಾಮಾನ್ಯವಾಗಿ ಪ್ರತೀ ಐದು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. 2017ರಲ್ಲಿ ಗಣತಿ ನಡೆದ ಬಳಿಕ 2022ರಲ್ಲಿ ಪುನಃ ಗಣತಿ ನಡೆದಿದ್ದು, ಅದರ ವರದಿ ಬಿಡುಗಡೆಯಾಗಿದೆ. ರಾಜ್ಯದ ಆನೆಗಳ ಸ್ಥಿತಿಗತಿ ಕುರಿತ ವರದಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಬುಧವಾರ ಬಿಡುಗಡೆ ಮಾಡಿದರು.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆನೆಗಳ ಸಂಖ್ಯೆಯು ಸುಮಾರು 346ರಷ್ಟು ಹೆಚ್ಚಳವಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಅನೆಗಳಿದ್ದವು, ಈಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯವೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಹುಲಿ ಗಣತಿ ವರದಿಯ ಪ್ರಕಾರ ಕರ್ನಾಟಕದಲ್ಲಿ ಗಣನೀಯವಾಗಿ ಸಂಖ್ಯೆ ಹೆಚ್ಚಿದೆ. ಈಗ ಆನೆ ಸಂಖ್ಯೆಯೂ ಹೆಚ್ಚಾಗಿರುವುದು ಕಾಣಬಹುದು. ಈ ಮೂಲಕ ಕರ್ನಾಟಕ ವನ್ಯಜೀವಿ ರಕ್ಷಣೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ಆದ್ಯತೆ ಕೊಡುತ್ತಿದ್ದೇವೆ ಎಂದರು.
ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು.
ಆನೆ ಗಣತಿ ನಡೆದಿದ್ದು ಯಾವಾಗ?ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ 17ರಿಂದ ಮೇ 19ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಲಾಯಿತು.
ಈ ಗಣತಿಯ ಸ್ವರೂಪ, ಕ್ಷೇತ್ರ ಸಿಬ್ಬಂದಿಗೆ ತರಬೇತಿ ಗಣತಿ ಫಲಿತಾಂಶಗಳ ವಿಶ್ಲೇಷಣೆ ಹಾಗೂ ವರದಿ ತಯಾರಿಕೆಯಲ್ಲಿ ಆರ್. ಸುಕುಮಾರ್ ಅವರ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಅರಣ್ಯ ಇಲಾಖೆಯು ಆನೆಗಳ ಗಣತಿಯನ್ನು ನಡೆಸಿದೆ. ರಾಜ್ಯದ 32 ವಿಭಾಗಗಳಿಂದ 3400ಕ್ಕೂ ಹೆಚ್ಚು ಸಿಬ್ಬಂದಿ ಈ ಗಣತಿ ಕಾರ್ಯದಲ್ಲಿ ಭಾಗವಹಿಸಿದರು.
ಗಣತಿ ಸ್ವರೂಪ ಹೇಗಿತ್ತು?ಗಣತಿಯನ್ನು ನೇರ ಎಣಿಕೆ ಅಥವಾ ಬ್ಲಾಕ್ ಎಣಿಕೆ, ಟ್ರಾಂಜೆಕ್ಟೃ್ ಸಮಿತಿ ಅಥವಾ ಲದ್ದಿ ಎಣಿಕೆ ವಿಧಾನ ಹಾಗೂ ವಾಟರ್ ಹೋಲ್ ಎಣಿಕೆ ಮೂಲಕ ಕೈಗೊಳ್ಳಲಾಗಿದೆ. ನೇರ ಎಣಿಕೆ ಅಥವಾ ಬ್ಲಾಕ್ ಎಣಿಕೆ ವಿಧಾನದಲ್ಲಿ 5 ಚದರ ಕಿ.ಮೀ ವ್ಯಾಪ್ತಿಯ ವಿವಿಧ ಮಾದರಿಯ ಬ್ಲಾಕ್‌ಗಳಲ್ಲಿ ಆನೆಗಳ ನೇರ ಏಣಿಕೆಯನ್ನು ನಡೆಸಲಾಯಿತು.
ಟ್ರಾಂಜೆಕ್ಟೃ್ ಸಮೀಕ್ಷೆ ಅಥವಾ ಲದ್ದಿ ಎಣಿಕೆ ವಿಧಾನದಲ್ಲಿ 2 ಕಿ.ಮೀ ಉದ್ದದ ಟ್ರಾಂಜೆಕ್ಟೃ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಎಣಿಸಲಾಯಿತು. ಈ ಅಂಕಿ ಅಂಶಗಳ ಮಾದರಿಗಳ ಮೂಲಕ ಆನೆಗಳ ಸಂಖ್ಯೆಯ ಮಾಹಿತಿ ಪಡೆಯಲು ಸದರಿ ದತ್ತಾಂಶವನ್ನು ಸಂಸ್ಕರಿಸಲಾಗುತ್ತಿದೆ. ಮತ್ತು ಸದ್ಯದಲ್ಲಿಯೇ ಫಲಿತಾಂಶ ದೊರೆಯುವುದು.
ವಾಟರ್ ಹೋಲ್ ಎಣಿಕೆ ವಿಧಾನದ ಮೂಲಕ ಆನೆಗಳು ನಿಯಮಿತವಾಗಿ ಭೇಟಿ ನೀಡುವ ವಾಟರ್ ಹೋಲ್​ಗಳು ಮತ್ತು ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ನೋಡಿ ಎಣಿಸುವ ಕಾರ್ಯ ನಡೆಸಲಾಯಿತು. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗಿದೆ.
32 ವಿಭಾಗದಲ್ಲಿ ಸಮೀಕ್ಷೆರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯ ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಎಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18,975 ಚದರ ಕಿ.ಮೀ ಪ್ರದೇಶದ ಪೈಕಿ 6,104 ಚದರ ಕಿ.ಮೀ ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಇದೇ ಮೊದಲ ಬಾರಿಗೆ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿರುವುದರಿಂದ ಸಮೀಕ್ಷೆಯ ವರದಿಯು ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಭಾಗ ಮಟ್ಟದ ಆನೆ ಗಣತಿ (ಸಂಖ್ಯೆ)ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ- 1116ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ- 831ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ- 619ಎಂ.ಎಂ.ಹಿಲ್ಸ್ ವನ್ಯಜೀವಿ ವಿಭಾಗ- 706ಭದ್ರಾ ಹುಲಿ ಸಂರಕ್ಷಿತ ಪ್ರದೇಶ- 445ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ- 127ಶಿವಮೊಗ್ಗ (ವನ್ಯಜೀವಿ ವಿಭಾಗ)- 127ಮಡಿಕೇರಿ (ವನ್ಯಜೀವಿ ವಿಭಾಗ )- 113ಕಾವೇರಿ (ವನ್ಯಜೀವಿ ವಿಭಾಗ)- 236ಮಡಿಕೇರಿ ಪ್ರಾದೇಶಿಕ ವಿಭಾಗ- 214ಹಾಸನ ವಿಭಾಗ- 66ವಿರಾಜಪೇಟೆ ವಿಭಾಗ- 58ರಾಮನಗರ ವಿಭಾಗ- 33ಮೈಸೂರು ಪ್ರಾದೇಶಿಕ ವಿಭಾಗ- 59ಕೊಪ್ಪ ವಿಭಾಗ- 128ಕಾಳಿ ಹುಲಿ ಸಂರಕ್ಷಿತ ಪ್ರದೇಶ- 38ಮಂಗಳೂರು ವಿಭಾಗ- 47ಚಿಕ್ಕಮಗಳೂರು- 33ಕುದುರೆಮುಖ- 5ಕೋಲಾರ ವಿಭಾಗ- 13ಹಳಿಯಾಲ ವಿಭಾಗ- 3ಯಲ್ಲಾಪುರ ವಿಭಾಗ- 2ಭದ್ರಾವತಿ ವಿಭಾಗ-8
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
