ಶಿವಮೊಗ್ಗ:ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಆಕರ್ಷಣೆಯಾಗಿದ್ದ ಆನೆರಂಗ ಸಾವನ್ನಪ್ಪಿದೆ. ಈ ಮೂಲಕ ಒಂದೇ ವಾರದಲ್ಲಿ ಮರಿಯಾನೆ ಸೇರಿ ಮೂರು ಆನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.
35 ವರ್ಷ ಪ್ರಾಯದ ರಂಗ ತನ್ನ ಮೈಕಟ್ಟಿನಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿ ಎಲ್ಲರನ್ನೂ ಆಕರ್ಷಿಸಿದ್ದ. ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆಸಲಾಗುತ್ತಿದ್ದ ಆನೆಗಳ ಕ್ರೀಡಾಕೂಟದಲ್ಲಿಯೂ ರಂಗ ಎಲ್ಲರ ಮನಗೆದ್ದಿದ್ದ. ಶುಕ್ರವಾರ ರಾತ್ರಿ ಕಾಡಾನೆ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಒಳಗಾಗಿ ಕಾಡಿನಲ್ಲಿಯೇ ಸಾವನ್ನಪ್ಪಿದ್ದಾನೆ.
ಸಕ್ರೆಬೈಲು ಕ್ಯಾಂಪ್‌ನಲ್ಲಿ ಗೀತಾ ಆನೆಗೆ ಜನಿಸಿದ್ದ ರಂಗ ಅತ್ಯಂತ ಬಲಶಾಲಿಯಾಗಿದ್ದ. ಮಾವುತರು ಶನಿವಾರ ಬೆಳಗ್ಗೆ ಆನೆಗಳನ್ನು ಕರೆತರಲು ಹೋದಾಗ ಸಕ್ರೆಬೈಲು ಕಾಡಿನ ಮೂರು ಕಿಲೋಮೀಟರ್ ದಟ್ಟಡವಿಯ ಒಳಗೆ ಆನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ‌ ಹಿರಿಯ ಅಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅರಣ್ಯದಲ್ಲಿ ಮೂರು ಕಾಡಾನೆಗಳಿದ್ದು, ಅವುಗಳಿಂದಲೇ ರಂಗನ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ. ಎರಡು ವರ್ಷದ ಹಿಂದೆ ಇದೇ ಭಾಗದಲ್ಲಿ ಕಾಡಾನೆಗಳ ದಾಳಿಗೆ ನೋ ಟಸ್ಕರ್ ಎಂಬ ಆನೆ ಮೃತಪಟ್ಟಿತ್ತು.
ಸಕಲೇಶಪುರ ತಾಲೂಕಿನ ಮಳಲಿ ಕಾಫಿತೋಟದಿಂದ ಬಂದಿದ್ದ ಮರಿಯಾನೆ ಅ.17ರಂದು ಬಹುಅಂಗಾಂಗ ವೈಲಫ್ಯದಿಂದ ಮೃತಪಟ್ಟರೆ, ಅ.20ರಂದು ಏಕದಂತ ಆನೆ ಹೃದಯಾಘಾತ ಮತ್ತು ಲಿವರ್ ಸಮಸ್ಯೆಯಿಂದ ಕಾಡಿನಲ್ಲೇ ಮೃತಪಟ್ಟಿತ್ತು. ಇದೀಗ ಆನೆ ರಂಗನೂ ಸಾವನಪ್ಪಿದ್ದಾನೆ.
ಕರೊನಾ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ! ನೇರ ಸಂಪರ್ಕದಿಂದಲೇ ಈ ರೋಗ ಹರಡುತ್ತೆ

ಮಗಳನ್ನೇ ಮರ್ಯಾದಾ ಹತ್ಯೆ ಮಾಡಿದ ಅಪ್ಪ-ಮಕ್ಕಳು! ಈ ನಡುವೆ ಗ್ಯಾಂಗ್​ ರೇಪ್​ ವದಂತಿ ಹಬ್ಬಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
