ಚಾಮರಾಜನಗರ:‌ನೆರೆಯ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗೆ ಕಾಡಾನೆಗಳ ಗುಂಪು ಲಗ್ಗೆ ಇಟ್ಟಿತು.‌ ಇದರ‌ ಅರಿವಿಲ್ಲದೆ‌‌ ರಸ್ತೆ ಬದಿಯಲ್ಲೇ ನಿಂತ ಮಾನಸಿಕ ಅಸ್ವಸ್ಥನ ಸಮೀಪಕ್ಕೆ‌ ಆನೆಗಳು ಧಾವಿಸಿದವು.‌ ಸ್ಥಳದಲ್ಲಿದ್ದ‌ ವಾಹನ ಸವಾರ ಪ್ರಾಣ ಉಳಿಸಿಕೊಳ್ಳುವಂತೆ ಕೂಗಿ‌ದ… ಬನ್ನಾರಿ ಅಮ್ಮ ಅವನನ್ನು ನೀನೇ ಕಾಪಾಡಬೇಕೆಂದು ಪ್ರಾರ್ಥಿಸಿದ. ಆದರೂ ಆತ ನಿಂತ ಜಾಗ ಬಿಟ್ಟು ಕದಲಲಿಲ್ಲ.‌ ಆನೆಗಳು ಇನ್ನೂ ಹತ್ತಿರ ಬರುತ್ತಿದ್ದಂತೆ‌ ಬೆಚ್ಚಿದ ಮಾನಸಿಕ ಅಸ್ವಸ್ಥ ಮುಂದೇನಾದ ಗೊತ್ತಾ?
ತಮಿಳುನಾಡಿನ ಸತ್ಯಮಂಗಲಂ ಹುಲಿ‌ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಬಣ್ಣಾರಿ ಅರಣ್ಯ ಪ್ರದೇಶದ ದಿಂಬಂ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕೇರಳ ಮತ್ತು ತಮಿಳಿನಾಡಿನ ಬುದ್ಧಿಮಾಂದ್ಯರು ರಾಷ್ಟ್ರೀಯ ಹೆದ್ದಾರಿ, ಅರಣ್ಯ ಪ್ರದೇಶಗಳಲ್ಲಿ ಅಲೆಯುತ್ತಾ ಅಪಘಾತ, ಆನೆ ದಾಳಿಗೆ ಬಲಿಯಾಗಿ ಅನಾಥ ಶವಗಳಾಗಿ ಮಣ್ಣಾಗುವ ಘಟನೆಗಳು ಇಲ್ಲಿ ಸಹಜವಾಗಿಬಿಟ್ಟಿದೆ. ಈ ಮಾನಸಿಕ ಅಸ್ವಸ್ಥನೂ ಇದೇ ರೀತಿ ಈ ಭಾಗದಲ್ಲಿ ಅಲೆಯುತ್ತಿದ್ದಾನೆ.
ದಿಂಬಂನಲ್ಲಿ ಆನೆಗಳ ಮುಂದೆ ನಿಂತ ಮಾನಸಿಕ ಅಸ್ವಸ್ಥನ ಆಯಸ್ಸು ಗಟ್ಟಿ ಇತ್ತು ಅನ್ನಿಸುತ್ತೆ. ಆನೆಗಳು ಸಮೀಪಕ್ಕೆ ಬರುತ್ತಿದ್ದಂತೆ ಮಾನಸಿಕ ಅಸ್ವಸ್ಥ ಹಿಂದಕ್ಕೆ ಹೆಜ್ಜೆ ಇಟ್ಟು ಜೀವ ಉಳಿಸಿಕೊಂಡಿದ್ದಾನೆ. ಘಟನೆ ಬಳಿಕ ಆತನನ್ನು ಪ್ರಾಣ ಉಳಿಸಿಕೊಳ್ಳಲು ಕೂಗಿದ್ದ ವಾಹನ ಸವಾರ ಬಣ್ಣಾರಿ ಎಂಬುವವರು ಆತನನ್ನು ಚೆಕ್ ಪೋಸ್ಟ್ ಬಳಿಗೆ ಕರೆದುಕೊಂಡು ಹೋಗಿ ಬಿಟ್ಟಿರುವುದಾಗಿ ತಿಳಿದುಬಂದಿದೆ.
5ಕ್ಕೂ ಹೆಚ್ಚು ಆನೆಗಳು ರಸ್ತೆಗೆ ಲಗ್ಗೆ ಇಟ್ಟಾಗ ಮುಂದೆ ಸಾಗದೆ ನಿಂತ ವಾಹನ ಸವಾರನೊಬ್ಬ ಆನೆಗಳು- ಮಾನಸಿಕ ಅಸ್ವಸ್ಥನ ಮುಖಾಮುಖಿಯಾದ ವಿಡಿಯೋ ಅನ್ನು ಚಿತ್ರೀಕರಿಸುತ್ತಾ ಪ್ರಾಣ ಉಳಿಸಿಕೊಳ್ಳಲು‌ ಕೂಗಿ ಹೇಳಿದ್ದಾನೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡುವವರಿಗೆ ಆನೆಗಳಿಗೆ ಎದುರಾಗಿ ನಿಲ್ಲುವ ಮಾನಸಿಕ ಅಸ್ವಸ್ಥನ ಕಥೆ ಮುಂದೇನಾಗುವುದೋ ಎಂಬ ಆತಂಕವೂ ಕಾಡದೆ ಇರದೆ.
https://www.facebook.com/VVani4U/videos/690893381838762
ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

‘ಧಮ್ಕಿಗಿಮ್ಕಿ ಹಾಕಿದ್ರೆ ಪೊಲೀಸ್​ ಸ್ಟೇಷನ್​ ಮುಂದೆಯೇ ಚುನಾವಣೆ! ಮುನಿರತ್ನಗೆ ಇದು ಕೊನೇ ವಾರ್ನಿಂಗ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
