ಸುಬ್ರಹ್ಮಣ್ಯ/ಕಡಬ:ತಮ್ಮ ಬಳಗದ ಸದಸ್ಯನೊಬ್ಬನನ್ನು ಕಳೆದುಕೊಂಡ ಕಾಡಾನೆಗಳು ಹುಡುಕಿಕೊಂಡು ಬಂದು ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ರೋದಿಸುತ್ತಿದ್ದ ಮನ ಕಲಕುವ ಘಟನೆ ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ಸುಮಾರು 40 ವರ್ಷ ಪ್ರಾಯದ ಗಂಡಾನೆಯೊಂದು ಬೈನೆ ಮರವನ್ನು ಎಳೆದಾಗ ಅದರ ಗರಿಗಳು ವಿದ್ಯುತ್ ತಂತಿಗೆ ತಾಗಿ, ಆನೆ ಸ್ಥಳದಲ್ಲೇ ಮೃತಪಟ್ಟಿತ್ತು. ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುಂಡಿ ತೋಡಿ ಮೃತದೇಹದ ದಹನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕೆಲವು ದಿನಗಳಿಂದ ಇದು ಸಾಗಿತ್ತು.
ಇದನ್ನೂ ಓದಿಓಪನ್ ಏರ್ ಥಿಯೇಟರ್ ಪಾರ್ಟಿಯಲ್ಲೂ ಡ್ರಗ್ಸ್ ನಶೆ!
ಈ ನಡುವೆ, ಮೂರು ಕಾಡಾನೆಗಳು ಆನೆಯನ್ನು ದಹನ ಮಾಡುತ್ತಿದ್ದ ಸ್ಥಳಕ್ಕೆ ಪ್ರತಿದಿನ ರಾತ್ರಿ ಬಂದು ಘೀಳಿಡುತ್ತಿದ್ದವು, ಸ್ಥಳದಲ್ಲಿ ಸುತ್ತಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳು ಕೊಂಬಾರಿನ ಬೊಟ್ಟಡ್ಕ ಮೂಲಕ ಸ್ಥಳೀಯರ ತೋಟಕ್ಕೆ ಬಂದು ಕಾಡಾನೆ ಮೃತಪಟ್ಟ ಜಾಗಕ್ಕೆ ಬಂದಿವೆ. ಅಲ್ಲಿ ಘೀಳಿಡುತ್ತಾ ತಮ್ಮ ಬೇಸರ ವ್ಯಕ್ತಪಡಿಸುತ್ತಿವೆ. ಮುಗೇರಡ್ಕ ಶಾಲಾ ವಠಾರದ ತೆಂಗಿನಮರವನ್ನು ಉರುಳಿಸಿ ತಿಂದಿದ್ದು, ಉರುಂಬಿ, ಪುತ್ತಿಲ, ಬೊಟ್ಟಡ್ಕ ಭಾಗದಲ್ಲಿ ಸಂಚರಿಸಿವೆ.
ಭಾನುವಾರ ಸಂಪೂರ್ಣ ದಹನವಾದ ಬಳಿಕ ಜೆಸಿಬಿ ಮೂಲಕ ಗುಂಡಿಗೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಹಾಗಾಗಿ ಭಾನುವಾರ ರಾತ್ರಿ ಆನೆಗಳು ಬಂದು ಘೀಳಿಡುವ ಶಬ್ದ ಕೇಳಿಸಿಲ್ಲ ಎನ್ನುತ್ತಾರೆ ಸ್ಥಳೀಯರು.
ಇಂದಿನಿಂದ ನಂದಿಬೆಟ್ಟ ಅನ್‌ಲಾಕ್, ಆದ್ರೆ ಪ್ರವಾಸಿಗರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 2 =
Remember me
