ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಚರ್ಚೆಯ ಮುನ್ನೆಲೆಗೆ ಬಂದಿದ್ದ ‘ಬ್ರ್ಯಾಂಡ್​ ಬೆಂಗಳೂರು’ ಪರಿಕಲ್ಪನೆ ಅನುಷ್ಠಾನಕ್ಕೀಗ ರಾಜ್ಯ ಸರ್ಕಾರ ಗಮನಹರಿಸಿದೆ. ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಕಲ್ಪನೆಯ ವಿನ್ಯಾಸದ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿದ ವಿವಿಧ ಯೋಜನೆಗಳು ಮತ್ತದರ ದೂರಗಾಮಿ ಪ್ರಯೋಜನಗಳನ್ನು ವಿವರಿಸಲಾಯಿತು.
ಪರಿಕಲ್ಪನೆ ಏನು?:ಹೊರ ವರ್ತಲಗಳ ರಸ್ತೆ, ಸ್ಕೈಡೆಕ್ ನಿರ್ವಣ, ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿ, ಹೈಡೆನ್ಸಿಟಿ ಕಾರಿಡಾರ್, ಟನೆಲ್ ರಸ್ತೆಗಳ ನಿರ್ವಣ, ರಾಜಕಾಲುವೆ ಬಫರ್ ಜೋನ್​ನಲ್ಲಿ ರಸ್ತೆ ನಿರ್ಮಾಣ ಸಂಚಾರ ನಿರ್ವಹಣೆ, ಮೆಟ್ರೋ, ಮಹಾ ಯೋಜನೆ ಮುಂತಾದವುಗಳನ್ನು ವಿಶಿಷ್ಟ ಪರಿಕಲ್ಪನೆ ಒಳಗೊಂಡಿದೆ. ‘ಬ್ರಾ್ಯಂಡ್ ಬೆಂಗಳೂರು’ ಜಾರಿಗೆ ಬೇಕಾದ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಕೆಲ ತೆರಿಗೆಗಳ ಹೆಚ್ಚಳ, ಹೊಸ ತೆರಿಗೆಗಳನ್ನು ವಿಧಿಸುವುದು ಸೇರಿ ವಿವಿಧ ಮಾಗೋಪಾಯಗಳು ಪ್ರಸ್ತಾಪವಾದವೆಂದು ಮೂಲಗಳು ತಿಳಿಸಿವೆ. ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಅಧಿಕಾರಿಗಳು ನೀಡಿದ ವಿವರಣೆಯನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಡಳಿತಾತ್ಮಕ, ತಾಂತ್ರಿಕ, ಅನುಷ್ಠಾನದ ಹೊಣೆ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ.
ಜಾಗವೇ ಗುರುತಿಸಿಲ್ಲ:ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿ ಕೇಂದ್ರಗಳನ್ನು ನಗರದ ಹೊರ ಭಾಗದಲ್ಲಿ ಸ್ಥಳಾಂತರಿಸಲು ಇನ್ನೂ ಜಾಗವೇ ಗುರುತಿಸಿಲ್ಲ. ಇನ್ನು ಟೆಂಡರ್ ಕರೆದು, 30 ವರ್ಷಗಳಿಗೆ ಕಪ್ಪುಪಟ್ಟಿಯಲ್ಲಿರುವ ಕಂಪನಿಗೆ ಗುತ್ತಿಗೆ ನೀಡಲು ಹೇಗೆ ಸಾಧ್ಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸದ ವಿಲೇವಾರಿ ಟೆಂಡರ್ ವಿಚಾರದಲ್ಲಿ ನಾನು 15 ಸಾವಿರ ಕೋಟಿ ರೂ. ಲಂಚ ಪಡೆದಿದ್ದೇನೆ ಎಂದು ಕೇಂದ್ರ ಮಂತ್ರಿಯೊಬ್ಬರು ಆರೋಪಿಸಿದ್ದಾರೆ. ಆದರೆ ಕಸ ವಿಲೇವಾರಿ ಮಾಡುವ ಜಾಗಗಳ ಹುಡುಕಾಟದಲ್ಲಿದ್ದೇವೆ. ಜಾಗ ನಿಗದಿಗೆ ನ್ಯಾಯ ಪಂಚಾಯಿತಿ ಮಾಡುತ್ತಾ ಒದ್ದಾಡುತ್ತಿದ್ದೇವೆ. ಟೆಂಡರ್ ಕರೆಯದೆ ಬ್ಲ್ಯಾಕ್ ಲಿಸ್ಟ್​ನಲ್ಲಿರುವ ಕಂಪನಿಗೆ ಗುತ್ತಿಗೆ ನೀಡಲು ಹೇಗೆ ಸಾಧ್ಯ? ಈ ವಿಚಾರ ಕೋರ್ಟ್​ನಲ್ಲಿದೆ ಎಂದರು. ಕಳೆದ ಮೂರು ದಿನಗಳಿಂದ ಮಂಡೂರಿನಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದಕ್ಕೆ ಪರ್ಯಾಯ ಜಾಗ ಹುಡುಕುತ್ತಿದ್ದು, ನೈಸ್ ರಸ್ತೆ ಬಳಿ ಜಾಗ ಪಡೆಯುವುದಕ್ಕಾಗಿ ನೈಸ್ ಸಂಸ್ಥೆ ಜತೆಗೆ ಮಾತನಾಡುತ್ತಿದ್ದೇನೆ. ಬೆಂಗಳೂರಿನ ಇನ್ನೂ 2-3 ಕಡೆಯಿರುವ ಕಸ ವಿಲೇವಾರಿ ಘಟಕಗಳನ್ನು ಹೊರಗೆ ಸ್ಥಳಾಂತರಿಸಬೇಕಾಗಿದೆ. ಸಮಸ್ಯೆ ನಿಭಾಯಿಸುವ ಬಗ್ಗೆ ತಿಳಿಯಲು ಕೆಲವು ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲಿಸಿರುವೆ, ಈ ಬಗ್ಗೆ ಮುಖ್ಯಮಂತ್ರಿ ಜತೆಗೆ ರ್ಚಚಿಸಿ, ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ, ನಂತರದ ಸದನದ ಮುಂದಿಟ್ಟು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಹೊರ ವರ್ತಲ ರಸ್ತೆ ನಿರ್ವಣಕ್ಕೆ ನಾಲ್ಕೈದು ಬಾರಿ ಟೆಂಡರ್ ಕರೆದರೂ ವಿಫಲವಾಗಿದೆ. ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ ವಿವಿಧ ಸಾಧ್ಯತೆಗಳು ಹಾಗೂ ಸಂಪನ್ಮೂಲ ಕ್ರೋಡೀಕರಣದ ಅವಕಾಶಗಳನ್ನು ಪರಿಶೀಲಿಸಿ ವಿವರವಾದ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಬ್ರ್ಯಾಂಡ್​ ಬೆಂಗಳೂರು’ ಮೂಲಕ ಬಂದಿರುವ ಸಲಹೆಗಳನ್ನು ರ್ಚಚಿಸುತ್ತೇವೆ. ಈ ವಿಷಯದಲ್ಲಿ ಏಕಾಏಕಿ ನಿರ್ಧಾರ ಕೈಗೊಳ್ಳಲಾಗದು. ಎಲ್ಲರ ಜತೆ ರ್ಚಚಿಸಿ ತೀರ್ಮಾನ ಮಾಡಬೇಕಾಗುತ್ತದೆ.
| ಡಿ.ಕೆ. ಶಿವಕುಮಾರ್ ಡಿಸಿಎಂ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ವಿಧೇಯಕಕ್ಕೆ ತಡೆ ಸೂಕ್ತ ತೀರ್ಮಾನ: ಸಚಿವ ಎಂ ಬಿ ಪಾಟೀಲ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × four =
Remember me
