ಧಾರವಾಡ:ಇತ್ತೀಚೆಗೆ ಜಾವಿದ್​​ ಎನ್ನುವ ಕಳ್ಳನೋರ್ವ ಟವರ್ ಏರಿ ಹೈಡ್ರಾಮಾ ಮಾಡಿದ್ದ. ಈಗ ಅದೇ ಟಾವರ್ ಏರಿರುವ ಪ್ರತಿಭಟನಕಾರ ಕೈಯಲ್ಲಿ ಬೇಡಿಕೆ ಫಲಕ ಹಿಡಿಯುವ ಮೂಲಕ ತಮ್ಮ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.
ಅಷ್ಟಕ್ಕೂ ಈ ಹೈಡ್ರಾಮಾಗೆ ಕಾರಣವಾಗಿದ್ದು ಒಂದು ಗಂಭೀರ ಸಮಸ್ಯೆ. ನೀರು ಸರಬರಾಜು ನೌಕರರಿಗೆ ಕಳೆದ ಏಳು ತಿಂಗಳಿಂದ ಸಂಬಳವನ್ನು ಪಾವತಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಸಂಬಳವನ್ನು ಕೂಡಲೇ ನೀಡುವಂತೆ ಆಗ್ರಹಿಸಿದ್ದ ನೌಕರರು ಎಲ್ ಆ್ಯಂಡ್ ಟೀ ಕಂಪನಿ ವಿರುದ್ಧ ಮುಷ್ಕರ ನಡೆಸಿದ್ದರು.
ನೀರು ಸರಬರಾಜು ನೌಕರರ ಮುಷ್ಕರ ತೀವ್ರ ಸ್ವರೂಪಕ್ಕೆ ತಿರುಗಿದ್ದು ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದೆ. ಪಾಲಿಕೆ ಕಚೇರಿ ಮುಂದೆ ನೌಕರರು ಪ್ರತಿಭಟಿಸುತ್ತಿದ್ದಾರೆ. ಬಹುಷಃ ಈ ಯಾವುದೇ ವಿಧಾನಗಳಿಂದ ಫಲ ಸಿಗುವುದಿಲ್ಲ ಎಂದುಕೊಂಡ ನೌಕರನೋರ್ವ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಟವರ್ ಏರಿದ್ದಾರೆ.
ನಗರದ ಆಲೂರು ವೆಂಕಟರಾವ್ ವೃತ್ತದ ಬಳಿ ಈ ಘಟನೆ ನಡೆದಿದೆ. ವೃತ್ತದ ಬಳಿ ನೌಕರರು ಪ್ರತಿಭಟನೆಗೆ ಮುಂದಾದಾಗ ಓರ್ವ ನೌಕರ ಟವರ್ ಏರಿದ್ದಾರೆ. ಟವರ್​ ಏರಿರುವವರನ್ನು ಮಲ್ಲಿಕಾರ್ಜುನ ಗುಮ್ಮಗೋಳ ಎಂದು ಗುರುತಿಸಲಾಗಿದೆ. ಸದ್ಯ ಪ್ರತಿಭಟನೆ ಹಾಗೂ ನೌಕರನೋರ್ವ ಫಲಕ ಹಿಡಿದು ಟವರ್​ ಏರಿರುವ ಕಾರಣ ಸ್ಥಳದ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one + 5 =
Remember me
