ರುದ್ರಣ್ಣ ಹರ್ತಿಕೋಟೆ
ಯಾವುದೆಲ್ಲ ಆನ್​ಲೈನ್?* ಮುಂಬಡ್ತಿ, ಸೇವಾ ಜ್ಯೇಷ್ಠತೆಗೆ ಸಂಬಂಧಿಸಿದಂತೆ ಇಲಾಖಾ ಪರೀಕ್ಷೆ ಉತ್ತೀರ್ಣ, ಕನಿಷ್ಠ ಸೇವಾವಧಿ, ಇಲಾಖೆ ಅಥವಾ ನ್ಯಾಯಾಂಗ ವಿಚಾರಣೆ, ನೌಕರರ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳ ಸಂಪೂರ್ಣ ಮಾಹಿತಿ.* ಕಾಯಂಪೂರ್ವ ಸೇವಾವಧಿ ಘೋಷಣೆ, ವೇತನ ಬಡ್ತಿಗೆ ಅಗತ್ಯ ಮಾಹಿತಿಗಳು.* ಜಿಪಿಎಫ್, ಮುಂಗಡ ಪಡೆದಿರುವುದು, ಪಾವತಿ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳು.*ಸಾಮೂಹಿಕ ವಿಮೆ ಯೋಜನೆಗೆ ಸಂಬಂಧಿಸಿದ ಮಾಹಿತಿ*ಗೃಹ ನಿರ್ಮಾಣ, ವಾಹನ ಖರೀದಿ ಹಾಗೂ ಇತರೆ ಮುಂಗಡಗಳ ಬಗ್ಗೆ ಮಾಹಿತಿ.*ನಿವೃತ್ತಿ ಸೌಲಭ್ಯ ಸೇರಿದಂತೆ ಪತ್ರಾಂಕಿತ ಅಧಿಕಾರಿ ನೀಡುವ ಎನ್​ಓಸಿಗಳ ವಿವರ*ವೈದ್ಯಕೀಯ ವೆಚ್ಚ ಹಾಗೂ ಮರುಪಾವತಿಗೆ ಸಂಬಂಧಿಸಿದ ವಿವರಗಳು*ಎಲ್​ಟಿಸಿ, ಎಚ್​ಟಿಸಿಗಳ ಮಂಜೂರಾತಿ*ಪ್ರಥಮ ವೇತನ ಡ್ರಾ ಮಾಡಲು ದೃಢೀಕರಣ*ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಲು ಎನ್​ಓಸಿ*ಅಂತಿಮ ವೇತನ ಪ್ರಮಾಣಪತ್ರ ಸಲ್ಲಿಸುವುದು*ನೌಕರರ ವೇತನದ ವಿವರ ಇಮೇಲ್ ಅಥವಾ ಎಸ್​ಎಂಎಸ್ ಮೂಲಕ ರವಾನೆ*ಪಾಸ್​ಪೋರ್ಟ್ ಪಡೆಯಲು, ನವೀಕರಣಕ್ಕೆ ಎನ್​ಓಸಿ ನೀಡುವುದು*ವಿದೇಶ ಪ್ರವಾಸ ಅಥವಾ ಉನ್ನತ ವ್ಯಾಸಂಗಕ್ಕೆ ಹೋಗುವವರಿಗೆ ಎನ್​ಓಸಿ*ನೌಕರರ ವಿವಿಧ ರಜೆಗಳ ಮಂಜೂರಾತಿ*ಪ್ರಭಾರ ಭತ್ಯೆ ಮಂಜೂರಾತಿ*ಮಹಿಳಾ ನೌಕರರ ಹೆರಿಗೆ ರಜೆ, ಪುರುಷ ನೌಕರರ ಪಿತೃತ್ವ ರಜೆ ಮಂಜೂರು*ನೌಕರರ ನಿಯೋಜನೆ, ಮುಂಬಡ್ತಿ, ವರ್ಗಾವಣೆ, ಶಿಸ್ತುಕ್ರಮ, ನಾಮ ನಿರ್ದೇಶನ, ವೇತನ ವಿವರ, ಉನ್ನತ ವ್ಯಾಸಂಗ, ಇಲಾಖಾ ಪರೀಕ್ಷೆ ಇತರೆ ಮಾಹಿತಿ*ಅನುಕಂಪದ ಆಧಾರದ ನೇಮಕಾತಿ ಪ್ರಕ್ರಿಯೆ*ಮಿತ ಕುಟುಂಬ ಯೋಜನೆಯ ವೈಯಕ್ತಿಕ ಭತ್ಯೆ ಹಾಗೂ ಅಂಗವಿಕಲ ಭತ್ಯೆ ಮಂಜೂರು*ನೌಕರರ ಚರ ಮತ್ತು ಸ್ಥಿರಾಸ್ತಿಗಳ ವಿವರ ದಾಖಲು*ಸ್ಥಿರ ಹಾಗೂ ಚರಾಸ್ತಿಗಳ ಖರೀದಿಗೆ ಅನುಮತಿ
ಬೆಂಗಳೂರು:ರಾಜ್ಯ ಸರ್ಕಾರ ಹೊಸ ವರ್ಷದ ಕೊಡುಗೆಯಾಗಿ, ತನ್ನ ನೌಕರರಿಗೆ ಸಿಗುವ ಎಲ್ಲ ಸೇವೆಗಳನ್ನು ಆನ್​ಲೈನ್ ಮೂಲಕ ನೀಡಲು ಸಜ್ಜಾಗುತ್ತಿದೆ. ಇದರೊಂದಿಗೆ ಅಧಿಕಾರಿಶಾಹಿಯ ರೆಡ್​ಟೇಪಿಸಂ ವ್ಯವಸ್ಥೆಗೆ ಕಡಿವಾಣ ಹಾಕಲು ತೀರ್ವನಿಸಿದೆ.
ಸದ್ಯ ಸರ್ಕಾರ ತನ್ನ ನೌಕರರಿಗೆ ಒಟ್ಟಾರೆ 32 ರೀತಿಯ ಸೇವೆಗಳನ್ನು ನೀಡುತ್ತಿದೆ. ಆದರೆ ಇವುಗಳನ್ನು ಪಡೆಯಲು ನೌಕರರು ಇಲಾಖೆ ಮುಖ್ಯಸ್ಥರ ಬಳಿ ಅಂಗಲಾಚಬೇಕಾದ ಪರಿಸ್ಥಿತಿ ಇದೆ. ಸರ್ಕಾರಿ ನೌಕರರ ಸೇವಾ ಮಾಹಿತಿ, ಆಡಳಿತಕ್ಕೆ ಸಂಬಂಧಿಸಿದ ವಿವರ, ವೇತನ ಹಾಗೂ ಭತ್ಯೆಗಳ ಮಾಹಿತಿಗಳೆಲ್ಲ ಒಂದೇ ಸೂರಿನಲ್ಲಿ ಸಿಗುವಂತೆ ಮಾಡಲು ಸಾಫ್ಟ್​ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ.
ನೌಕರರ ಹೋರಾಟ:ತಮ್ಮ ಹಕ್ಕು ಪಡೆಯುವುದಕ್ಕಾಗಿ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಬಲಯುತರಿಗಷ್ಟೇ ಯಾವುದೇ ಕಷ್ಟವಿಲ್ಲದೆ ಸೇವೆ ಲಭ್ಯವಾಗುತ್ತವೆ. ಇದನ್ನು ಮನಗಂಡು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಿದೆ.
ತಿಂಗಳೊಳಗೆ ಸಿದ್ಧಸಿಎಂ ಯಡಿಯೂರಪ್ಪ ಸೂಚನೆ ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು ಹಾಗೂ ಇ-ಆಡಳಿತ ಇಲಾಖೆಗಳ ಅಧಿಕಾರಿಗಳು ಸರ್ಕಾರಿ ನೌಕರರ ಸಂಘದ ಜತೆ ಕಳೆದ 3 ತಿಂಗಳಿನಿಂದ ಹಲವು ಸಭೆ ನಡೆಸಿದ್ದಾರೆ. ಹಣಕಾಸು ಇಲಾಖೆಯ ವೆಚ್ಚ ವಿಭಾಗದ ಕಾರ್ಯದರ್ಶಿ ಪಿ.ಸಿ. ಜಾಫರ್ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಮೊಬೈಲ್ ಆಪ್, ಸಾಫ್ಟ್​ವೇರ್ ಅನ್ನು ಸರ್ಕಾರದಲ್ಲಿರುವ ಏಜೆನ್ಸಿಗಳ ಮೂಲಕವೇ ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಶೇ.60 ಕಾರ್ಯ ಮುಗಿದಿದೆ. ಒಂದು ತಿಂಗಳೊಳಗೆ ಸಾಫ್ಟ್​ವೇರ್ ಸಿದ್ಧವಾಗಲಿದೆ.
ಖಜಾನೆ-2ರಲ್ಲಿಲ್ಲ ಮಾಹಿತಿಸುಗಮ ಆಡಳಿತ ನಿರ್ವಹಣೆ, ನೌಕರರ ವೇತನ ಭತ್ಯೆಗೆ ಸಂಬಂಧಿಸಿದಂತೆ ಎಚ್​ಆರ್​ಎಂಎಸ್ ವ್ಯವಸ್ಥೆ ಇದೆ. ಖಜಾನೆ- 2 ಸಹ ಮಾಡಲಾಗಿದೆ. ಆದರೆ ಅದರಲ್ಲಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಸಿಗುತ್ತದೆ. ನೌಕರರ ಸೇವೆಗೆ ಸಂಬಂಧಿಸಿದ ಮಾಹಿತಿ ಅಲ್ಲಿಲ್ಲ. ಇದರಿಂದ ನೌಕರರು ನಿಗದಿತ ಅವಧಿಯಲ್ಲಿ ಸೌಲಭ್ಯ ಪಡೆಯಲಾಗುತ್ತಿಲ್ಲ.
ಸದ್ಯ ಹೇಗಿದೆ ವ್ಯವಸ್ಥೆ?ಕೆಳಹಂತದ ನೌಕರರು ಏನಾದರೂ ಸೌಲಭ್ಯ ಪಡೆಯಬೇಕಾದರೆ ಅವರ ಅರ್ಜಿ ತಾಲೂಕು, ಜಿಲ್ಲಾ ಕಚೇರಿಗಳಿಗೆ ಬಂದು ಒಪ್ಪಿಗೆ ಆದ ನಂತರ ಸರ್ಕಾರದ ಅನುಮತಿ ಪಡೆಯಬೇಕು. ನೌಕರರು ಅಲ್ಲೆಲ್ಲ ಅಲೆದಾಡಬೇಕಿದೆ.
ಹೇಗಿರಲಿದೆ ಹೊಸ ವ್ಯವಸ್ಥೆಸಾಫ್ಟ್​ವೇರ್ ಅಭಿವೃದ್ಧಿ ಬಳಿಕ ನೌಕರರು ಯಾವುದೇ ಕಚೇರಿಗೆ ಅಲೆದಾಡಬೇಕಾಗಿಲ್ಲ. ಆನ್​ಲೈನ್​ನಲ್ಲಿ ಅರ್ಜಿ ಅಪ್​ಲೋಡ್ ಮಾಡುತ್ತಿದ್ದಂತೆ, ಅದು ನೇರವಾಗಿ ಸಂಬಂಧಿಸಿದವರ ಗಮನಕ್ಕೆ ಬರುತ್ತದೆ. ಅವರು ಒಪ್ಪಿಗೆ ನೀಡುತ್ತಿದ್ದಂತೆ ನೌಕರರಿಗೆ ಮಾಹಿತಿ ಹೋಗುತ್ತದೆ. ವೇತನ ಹಾಗೂ ಭತ್ಯೆಗಳ ಬಗ್ಗೆ ಈಗ ಬ್ಯಾಂಕ್​ನಿಂದ ಎಸ್​ಎಂಎಸ್ ಬರುತ್ತದೆ, ಮುಂದೆ ಸರ್ಕಾರದಿಂದ ಬ್ಯಾಂಕ್​ಗೆ ಹೋಗುತ್ತಿದ್ದಂತೆ ಮಾಹಿತಿ ನೌಕರರಿಗೆ ಸಿಗುತ್ತದೆ. ಒಟ್ಟಾರೆ ವ್ಯವಸ್ಥೆ ಇ-ಆಫೀಸ್ ರೀತಿಯಲ್ಲಿ ಕಾಗದರಹಿತವಾಗಿರಲಿದೆ.
ಸಾಫ್ಟ್​ವೇರ್ ವಿಲೀನಸದ್ಯ ಎಚ್​ಆರ್​ಎಂಎಸ್ ಇದ್ದು, ಕೆಜಿಐಡಿ, ಜಿಪಿಎಫ್ ಪ್ರತ್ಯೇಕವಾಗಿವೆ. ಆದರೆ ಮುಂದೆ ಎಲ್ಲ ವ್ಯವಸ್ಥೆಗಳು ನೂತನ ಸಾಫ್ಟ್​ವೇರ್​ನಲ್ಲೇ ಸಿಗಲಿವೆ.
ನೌಕರರ ದಿನವರ್ಷದಲ್ಲಿ ಒಂದು ದಿನವನ್ನು ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲು ಸರ್ಕಾರ ಒಪ್ಪಿದೆ. ನೌಕರರ ಸಂಘ ಸ್ಥಾಪನೆಯಾದದ್ದು 1920ರ ಮೇ 7ರಂದು. ಅದೇ ದಿನವನ್ನು ನೌಕರರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಆಚರಣೆ ಸ್ವರೂಪ ನಿರ್ಧಾರವಾಗಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nine =
Remember me
