ಬೆಂಗಳೂರು:ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಶುಕ್ರವಾರ ವಾರ್ಷಿಕ ಶೇ.17ರಷ್ಟು ವೇತನ ಹೆಚ್ಚಳ ಜತೆಗೆ ವಾರದಲ್ಲಿ ಎರಡು ದಿನ ರಜೆ ಒಪ್ಪಿಗೆ ಸೂಚಿಸಿವೆ.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(ಐಬಿಎ) ಮತ್ತು ಬ್ಯಾಂಕ್ ಒಕ್ಕೂಟಗಳು ವಾರ್ಷಿಕ ವೇತನವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ. 17ರಷ್ಟು ವೇತನ ಹೆಚ್ಚಳದ ಪ್ರಸ್ತಾವನೆಗೆ ಬ್ಯಾಂಕ್ ಒಕ್ಕೂಟಗಳು ಶುಕ್ರವಾರ ಒಪ್ಪಿಗೆ ಸೂಚಿಸಿವೆ. ಈ ನಿಟ್ಟಿನಲ್ಲಿ ಒಕ್ಕೂಟಗಳು ಒಪ್ಪಂದ ಮಾಡಿಕೊಂಡಿವೆ. ಈ ನಿರ್ಧಾರದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ 8 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದೆ. ಹೊಸದಾಗಿ ಹೆಚ್ಚಿಸಿದ ವೇತನದಿಂದ ಬ್ಯಾಂಕ್‌ಗಳಿಗೆ ವರ್ಷಕ್ಕೆ 8,284 ಕೋಟಿ ರೂಪಾಯಿ ಹೊರೆ ಬೀಳಲಿದೆ.
ವಾರದಲ್ಲಿ ಎರಡು ದಿನ ರಜೆ ನೀಡಬೇಕೆಂಬ ಆಂದೋಲನವೂ ನಡೆದಿತ್ತು. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ಎಲ್ಲಾ ಶನಿವಾರಗಳನ್ನು ರಜೆ ಎಂದು ಪರಿಗಣಿಸಲು ಒಪ್ಪಿಗೆ ನೀಡಿದರಿಂದ ಬ್ಯಾಂಕ್‌ಗಳು ವಾರದಲ್ಲಿ 5 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು.
ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನ ಅನಾರೋಗ್ಯ ರಜೆ ತೆಗೆದುಕೊಳ್ಳಬಹುದು. ಆದರೆ ಮೊದಲಿನಂತೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ.
“IBA ಮತ್ತು ಯುಎಫ್‌ಬಿಯು  ಎಐಬಿಓಎ ಎಐಬಿಎಎಸ್‌ಎಂ ಮತ್ತು ಬಿಕೆಎಸ್‌ಎಂ ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ ಕುರಿತ 12ನೇ ದ್ವಿಪಕ್ಷೀಯ ಇತ್ಯರ್ಥಕ್ಕೆ 9ನೇ ಜಂಟಿ ಟಿಪ್ಪಣಿ ಮತ್ತು 12ನೇ ಬ್ಯಾಂಕಿಂಗ್ ಇಂಡಸ್ಟ್ರಿಗೆ ಸಹಿ ಹಾಕಿರುವುದರಿಂದ ಇದು ಬ್ಯಾಂಕಿಂಗ್ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ.  2022ರ ನವೆಂಬರ್‌ 1 ರಿಂದ ಅನ್ವತವಾಗುವಂತೆ ಜಾರಿಗೆ ಬರಲಿದೆ ಎಂದು IBA ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮೆಹ್ತಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಬ್ಯಾಂಕ್‌ನ ಹೊಸ ಸಮಯ ಹೇಗಿರುತ್ತದೆ?:ಇದು ಇನ್ನೂ ಸ್ಪಷ್ಟವಾಗಿಲ್ಲ, ಕೆಲವು ವರದಿಗಳ ಪ್ರಕಾರ ನೌಕರರು ಬೆಳಗ್ಗೆ 9.45ರಿಂದ ಸಂಜೆ 5.30ರ ತನಕ ಕೆಲಸ ಮಾಡಬೇಕು. ಮೊದಲಿಗಿಂತಲೂ ಹೆಚ್ಚುವರಿಯಾಗಿ 40 ನಿಮಿಷ ಕೆಲಸ ಮಾಡಬೇಕಾಗುತ್ತದೆ.
ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆಯೇ?:ಸಾಮಾನ್ಯವಾಗಿ ಶನಿವಾರದಂದು ತಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸವನ್ನು ಇರಿಸಿಕೊಳ್ಳುವ ಬ್ಯಾಂಕ್ ಗ್ರಾಹಕರಿಗೆ, ಹೊಸ ಅವಧಿಯು ತೊಡಕಾಗಲಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × two =
Remember me
