ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸೀನಿಯರ್​ ರೆಸಿಡೆಂಟ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಡಿ.7ರಂದು ಸಂದರ್ಶನ ಏರ್ಪಡಿಸಿದ್ದು, ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಬೆಳಗ್ಗೆ 9.30ರಿಂದ 10.30ರವರೆಗೆ ಸಂದರ್ಶನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೂರು ವರ್ಷಗಳ ಒಪ್ಪಂದದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ.
ಶೈಣಿಕ ಅರ್ಹತೆ:ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಮುಖ್ಯವಾಗಿ ಎಮರ್ಜೆನ್ಸಿ ಮೆಡಿಸಿನ್​ನಲ್ಲಿ ಡಿಎನ್​ಬಿ, ಪಿಜಿ ಡಿಪ್ಲೊಮಾ. ಜನರಲ್​ ಸರ್ಜರಿಯಲ್ಲಿ ಎಂಎಸ್​, ಅನಸ್ತೇಶಿಯಾ, ರೆಸ್ಪಿರೇಟರಿ ಮೆಡಿಸಿನ್​ನಲ್ಲಿ ಎಂಡಿ ಪೂರ್ಣಗೊಳಿಸಿರಬೇಕು. ಎಮರ್ಜೆನ್ಸಿ ಮೆಡಿಸಿನ್​ನಲ್ಲಿ ಎಂಡಿ ಮಾಡಿರುವವರು ಲಭ್ಯವಿಲ್ಲದ ಪಕ್ಷದಲ್ಲಿ ಆರ್ಥೋಪೆಡಿಕ್ಸ್​ನಲ್ಲಿ ಎಂಎಸ್​ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವಯೋಮಿತಿ:ಸರ್ಕಾರದ ನಿಯಮದ ಪ್ರಕಾರ ವಯೋಸಡಿಲಿಕೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋ ಸಡಿಲಿಕೆ ಇದೆ. ಆದರೆ ಗರಿಷ್ಠ 45 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವೇತನ:ಪ್ರತಿ ಮಾಸಿಕ 67,700 ರೂ. ವೇತನ ನಿಗದಿ ಪಡಿಸಲಾಗಿದ್ದು, ಇತರ ಭತ್ಯೆಗಳು ಸಹ ಇರಲಿವೆ.
ಆಯ್ಕೆ ಪ್ರಕ್ರಿಯೆ:ಕಾರ್ಯಕ್ಷಮತೆಯ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆದರೆ ಸಂದರ್ಶನದ ವೇಳೆ ಎಸ್​ಎಸ್​ಎಲ್​ಸಿ ಪ್ರಮಾಣಪತ್ರ, ಶೈಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರ, ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ ಅವಶ್ಯಕವಾಗಿವೆ. ಆದರೆ ಯಾವುದೇ ಟಿಎ, ಡಿಎ ಸೌಲಭ್ಯ ಇರುವುದಿಲ್ಲ. ಈಗಾಗಲೇ ಸೀನಿಯರ್​ ರೆಸಿಡೆನ್ಸಿ ಸ್ಕೀಂನಲ್ಲಿ ಸೀನಿಯರ್​ ರೆಸಿಡೆಂಟ್​ ಆಗಿ ಕಾರ್ಯನಿರ್ವಹಿಸುವವರಿಗೆ ಸಂದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಒಂದು ವರ್ಷ ಗುತ್ತಿಗೆ ಆಧಾರದ ಮೇಲೆ ಸೀನಿಯರ್​ ರೆಸಿಡೆಂಟ್​ ಆಗಿ ಕೆಲಸ ನಿರ್ವಹಿಸಿದವರಿಗೆ ಇಲ್ಲಿ ಎರಡು ವರ್ಷ ಕೆಲಸ ಮಾಡಲು ಅವಕಾಶವಿರುತ್ತದೆ.
ಅಧಿಸೂಚನೆಯಲ್ಲಿ ತಿಳಿಸಿರುವ ಸಮಯ ಮತ್ತು ಸ್ಥಳಕ್ಕೆ ಅಭ್ಯರ್ಥಿಗಳು ಹಾಜರಾಗತಕ್ಕದ್ದು, ತಡವಾಗಿ ಬಂದವರನ್ನು ಅನರ್ಹಗೊಳಿಸಲಾಗುವುದು. ಅಭ್ಯರ್ಥಿಗಳು ಅರ್ಜಿಯನ್ನುESICವೆಬ್​ಸೈಟ್​ನಿಂದ ಡೌನ್​ಲೋಡ್​ ಮಾಡಿಕೊಂಡು, ಎಲ್ಲ ಮೂಲ ದಾಖಲೆ ಹಾಜರುಪಡಿಸಬೇಕು.
ಸಂದರ್ಶನ ನಡೆಯುವ ಸ್ಥಳ:ಅಕಾಡೆಮಿಕ್​ ಬ್ಲಾಕ್​, ಇಎಸ್​ಐಸಿ ಮೆಡಿಕಲ್​ ಕಾಲೇಜು,PGIMSR, ರಾಜಾಜಿನಗರ, ಬೆಂಗಳೂರು& 560 010ಸಂದರ್ಶನ ನಡೆಯುವ ದಿನ:7.12.2022ಅಧಿಸೂಚನೆಗೆ:http://bit.ly/3gH2Gnyಮಾಹಿತಿಗೆ:www.esic.nic.in
ಕನ್ಸಲ್ಟೆಂಟ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ

ಮಂಡ್ಯದಲ್ಲಿ 3 ಮಕ್ಕಳಿಗೆ ವಿಷವುಣಿಸಿ ದುರಂತ ಅಂತ್ಯ ಕಂಡ ನರ್ಸ್​! ಪ್ರೀತಿಸಿ ಮದ್ವೆಯಾದಾಕೆಯ ಬಾಳಲ್ಲಿ ಗಂಡ ಆಡಿದ ಆಟ ಅಷ್ಟಿಷ್ಟಲ್ಲ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + six =
Remember me
