ಬೆಂಗಳೂರುಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸುತ್ತಿರುವ ಕಿರಣ್ ಮಜುಂದಾರ್ ನೇತೃತ್ವದ ಬಯೋಕಾನ್ ಸಂಸ್ಥೆಯ ನಾಮಲಕಗಳಿಗೆ ಕನ್ನಡಿಗರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿದೆ. ಈ ಕೃತ್ಯಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕೆಲವರು ‘ನಿಮ್ಮ ಸಣ್ಣ ಬುದ್ಧಿಯಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಮಸಿ ಬಳಿಯುತ್ತಿದ್ದೀರಿ’ ಎಂದರೆ, ಮತ್ತೆ ಕೆಲವರು, ‘ಇಂತಹ ಘಟನೆಗಳು ಕರ್ನಾಟಕವನ್ನು ತಲೆ ತಗ್ಗಿಸುವಂತೆ ಮಾಡಿವೆ’ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಮಸಿ ಬಳಿಯುವ ಬದಲು ನಾಲ್ಕು ಜನ ಕನ್ನಡಿಗರಿಗೆ ಕೆಲಸ ಕೊಡುವ ಒಂದು ಸಂಸ್ಥೆಯನ್ನು ಕಟ್ಟಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಬಹುತೇಕ ಕಾಮೆಂಟ್ಸ್‌ಗಳು ಈ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಿವೆ. ಇದೇ ಕಾರಣದಿಂದ ರಾಜ್ಯದಲ್ಲಿ ಕಂಪನಿಗಳು ಹೂಡಿಕೆ ಮಾಡದಿದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಲಿ. ಓತಪ್ರೋತವಾಗಿ ನಡೆಯುತ್ತಿರುವ ವಲಸೆಯಿಂದ ಬೆಂಗಳೂರಿನ ಮೇಲಾಗುತ್ತಿರುವ ಪ್ರಭಾವದ ಬಗ್ಗೆ ಆಳವಾದ ವಿಚಾರ ವಿನಿಮಯವಾಗಲಿ. ಈ ಕೆಲಸ ಭಾಷೆಯ ಅಸ್ಮಿತೆಯ ಬಗ್ಗೆ ಪ್ರಜ್ಞೆ ಮೂಡಲಿ. ಆದರೆ, ಇಂತಹ ವಿಜೃಂಭಣೆಯ ಪ್ರದರ್ಶನದಿಂದ ಯಾರಿಗೂ ಲಾಭವಿಲ್ಲ ಎಂದಿದ್ದಾರೆ.
ವೀಡಿಯೋದಲ್ಲಿ ಮಸಿ ಬಳಿಯುವ ವ್ಯಕ್ತಿಯ ೆಟೋವನ್ನು ಹಾಕಿಲ್ಲ. ಹೀಗಾಗಿ ಕನ್ನಡಿಗರು ಇಂತಹ ಕೆಲಸವನ್ನು ಮಾಡುವುದಿಲ್ಲ. ಯಾರೋ ಕಿಡಿಗೇಡಿಗಳು ಇಂತಹ ಹೀನ ಕೃತ್ಯ ಎಸಗಿ ಕನ್ನಡಿಗರ ಮೇಲೆ ಆಕ್ರೋಶ ವ್ಯಕ್ತವಾಗುವಂತೆ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿ ರಾಜ್ಯದಿಂದ ಪಕ್ಕದ ತಮಿಳುನಾಡಿಗೆ ಕಂಪನಿಗಳು ವಲಸೆ ಹೋಗುವಂತೆ ಮಾಡುವ ದುರುದ್ದೇಶ ಹೊಂದಲಾಗಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.
ಶಾ ಏನು ಹೇಳಿದ್ದರು?ರಾಜ್ಯ ಸರ್ಕಾರವು ಖಾಸಗಿ ಕೈಗಾರಿಕೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಮತ್ತು ಆಡಳಿತಾತ್ಮಕವಲ್ಲದ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸರ್ಕಾರವು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಕಿರಣ್ ಮಜುಂದಾರ್ ಶಾ, ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಕಾರಣದಿಂದ ಐಟಿ ಸೇವೆಯಲ್ಲಿ ನಮ್ಮ ಅಗ್ರಸ್ಥಾನಕ್ಕೆ ಧಕ್ಕೆ ತಂದುಕೊಳ್ಳಲಾಗದು. ಪ್ರತಿಭಾನ್ವಿತರ ಆಯ್ಕೆಗೆ ಅವಕಾಶವಿರಬೇಕು ಎಂಬ ಹೇಳಿಕೆ ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 14 =
Remember me
