ಬೆಂಗಳೂರು:ಕರೊನಾ ಆಘಾತದಿಂದ ಗಂಟುಮೂಟೆ ಕಟ್ಟಿ ಹಳ್ಳಿ ಸೇರಿದವರಿಗಿನ್ನು ಹೊಟ್ಟೆಪಾಡಿನ ಆತಂಕ ಬೇಡ. ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಬಯಸುವ ಕೂಲಿಕಾರರ ಕೈಗೆ ಕೆಲಸವೂ ಖಾತ್ರಿಯಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನೋಂದಣಿ ಮಾಡಿಸಿಕೊಂಡ ಉದ್ಯೋಗ ಚೀಟಿದಾರರು (ಜಾಬ್ ಕಾರ್ಡ್) ಆಯಾ ಗ್ರಾ.ಪಂ.ನಿಂದ ಕೆಲಸ ಕೋರಿದಲ್ಲಿ ನಿಗದಿತ ಮಾರ್ಗಸೂಚಿಯಂತೆ ಕೈಗೆ ದುಡಿತ ಸಿಗಲಿದೆ. ಯೋಜನೆಯಡಿ ಕಾಮಗಾರಿ ಗುರುತಿಸುವುದು, ಆಸಕ್ತಿ ವಹಿಸಿದವರ ಕೈಗೆ ಕೆಲಸ ಕೊಡುವುದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಸ್ಪಷ್ಟ ಸೂಚನೆ ರವಾನಿಸಿದೆ.
ಅಂತರ ಕಟ್ಟುನಿಟ್ಟು:ಪ್ರತಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕಾಮಗಾರಿ ಗುರುತಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಪ್ರತಿ ಹಳ್ಳಿಯಲ್ಲಿ ಕೆಲಸ ಕೊಡುವುದಿದ್ದರೆ 5 ಜನರಿಗೆ ಸೀಮಿತಗೊಳಿಸಿ ಸಾಮಾಜಿಕ ಅಂತರ ಪಾಲಿಸಬೇಕು. ಆಗಿಂದಾಗ್ಗೆ ಕೈ ತೊಳೆದುಕೊಳ್ಳುವುದಕ್ಕೆ ಕೂಲಿಕಾರರಿಗೆ ತಿಳಿಹೇಳುವಂತಹ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬ ಕೂಲಿಕಾರನ ಮಧ್ಯೆ ಒಂದು ಮೀಟರ್ ಅಂತರ ಕಾಪಾಡಬೇಕೆಂಬ ನಿರ್ದೇಶನ ನೀಡಲಾಗಿದೆ.
ಆಯಾ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳು ಇಲ್ಲದಿದ್ದರೆ ಬೇರೆ ಗ್ರಾ.ಪಂ. ವ್ಯಾಪ್ತಿ ಕಾಮಗಾರಿಗೆ ಕೂಲಿಕಾರರನ್ನು ಕರೆದೊಯ್ಯಬಹುದಾಗಿದ್ದು, 5-6 ಕಿ.ಮೀ.ಗಿಂತ ಹೆಚ್ಚು ದೂರವಿರಬಾರದು. ಜತೆಗೆ ಕೂಲಿಕಾರರ ಪ್ರಯಾಣದಲ್ಲೂ ಅಂತರವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಕೂಲಿಕಾರರ ದಟ್ಟಣೆ ಸಾಧ್ಯತೆಯಿರುವ ಸಾಮೂಹಿಕ ಕೆಲಸಗಳನ್ನು ಸದ್ಯಕ್ಕೆ ಕೈಬಿಟ್ಟು ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡಬೇಕು. ಜಾಬ್ ಕಾರ್ಡ್ ಹೊಂದಿರುವ ಜಮೀನಿನ ಮಾಲೀಕನ ಹೊಲದಲ್ಲಿ ಭೂಮಿ ಸಮತಟ್ಟು, ಹೊಲದ ಬದು, ತಂತಿ ಬೇಲಿ ಕಟ್ಟುವುದು, ಹೊಂಡ ನಿರ್ವಣ, ಕ್ಷಾರಯುಕ್ತ ಜಮೀನಿನ ಮರುಪೂರಣ, ಅಂತರ್ಜಲ ವೃದ್ಧಿ, ಬಾವಿ ತೋಡುವುದು, ರೇಷ್ಮೆ, ಹಣ್ಣು, ತೆಂಗು ಇನ್ನಿತರ ತೋಟಗಾರಿಕೆ ಬೆಳೆಗಳ ಕೆಲಸವನ್ನು ನೀಡಬಹುದಾಗಿದೆ.
ಅರಣ್ಯ ಇಲಾಖೆ ಯೋಜನೆಯಡಿ ಸಸಿ ನೆಡಲು ಗುಂಡಿ ತೋಡುವುದು, ಟ್ರೀಗಾರ್ಡ್ ಬಳಕೆ ಇನ್ನಿತರ ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶವಿದ್ದು, ನರೇಗಾ ನಿಯಮಗಳ ಪ್ರಕಾರ ಎಸ್ಸಿ, ಎಸ್ಟಿ, ಸಣ್ಣ, ಅತಿಸಣ್ಣ ರೈತರಿಗೆ ಆದ್ಯತೆ ನೀಡುವುದು.
ಕೂಲಿ ವೆಚ್ಚ ಶೇ.60 ಹಾಗೂ ಸಾಮಗ್ರಿ ವೆಚ್ಚ ಶೇ.40 ಮೀರದಂತೆ ನಿಗಾವಹಿಸಿ ದಾಖಲೀಕರಣ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ಜಿ.ಪಂ. ಸಿಇಒಗಳಿಗೆ ಸಲಹೆ ನೀಡಲಾಗಿದೆ.
ಬಯಸಿದ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಎಲ್ಲ ಜಿ.ಪಂ. ಸಿಇಒಗಳಿಗೆ ಸೂಚಿಸಲಾಗಿದೆ. ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡಿ, ಕೂಲಿಕಾರರ ಸಂಖ್ಯೆ 5ಕ್ಕಿಂತ ಹೆಚ್ಚಿರಬಾರದು ಹಾಗೂ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.
| ಎಲ್.ಕೆ. ಅತೀಕ್ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ
ಕೂಲಿಕಾರರ ಹಿಂಜರಿಕೆ
ಕರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಬಹುತೇಕ ಜಿಲ್ಲೆಗಳಲ್ಲಿ ಕೂಲಿಕಾರರು ಕೆಲಸಕ್ಕೆ ಹಿಂಜರಿಯುತ್ತಿದ್ದಾರೆ. ಕೂಲಿಕಾರ ಸಂಘಟನೆಗಳು ಜಾಗೃತವಾಗಿರುವ ಜಿಲ್ಲೆಗಳಲ್ಲಿ ಕೆಲಸಗಳಿಗೆ ಬೇಡಿಕೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಮೂಲಗಳು ಹೇಳುತ್ತವೆ.
ವೆಚ್ಚ ಭರಿಸಲು ರಾಜ್ಯ ಸಿದ್ಧ
ನರೇಗಾ ಯೋಜನೆಯಡಿ ಕೂಲಿ ವೆಚ್ಚವನ್ನು ಶೇ.100 ಕೇಂದ್ರ ಸರ್ಕಾರವೇ ಭರಿಸುತ್ತದೆ. ಕಳೆದ ಒಂದೂವರೆ ತಿಂಗಳ ಕೂಲಿ ವೆಚ್ಚ 350 ಕೋಟಿ ರೂ. ಪಾವತಿ ಬಾಕಿಯಿದೆ. ಕೇಂದ್ರ ನೀಡಿದ ಭರವಸೆಯಂತೆ ಏ.2ನೇ ವಾರದೊಳಗೆ ಹಣ ಬಾರದಿದ್ದರೆ ರಾಜ್ಯ ಸರ್ಕಾರವೇ ಭರಿಸಲು ಸಿದ್ಧವಾಗಿದೆ.
| ಮೃತ್ಯುಂಜಯ ಕಪಗಲ್
ಕರೊನಾಕ್ಕಿಂತ ವೇಗವಾಗಿ ಹರಡ್ತಿವೆ ಅದಕ್ಕೆ ಸಂಬಂಧಪಟ್ಟ ಸುಳ್ಳುಗಳು; ಈ 7 ವಿಚಾರಗಳನ್ನು ನಂಬಲೇಬೇಡಿ..ಪಕ್ಕಾ ಫೇಕ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
