ಬೆಂಗಳೂರು:ಆನ್​ಲೈನ್ ಬ್ಯಾಂಕಿಂಗ್, ಶಾಪಿಂಗ್ ವಂಚನೆ ಬಳಿಕ ಜನರ ಬೆವರಿನ ಹಣದ (ಕಾರ್ವಿುಕರ ಭವಿಷ್ಯ ನಿಧಿ-ಇಪಿಎಫ್)ಮೇಲೂ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಕಾರ್ವಿುಕ ಇಲಾಖೆ ನೌಕರರ ಅನುಕೂಲಕ್ಕಾಗಿ ಆನ್​ಲೈನಲ್ಲೇ ಖಾತೆ ತೆರೆದು ವ್ಯವಹರಿಸಲು ವೆಬ್​ಸೈಟ್ ಸವಲತ್ತು ಕಲ್ಪಿಸಿದ್ದರೆ, ಸೈಬರ್ ಕಳ್ಳರು ಈ ವೆಬ್​ಸೈಟನ್ನೇ ನಕಲಿ ಮಾಡಿದ್ದಾರೆ. ಈ ಸುದ್ದಿ ಬಹಿರಂಗಗೊಳ್ಳುತ್ತಲೇ ಎಚ್ಚೆತ್ತ ಇಪಿಎಫ್ ಪ್ರಾದೇಶಿಕ ಕಚೇರಿ ಆಯುಕ್ತ ರಾಕೇಶ್ ಎಸ್. ಶೇಖರ್, ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಪಿಎಫ್ ವೆಬ್​ಸೈಟ್ ಮೂಲಕ ಕಂಪನಿ ನೀಡುವ ಪಿಎಫ್ ಮೊತ್ತ ಮತ್ತು ಕಡಿತ ಮಾಡುವ ವೇತನ, ಬಡ್ಡಿ ದರದ ಮಾಹಿತಿ ಪಡೆಯುವ ಜತೆಗೆ ಖಾತೆದಾರರು ಕೂತಲ್ಲೇ ಹಣ ವಿತ್​ಡ್ರಾ ಮಾಡಬಹುದಾಗಿದೆ. ಆದರೆ ಈ ವೆಬ್​ಸೈಟ್​ನಂತೆಯೇ ನಕಲಿ ವೆಬ್​ಸೈಟ್ ಸೃಷ್ಟಿಸಿರುವ ಸೈಬರ್ ಕಳ್ಳರು ವಂಚನೆಗೆ ಬಲೆಬೀಸಿದ್ದಾರೆ. ಈ ನಕಲಿ ವೆಬ್​ಸೈಟ್​ನಲ್ಲಿ ಲಾಗಿನ್ ಆಗಲು ಯೂಸರ್ ಐಡಿ ನಮೂದಿಸಿ ಪಾಸ್​ವರ್ಡ್ ಹಾಕಿದರೆ ಟೋಪಿ ಬೀಳುವುದು ಗ್ಯಾರಂಟಿ. ಈ ಪಾಸ್​ವರ್ಡ್ ಬಳಸಿ ಇಪಿಎಫ್ ವೆಬ್​ಸೈಟ್​ನಲ್ಲಿ ಲಾಗಿನ್ ಆಗುವ ವಂಚಕರು ತಮ್ಮ ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ನಮೂದಿಸಿ ಕಾರ್ವಿುಕರ ಸೋಗಲ್ಲಿ ವಿತ್​ಡ್ರಾಗೆ ಅರ್ಜಿ ಸಲ್ಲಿಸುತ್ತಾರೆ. ಸಂಬಂಧಪಟ್ಟ ಕಂಪನಿ ಗ್ರೀನ್ ಸಿಗ್ನಲ್ ತೋರಿಸಿದಾಗ ಹಣ ಕಳ್ಳರ ಬ್ಯಾಂಕ್ ಖಾತೆ ಸೇರುತ್ತದೆ. ಇದಲ್ಲದೆ ಕಾರ್ವಿುಕರ ಇಪಿಎಫ್ ಯೂಸರ್ ಐಡಿ ಬಳಸಿ ಲಾಗಿನ್ ಆದಾಗ ಬ್ಯಾಂಕ್ ಖಾತೆ, ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆದ ಮೊಬೈಲ್ ನಂಬರ್ ಕದಿಯುತ್ತಾರೆ. ಈ ಮಾಹಿತಿ ಬಳಸಿ ಬ್ಯಾಂಕ್ ಖಾತೆ, ವ್ಯಾಲೆಟ್, ಡಿಜಿಟಲ್ ಪೇಮೆಂಟ್ ಖಾತೆಗೂ ಕನ್ನ ಹಾಕುವ ಸಾಧ್ಯತೆಗಳಿವೆ.
ಮೊಬೈಲ್​ಗೆ ಕರೆ ಮಾಡ್ತಾರೆ:ನಕಲಿ ವೆಬ್​ಸೈಟ್​ನಲ್ಲಿ ಮಾಹಿತಿ ಕದಿಯುವ ಜತೆಗೆ ಪಿಎಫ್ ಖಾತೆದಾರರ ಮೊಬೈಲ್​ಗೆ ಇಪಿಎಫ್ ಅಥವಾ ಬ್ಯಾಂಕ್ ಅಧಿಕಾರಿಗಳ ಸೋಗಲ್ಲಿ ಕರೆ ಮಾಡುತ್ತಾರೆ. ‘ನಿಮ್ಮ ಇಪಿಎಫ್ ಖಾತೆಗೆ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಖಾತೆ ಲಿಂಕ್ ಮಾಡಬೇಕಾಗಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಮಾಹಿತಿ ನೀಡಿ. ಜತೆಗೆ ಮೊಬೈಲ್​ಗೆ ಎಸ್​ಎಂಎಸ್ ಬರುತ್ತದೆ. ಅದರಲ್ಲಿನ 4 ನಂಬರ್’(ಒಟಿಪಿ) ಹೇಳಿ’ ಎಂದು ಕೋರುತ್ತಾರೆ. ಗ್ರಾಹಕರು ಇದರ ಮಾಹಿತಿ ನೀಡಿದರೆ ಬ್ಯಾಂಕ್ ಖಾತೆ ಹಣ ಕಳ್ಳರ ಪಾಲಾಗುತ್ತದೆ.
ಪಿಎಫ್ ಖಾತೆದಾರರೇ ಹುಷಾರ್..:
– ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
