ಬೆಂಗಳೂರು:ನಿರ್ಲಕ್ಷಿತರು, ಹಿಂದುಳಿದವರ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಶೀಘ್ರವೇ ಹೊಸ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 106ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಮೀಸಲು ಪಟ್ಟಿ ರಚನೆ ಅಧಿಕಾರವನ್ನು ಆಯಾ ರಾಜ್ಯಗಳಿಗೆ ದೊರೆತಿದ್ದು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಧಾನಿ ಮೋದಿ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೇ ಮಾದರಿಯಲ್ಲಿ ಇತರ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಮೂರು ‘ಇ’ಗಳ (ಎಜ್ಯುಕೇಷನ್, ಎಪ್ಲಾಯ್ಮೆಂಟ್ ಮತ್ತು ಎಂಪವರ್​ವೆುಂಟ್) ಅಗತ್ಯವಿದ್ದು, ಪೂರಕವಾದ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಉನ್ನತೀಕರಣ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದ ಬೊಮ್ಮಾಯಿ, ಸಿಬಿಎಸ್​ಇ ಮಾದರಿ ಶಿಕ್ಷಣ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸೂಕ್ತ ತರಬೇತಿ, ನೈಪುಣ್ಯತೆ ನೀಡಿ ಆತ್ಮಸ್ಥೈರ್ಯ ತುಂಬುವುದು ವಿಶೇಷ ಕಾರ್ಯಕ್ರಮದ ಭಾಗವಾಗಿದೆ. ಸರ್ಕಾರಿ ಹುದ್ದೆಗಳು ಕಡಿಮೆಯಾಗುತ್ತಿದ್ದು, ಖಾಸಗಿ ರಂಗದ ಉದ್ಯೋಗಗಳನ್ನು ಬಳಸಿಕೊಳ್ಳುವುದಕ್ಕೆ ಅನುಗುಣವಾಗಿ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಉದ್ದೇಶವಿದೆ ಎಂದು ವಿವರಿಸಿದರು. ಹಿಂದುಳಿದ ಸಮುದಾಯಗಳು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನೆರವು ನೀಡಲಾಗುತ್ತಿದ್ದು, ಇದಕ್ಕಾಗಿ 83 ಕೋಟಿ ರೂ. ಮೀಸಲಿಡಲಾಗಿದೆ. ವಾರ್ಷಿಕ ಶಿಷ್ಯ ವೇತನಕ್ಕೆ 625 ಕೋಟಿ ರೂ. ವ್ಯಯಿಸುತ್ತಿದ್ದು, 8.50 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಧೀಮಂತ ನಾಯಕ:ಸಮ ಸಮಾಜ, ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಬೇಕು ಎಂಬ ತುಡಿತ ಹೊಂದಿದ್ದ ದೇವರಾಜ ಅರಸು ಧೀಮಂತ ನಾಯಕ. ಅವರ ಚಿಂತನೆ ಹಾದಿಯಲ್ಲಿರುವ ಮೂವರನ್ನು ಸರ್ಕಾರ ಗುರುತಿಸಿ, ಪ್ರಶಸ್ತಿ ನೀಡಲಾಗಿದೆ. ಆ ಮೂಲಕ ಸವಾಲುಗಳನ್ನು ಎದುರಿಸಲು ಸ್ಪೂರ್ತಿಯ ಮರುಸಂಕಲ್ಪ ಮಾಡಲಾಗಿದೆ ಎಂದು ಬೊಮ್ಮಾಯಿ ಅರ್ಥೈಸಿದರು. ಭೂಮಿಯನ್ನು ಆಧರಿಸಿ ಬದುಕುತ್ತಿದ್ದವರ ಆರ್ಥಿಕ ಬಲವರ್ಧನೆಗೆ ಭೂಸುಧಾರಣಾ ಕಾಯ್ದೆ ಜಾರಿಗೊಳಿಸಿದರು. ನಿರ್ಲಕ್ಷಿತ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ರಾಜಕೀಯ ಅಧಿಕಾರದ ಮುನ್ನೆಲೆಗೆ ತಂದರು. ಕರ್ನಾಟಕದ ಏಕೀಕರಣದ ರೂವಾರಿ, ಮೈಸೂರು ಭಾಗದವರೇ ಆಗಿದ್ದರೂ ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡಿಗರ ಏಕತೆ ಪ್ರತಿಪಾದಿಸಿದರು. ವಿದ್ಯುತ್, ನೀರಾವರಿ ಸೇರಿ ಸಮೃದ್ಧ ಕರ್ನಾಟಕಕ್ಕಾಗಿ ದೂರದೃಷ್ಟಿಯ ಕ್ರಮಗಳನ್ನು ಕೈಗೊಂಡ ಅರಸು, ಸ್ವಾಭಿಮಾನಕ್ಕಾಗಿ ಅಧಿಕಾರವನ್ನು ತ್ಯಜಿಸಿದರು ಎಂದು ಗುಣಗಾನ ಮಾಡಿದರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಿ.ದೇವರಾಜ ಅರಸು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಸಾಹಿತಿ ಪ್ರೊ.ದೊಡ್ಡ ರಂಗೇಗೌಡ, ಅಧ್ಯಕ್ಷತೆ ವಹಿಸಿದ್ದು, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಇದ್ದರು.
ದೇವದಾಸಿಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬಸವಪ್ರಭು ಎಲ್. ಪಾಟೀಲ್ (2019), ಅಬಲೆಯರು, ನೊಂದ ಮಹಿಳೆಯರಿಗೆ ಆಸರೆ ನೀಡಿರುವ ಸುಮಂಗಲಿ ಸೇವಾ ಟ್ರಸ್ಟ್​ನ ಸುಶೀಲಮ್ಮ (2020) ಹಾಗೂ ಅಲೆಮಾರಿಗಳ ಏಳಿಗೆಗೆ ಸೇವೆ ಸಲ್ಲಿಸುತ್ತಿರುವ ಕೆ.ಭಾಸ್ಕರ್​ದಾಸ್ ಎಕ್ಕಾರ್ (2021) ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಗೌರವಿಸಲಾಯಿತು.
ಅಲೆಮಾರಿಗಳಿಗೆ ವಸತಿ ಶಾಲೆ:ರಾಜ್ಯದಲ್ಲಿ ಹೊಸದಾಗಿ ಮೂರು ಅಲೆಮಾರಿ ವಸತಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಅಲ್ಲದೆ, ಸದ್ಯಕ್ಕಿರುವ 4ವಸತಿ ಶಾಲೆಗಳ ಪೈಕಿ ಎರಡಕ್ಕೆ ಸ್ವಂತ ಕಟ್ಟಡ ನಿರ್ವಿುಸಲು ತಲಾ -ಠಿ;6 ಕೋಟಿ ಮಂಜೂರು ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಈ ಸಮುದಾಯದ ಸಂಸ್ಕೃತಿ ಉಳಿಸಿ, ಬೆಳೆಸುವ ಉದ್ದೇಶದಿಂದ ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಚಿಂತನೆಯಿದೆ ಎಂದರು.
ಬೆಂಗಳೂರು:ಅರ್ಧ ಶತಕ ಸಮೀಪಿಸಿದ್ದರೂ ಅದೇ ಮೆರಗು, ಬೆರಗು, ಗತ್ತು-ಗಾಂಭೀರ್ಯ, ಸೆಳೆತವುಳ್ಳ ಡಿ.ದೇವರಾಜ ಅರಸು ಅವರ ಅಚ್ಚುಮೆಚ್ಚಿನ ‘ಕಪು್ಪ ಸುಂದರಿ’ ಶುಕ್ರವಾರ ವಿಧಾನಸೌಧ ಪ್ರವೇಶಿಸಿದ್ದಳು! ಅರ್ಥಾತ್, ಕಪು್ಪ ಬಣ್ಣದ ಮರ್ಸಿಡಿಸ್ ಬೆಂಜ್ ಕಾರ್ (ಎಂಇಒ 777). ಸಿಎಂ ಆಗಿದ್ದ ಅವಧಿ ಸೇರಿ 10 ವರ್ಷಗಳ ಕಾಲ ಅರಸು ಇದೇ ಕಾರ್​ನಲ್ಲಿ ಓಡಾಡಿದ್ದರು. ನಂತರ ಹರಾಜು ಪ್ರಕ್ರಿಯೆಯಲ್ಲಿ ಅರಸು ಆಪ್ತ ಜಿ.ಎಂ.ಬಾಬು ಈ ಕಾರನ್ನು ಖರೀದಿಸಿ ಸುಸ್ಥಿತಿಯಲ್ಲಿಟ್ಟಿದ್ದು, ಹೊಳಪು ಮಾಸದಂತೆ ನೋಡಿಕೊಂಡಿದ್ದಾರೆ. ಅರಸು ನೆನಪಿಗಾಗಿ ಅವರ ಜಯಂತಿ ದಿನ ವಿಧಾನಸೌಧಕ್ಕೆ ತಂದು ನಿಲ್ಲಿಸುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕಾರಿನಲ್ಲಿ ವಿಧಾನಸೌಧ ಪ್ರದಕ್ಷಿಣೆ ಹಾಕಿ ಖುಷಿಪಟ್ಟಿದ್ದರು. ಬಹಳಷ್ಟು ಹಿರಿಯ ರಾಜಕಾರಣಿಗಳಿಗೆ ಈ ಕಾರ್​ನ ಬಗ್ಗೆ ವಿಶೇಷ ಒಲವು, ಅಕ್ಕರೆಯಿದೆ. ಅರಸು ಬಳಸಿದ್ದರು ಎಂಬ ಕಾರಣಕ್ಕೂ ಅದೇ ಆಕರ್ಷಣೆ, ಹಿರಿಮೆಯನ್ನು ಕಾಯ್ದಿಟ್ಟುಕೊಂಡಿದೆ. ದೇವರಾಜು ಅರಸು ಸಾರಥ್ಯದಲ್ಲಿ ನಡೆದ 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಈ ಸಾಧನೆಗೆ ಇಂದಿರಾಗಾಂಧಿ ಸಂತುಷ್ಟರಾಗಿ ವಿದೇಶದಿಂದ ಈ ಮರ್ಸಿಡಿಸ್ ಬೆಂಜ್ ಕಾರ್ ತರಿಸಿ ಅರಸು ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಟೇಬಲ್ ಮೇಲಿತ್ತು ಮೂರು ಟೀ ಕಪ್​; ದಂಪತಿಯನ್ನು ಪರಿಚಿತರೇ ಕೊಂದರಾ?

ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
