ಬೆಂಗಳೂರು:‘ನನ್ನ ಹೆಂಡತಿ ಮೊಬೈಲ್​ಗೆ ಯಾಕಪ್ಪಾ ಫೋನ್ ಮಾಡ್ತೀಯಾ?’ ಎಂದು ಪ್ರಶ್ನಿಸಿದ ಸ್ನೇಹಿತನ್ನು ಮನೆಗೆ ಕರೆಸಿಕೊಂಡ ದುಷ್ಕರ್ಮಿ, ಆತನನ್ನು ಬರ್ಬರವಾಗಿ ಕೊಂದು ಮೂಟೆಕಟ್ಟಿ ಕಾಂಪೌಂಡ್​ ಬಳಿಯೇ ಎಸೆದು ಹೋದ ಭೀಕರ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ.
ಅಂದ್ರಹಳ್ಳಿಯ ಪ್ರಸನ್ನ ಬಡಾವಣೆಯ ನಿವಾಸಿ ಕೇದಾರ್ ಸಹಾನಿ ಕೊಲೆಯಾದ ದುರ್ದೈವಿ. ಪೇಂಟಿಂಗ್​ ಕೆಲಸ ಮಾಡಿಕೊಂಡಿದ್ದ ಕೇದಾರ್​ ಮತ್ತು ರಾಹುಲ್ ಅಲಿಯಾಸ್​ ಚೋಟಾ ಲಾಲ್ ಇಬ್ಬರೂ ಸ್ನೇಹಿತರು. ಕೇದಾರ್​ ಪತ್ನಿ ಕುಸುಮಾ ಮೊಬೈಲ್​ಗೆ ರಾಹುಲ್​ ಕರೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ್ದ ಕೇದಾರ್​, ಸ್ನೇಹಿತನೊಂದಿಗೆ ಜಗಳ‌ ಮಾಡಿದ್ದ. ಇದೇ ವಿಚಾರವಾಗಿ ಮಾತನಾಡುವ ಬಾ ಎಂದು ಸೆ.5ರ ರಾತ್ರಿ ಎನ್ಕ್ಲೇವ್ ಅಪಾರ್ಟ್​ಮೆಂಟ್​ಗೆ ಸ್ನೇಹಿತನನ್ನು ರಾಹುಲ್​ ಕರೆಸಿಕೊಂಡಿದ್ದ.
ಎನ್ಕ್ಲೇವ್ ಅಪಾರ್ಟ್​ಮೆಂಟ್​ನ ರಾಹುಲ್​ ಮನೆಗೆ ಹೋದ ಕೇದಾರ್​ಗೆ ಕಂಠಪೂರ್ತಿ ಎಣ್ಣೆ ಕುಡಿಸಿ ಸಿಲಿಂಡರ್​ನಿಂದ ತಲೆ ಜಜ್ಜಿದ್ದ ಕೊಂದಿದ್ದ. ಕೃತ್ಯ ಎಸಗಿ ಮೃತದೇಹವನ್ನು ಅದೇ ಅಪಾರ್ಟ್ಮೆಂಟ್​ನ ಒಳಗೆ ಮೂಟೆ‌ಕಟ್ಟಿ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದ.
ತನಿಖೆ ಕೈಗೊಂಡ ಬ್ಯಾಡರಹಳ್ಳಿ ಇನ್​ಸ್ಪೆಕ್ಟರ್​ ರಾಜೀವ್ ನೇತೃತ್ವದ ತಂಡ ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರಾಹುಲ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.vijayavani.net/magadi-love-case-young-woman-death-three-people-arrest/
ಸಾವಿರಾರು ಕಿಲೋ ಮೀಟರ್​ ಅಂತರದಲ್ಲಿ ಯುವಕನ ರುಂಡ-ಮುಂಡ ಪತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 5 =
Remember me
