|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ರಾಜ್ಯದಲ್ಲಿ ಕರೊನಾ ಸೋಂಕು ಇಳಿಕೆಯಾಗುತ್ತಿದ್ದಂತೆ ವಿವಿಧ ಇಲಾಖೆಗಳು ತಮ್ಮ ಮುಂದಿರುವ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಮುಂದಾಗುತ್ತಿವೆ. ಪ್ರಮುಖವಾಗಿ ಕೈಗಾರಿಕೆ ಇಲಾಖೆಯು ಹೂಡಿಕೆ ವಿಚಾರದಲ್ಲಿ ಗಮನ ಕೊಡುತ್ತಿದೆ. ಜತೆಗೆ, ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆ ಉತ್ತೇಜಿಸಲು ಕಸರತ್ತು ನಡೆಸಿದೆ.
ಎಲೆಕ್ಟ್ರಿಕ್ ವಾಹನ ನೀತಿ ರಾಜ್ಯದಲ್ಲಿ ಜಾರಿಯಲ್ಲಿದ್ದು, ಈ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಘೋಷಣೆ ಮಾಡಿ ಅನುಷ್ಠಾನ ಮಾಡುತ್ತಿದೆ. ‘ಇವಿ’ ಕ್ಷೇತ್ರದ ಹೂಡಿಕೆದಾರರು ಒಬ್ಬೊಬ್ಬರಾಗಿ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ಕಳೆದ ವಾರವಷ್ಟೇ ಲಿಥಿಯನ್- ಅಯಾನ್ ಸೆಲ್ ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪನಿ ಅಮೆರಿಕದ ಸಿ4ವಿ ರಾಜ್ಯ ದಲ್ಲಿ 4,000 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ. ಇನ್ನೊಂದು ಮಗ್ಗುಲಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯದಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಈ ನಡá-ವೆಯೂ ನಿರೀಕ್ಷಿತ ಪ್ರಮಾಣದಲ್ಲಿ ಬಳಕೆ ಹೆಚ್ಚಾಗುತ್ತಿಲ್ಲ. ಈ ಕಾರಣಕ್ಕೆ ಕೈಗಾರಿಕಾ ಇಲಾಖೆ ದೊಡ್ಡ ಕಂಪನಿಗಳ ಮೊರೆ ಹೋಗಿದ್ದು, ಎಲೆಕ್ಟ್ರಿಕ್ ವಾಹನ ಬಳಕೆ ಮಾಡುವಂತೆ ಒತ್ತಾಯಿಸಿದೆ.
ಇ-ಕಾಮರ್ಸ್​ನಲ್ಲಿ ತೊಡಗಿಕೊಂಡಿರುವ ದಿಗ್ಗಜ ಕಂಪನಿಗಳು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ಮತ್ತು ಸ್ಮಾರ್ಟ್ ಮೊಬಿಲಿಟಿ ಉದ್ಯಮದಲ್ಲಿ ತೊಡಗಿರುವ ಕಂಪನಿಗಳಿಂದ ಸರ್ಕಾರ ದೊಡ್ಡ ಬದಲಾವಣೆ ನಿರೀಕ್ಷಿಸಿದ್ದು, ಅವುಗಳೊಂದಿಗೆ ಸೇರಿಕೊಂಡು ಪರಿವರ್ತನೆಗೆ ಪ್ರಯತ್ನಿಸಿದೆ. ಎಲೆಕ್ಟ್ರಿಕ್ ವೆಹಿಕಲ್ ಬಳಕೆ ಉತ್ತೇಜಿಸಲು ಈ ಕಂಪನಿಗಳ ಸಲಹೆ ಕೇಳಿದೆ. ಬಿಗ್ ಬ್ಯಾಸ್ಕೆಟ್, ಅಮೆಜಾನ್, ಫ್ಲಿಪ್​ಕಾರ್ಟ್, ಬೌನ್ಸ್ ಸೇರಿ 20ಕ್ಕೂ ಹೆಚ್ಚು ಕಂಪನಿಗಳ ಪ್ರಮುಖರೊಂದಿಗೆ ಹಿರಿಯ ಅಧಿಕಾರಿಗಳು ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ.
ಇ-ಕಾಮರ್ಸ್ ಸೇವೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸಿ ಎಂದು ಸರ್ಕಾರದ ಕಡೆಯಿಂದ ಪ್ರಸ್ತಾವನೆ ಇಡಲಾಗಿದೆ. ಇದು ಕಷ್ಟಸಾಧ್ಯ ಎಂದು ಕಂಪನಿಗಳು ಹೇಳಿಕೊಂಡಿವೆ. ಇ-ಕಾಮರ್ಸ್​ನಲ್ಲಿ ಡೆಲಿವರಿ ಬಾಯ್ಗಳು ಸ್ವಂತ ವಾಹನ ಬಳಸುತ್ತಾರೆ, ಅವರಿಗೆ ಎಲೆಕ್ಟ್ರಿಕ್ ವಾಹನವನ್ನೇ ಬಳಸಿ ಎಂದು ಹೇಳುವುದು ಸರಿಯಾಗುವುದಿಲ್ಲ. ಈ ವಾಹನ ಕೊಳ್ಳುವಷ್ಟು ಆರ್ಥಿಕ ಸಬಲರೂ ಆಗಿರುವುದಿಲ್ಲ ಎಂದು ವಾದ ಮುಂದಿಟ್ಟಿದ್ದಾರೆ. ಆದರೆ, ತಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದಿದ್ದಾರೆ. ಕೆಲವು ಪ್ರಮುಖ ಕಂಪೆನಿಗಳು ತಾವು ಎಲೆಕ್ಟ್ರಿಕ್ ವಾಹನ ಖರೀದಿಸಲು ಬಯಸಿರುವ ಸಂಗತಿಯನ್ನು ತಿಳಿಸಿವೆ. ಯಾವ ರೀತಿ ಪರ್ಯಾಯ ಆಲೋಚನೆ ಮಾಡಬಹುದು ಮತ್ತು ಸರ್ಕಾರದಿಂದ ಏನು ನಿರೀಕ್ಷಿಸಲಾಗುತ್ತಿದೆ ಎಂಬ ಪ್ರಸ್ತಾವನೆ ಸಿದ್ಧಪಡಿಸಿ ಕನಿಷ್ಠ ಕಾಲಮಿತಿಯಲ್ಲಿ ಸಲ್ಲಿಸುವಂತೆ ಕೈಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಕಂಪನಿಗಳಿಗೆ ತಿಳಿಸಿದ್ದಾರೆ. ಇಡೀ ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಮಾಡಿದ್ದು ನಮ್ಮ ರಾಜ್ಯವೇ ಮೊದಲು. ನಮ್ಮ ಪಾಲಿಸಿ ನೋಡಿ ಇತರೆ ರಾಜ್ಯಗಳು ಪಾಲಿಸಿ ತರುತ್ತಿವೆ.
ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಷ್ಟೇ ಅಲ್ಲ, ಇವಿಗೆ ಪರಿವರ್ತನೆ ಮಾಡಿಕೊಂಡ ಹಳೆಯ ವಾಹನಕ್ಕೂ ಸಬ್ಸಿಡಿ ಕೊಟ್ಟರೆ ದೊಡ್ಡ ಪರಿಣಾಮ ಕಾಣಬಹುದು ಎಂದು ಕಂಪನಿಯೊಂದು ಸರ್ಕಾರಕ್ಕೆ ಸಲಹೆ ನೀಡಿದೆ.ಹಳೆಯ ವಾಹನಗಳನ್ನು ಇಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುವ ಯೋಜನೆ ಯಶಸ್ವಿಯಾಗಿದ್ದು, ಶೀಘ್ರವೇ ಪರಿಚಯವಾಗಬಹುದು. ಒಂದು ವೇಳೆ ಈ ಪರಿವರ್ತನೆ ಮಾಡಿಕೊಳ್ಳುವವರಿಗೆ ಸರ್ಕಾರ ಸಬ್ಸಿಡಿ ನೀಡಿದರೆ ಕ್ರಾಂತಿಯೇ ಆಗಲಿದೆ ಎಂದು ಕಂಪನಿ ಮುಖ್ಯಸ್ಥರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಬಡ ಮಧ್ಯಮ, ಮಧ್ಯಮ ವರ್ಗದವರು ಹೆಚ್ಚಾಗಿ ದ್ವಿಚಕ್ರ ವಾಹನ ಬಳಕೆ ಮಾಡುತ್ತಾರೆ, ಈ ವರ್ಗಕ್ಕೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಕಷ್ಟವಾಗಬಹುದು. ಹೀಗಾಗಿ ಇರುವ ವಾಹನವನ್ನೇ ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ನೆರವಾದರೆ ಅನುಕೂಲವಾಗಬಹುದು ಎಂದು ಸ್ಮಾರ್ಟ್ ಮೊಬಿಲಿಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ಕಂಪನಿ ಅಭಿಪ್ರಾಯ ನೀಡಿದೆ.
ಬೆಂಗಳೂರು ಸುತ್ತಮುತ್ತ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಕಂಪನಿ, ಪೂರಕ ಉದ್ಯಮಗಳು, ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ಸ್ಥಾಪನೆಯಾಗುತ್ತಿವೆ. ಅದಕ್ಕೆ ಪೂರಕವಾಗಿ ಜನಸಾಮಾನ್ಯರು ವಾಹನ ಬಳಕೆ ಮಾಡುವಂತಾಗಬೇಕು. ಈ ಹಿನ್ನೆಲೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಪ್ರಯತ್ನ ನಡೆಸಿದೆ. ಒಂದು ವೇಳೆ ಬಳಕೆ ಹೆಚ್ಚಾದರೆ, ಈ ಕ್ಷೇತ್ರಕ್ಕೆ ಇನ್ನಷ್ಟು ಹೂಡಿಕೆ ಬರಲಿದೆ ಎಂಬ ಲೆಕ್ಕಾಚಾರವೂ ಇದೆ.
ಇವಿ ಪಾಲಿಸಿ ಮೊದಲು ತಂದಿದ್ದು ನಮ್ಮ ರಾಜ್ಯ. ಇತ್ತೀಚೆಗೆ ಹೆಚ್ಚುವರಿಯಾಗಿಯೂ ಸೌಲಭ್ಯ ಘೋಷಿಸಿದೆವು. ಇದರಿಂದ ಒಳ್ಳೆಯ ಬೆಳವಣಿಗೆ ಕಾಣಿಸುತ್ತಿದೆ. ಜತೆಗೆ ಬಳಕೆದಾರರಿಗೆ ಸೌಲಭ್ಯ ಕಲ್ಪಿಸಲು, ಮೂಲಸೌಕರ್ಯ ವೃದ್ಧಿಗೂ ಪ್ರಯತ್ನ ನಡೆಸಲಾಗುತ್ತಿದೆ.
|ಜಗದೀಶ ಶೆಟ್ಟರ್ಕೈಗಾರಿಕೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
