| ಹರೀಶ್ ಬೇಲೂರು ಬೆಂಗಳೂರು
ರಾಜ್ಯದ ಸಾವಿರಾರು ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಇನ್ನಷ್ಟು ಸರ್ಕಾರಿ ಜಮೀನನ್ನು ಕಬಳಿಸುತ್ತಲೇ ನಡೆದಿದ್ದಾರೆ. ಈ ಎಲ್ಲ ಅಕ್ರಮ ದಂಧೆಯಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ರೂ. ರಾಜಧನವೂ ಪಾವತಿಯಾಗುತ್ತಿಲ್ಲ…!
ಅಕ್ರಮ ಗಣಿಗಾರಿಕೆ ಸಂಬಂಧ ದಾಖಲಾಗಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿವೆ. 2019ರಲ್ಲಿ 323, 2020ರಲ್ಲಿ 211 ಹಾಗೂ 2021ರಲ್ಲಿ 384 ಸೇರಿ ಒಟ್ಟು 918 ಕೇಸ್​ಗಳು ದಾಖಲಾಗಿವೆ. 2017-18ರಿಂದ 2021-22ರವರೆಗೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ರಾಜ್ಯ ಸರ್ಕಾರಕ್ಕೆ ರಾಜಧನ ಪಾವತಿಸದೆ ಉಪ ಖನಿಜ ಮಾರಾಟ ಮಾಡುತ್ತಿದ್ದ ಕಲ್ಲುಗಣಿ ಗುತ್ತಿಗೆದಾರರಿಂದ 87 ಕೋಟಿ ರೂ. ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಸೂಲಿ ಮಾಡಿದೆ. ಐದು ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದು ಹತ್ತಾರು ಎಕರೆಯ ಸರ್ಕಾರಿ, ಪಟ್ಟಾ ಜಮೀನು, ಗೋಮಾಳ ಒತ್ತುವರಿ ಮಾಡಿಕೊಂಡು ರಾಜಾರೋಷವಾಗಿ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ವರ್ಷದಲ್ಲಿ ಇಷ್ಟೇ ಪ್ರಮಾಣದಲ್ಲಿ ಕಲ್ಲು, ಅದಿರು, ಮರಳು ಸೇರಿ ಮುಖ್ಯ ಖನಿಜ ಮತ್ತು ಉಪ ಖನಿಜಗಳನ್ನು ತೆಗೆಯ ಬೇಕು ಎಂಬ ನಿಯಮ ಇವರಿಗೆ ಲೆಕ್ಕಕ್ಕಿಲ್ಲ. ಜತೆಗೆ, ಸರ್ಕಾರಕ್ಕೆ ರಾಯಲ್ಟಿ ಪಾವತಿಸದೆ ಪರವಾನಗಿ ನವೀಕರಣ ಮಾಡಿಕೊಳ್ಳದೆ ಅಕ್ರಮ ಮುಂದುವರಿಸುತ್ತಿದ್ದಾರೆ.
ಗಣಿಗಾರಿಕೆ ಪರವಾನಗಿಗಣಿಗಾರಿಕೆಗೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1)ಮತ್ತು 2(3) ಹಾಗೂ ಅರಣ್ಯ ಸಂರಕ್ಷಣಾ ಕಾನೂನು 2003(6) ಹಾಗೂ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆದ ಬಳಿಕ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ (20 ವರ್ಷ ಗುತ್ತಿಗೆ) ಹಾಗೂ ನಿರ್ದಿಷ್ಟವಲ್ಲದ (30 ವರ್ಷ ಗುತ್ತಿಗೆ) ಎಂದು 2 ವಿಧದಲ್ಲಿ ಅನುಮತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಮುಖ್ಯ ಖನಿಜ ಗಣಿಗಾರಿಕೆಗಾಗಿ 309 ಗಣಿ ಗುತ್ತಿಗೆ ಸಂಸ್ಥೆಗಳು 83,754 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿವೆ. ಅದೇ ರೀತಿ, ನಿರ್ದಿಷ್ಟ ಉಪ ಖನಿಜ ಗಣಿಗಾರಿಕೆಗಾಗಿ 581 ಕಲ್ಲುಗಣಿ ಗುತ್ತಿಗೆಗಳು, 3190 ಎಕರೆ ಪ್ರದೇಶದಲ್ಲಿ, ನಿರ್ದಿಷ್ಟವಲ್ಲದ ಉಪಖನಿಜ ಗಣಿಗಾರಿಕೆಗಾಗಿ 2,998 ಕಲ್ಲುಗಣಿ ಗುತ್ತಿಗೆಗಳನ್ನು 13,405 ಎಕರೆ ಪ್ರದೇಶಕ್ಕೆ ಅನ್ವಯಿಸುವಂತೆ ನೀಡಲಾಗಿದೆ.
ಎಲ್ಲಿ ಅಕ್ರಮ ಹೆಚ್ಚು?ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಶಿವಮೊಗ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ವಿಜಯಪುರಗಳಲ್ಲಿ ಅತಿ ಹೆಚ್ಚು ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿವೆ. ಈ ಜಿಲ್ಲೆಗಳಲ್ಲಿ ಪ್ರತಿವರ್ಷ ಅಕ್ರಮ ಗಣಿಗಾರಿಕೆ, ಸಾಗಣೆ ಹಾಗೂ ದಾಸ್ತಾನು ಸಂಬಂಧ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಅಕ್ರಮಕ್ಕೆ ಯಾವುದೇ ಪಕ್ಷಭೇದವಿಲ್ಲ, ಎಲ್ಲ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಸಕ್ರಿಯರಾಗಿದ್ದಾರೆ…!
ಇಲಾಖೆಯಿಂದ ಡ್ರೋನ್ ಸರ್ವೆಅಕ್ರಮ ಗಣಿಗಾರಿಕೆಗೆ ನಿಯಂತ್ರಣಕ್ಕೆ ಇಲಾಖೆಯು ರಾಜ್ಯಾದ್ಯಂತ ಡ್ರೋನ್ ಸರ್ವೆ ಆರಂಭಿಸಿದೆ. ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (ಕೆಎಸ್​ಆರ್​ಎಸ್​ಎಸಿ) ಮೂಲಕ ಸರ್ವೆ ನಡೆಸಲಾಗುತ್ತಿದೆ. ಡಿಜಿಪಿಎಸ್ ವರದಿ ಬಂದ ಬಳಿಕ ಪ್ರತಿ ಕಲ್ಲುಗಣಿಗುತ್ತಿಗೆದಾರರಿಂದ ರಾಜಧನ ಪಾವತಿ ಬಾಕಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮೊತ್ತ ವಿವರ ಲಭ್ಯವಾಗಲಿದೆ. ನಂತರ, ಇನ್ನಷ್ಟು ದಂಡ ವಸೂಲಿ ಮಾಡುವುದಾಗಿ ಇಲಾಖೆ ಹೇಳಿದೆ. ರಾಜ್ಯದಲ್ಲಿ ಎಲ್ಲಿಯೇ ಅಕ್ರಮ ಗಣಿಗಾರಿಕೆ ನಡೆದರೂ ಮಾಹಿತಿ ದೊರೆತು ಬಿಗಿ ಕ್ರಮಕೈಗೊಳ್ಳಲು ಸಹಕಾರಿಯಾಗಲಿದೆ. ಪ್ರತಿವರ್ಷ ಕ್ವಾರಿಗಳನ್ನು ಪರಿಶೀಲಿಸಿ ಅನಧಿಕೃತವಾಗಿ ಉತ್ಪಾದನೆ, ರವಾನೆ ಮಾಡಿರುವುದು ಕಂಡುಬಂದರೆ ಗುತ್ತಿಗೆದಾರರಿಗೆ ಬಾಕಿ ರಾಜಧನ ಹಾಗೂ ದಂಡ ವಸೂಲಿಗೆ ಇಲಾಖೆ ನೋಟಿಸ್ ಜಾರಿ ಮಾಡುತ್ತಿದೆ. ಗುತ್ತಿಗೆದಾರರು ಬಾಕಿ ಪಾವತಿಸದಿದ್ದರೆ ಗುತ್ತಿಗೆ ರದ್ದುಪಡಿಸಿ ಬಾಕಿಯನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಆರ್​ಆರ್​ಸಿಗೆ ಶಿಫಾರಸು ಮಾಡಲಾಗುತ್ತಿದೆ. ಹೆಚ್ಚುವರಿ ಉಪ ಖನಿಜಕ್ಕೆ ಸಂಬಂಧಿಸಿ ‘ಒನ್ ಟೈಮ್ ಸೆಟಲ್ಮೆಂಟ್’ ಅನುಷ್ಠಾನವನ್ನು ಜಾರಿಗೆ ತರಲಾಗಿದೆ.
ಸಾನಿಯಾ-ಶೋಯಿಬ್​ ಡಿವೋರ್ಸ್​ಗೆ ಅಸಲಿ ಕಾರಣ ಇಲ್ಲಿದೆ! ಮಲಿಕ್​ ವಿರುದ್ಧವೇ ತಿರುಗಿಬಿದ್ದ ಪಾಕ್​ ಮಾಧ್ಯಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + three =
Remember me
