ಕಲಬುರಗಿ:ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದ ಮಗನನ್ನು ಬದುಕಿಸಿಕೊಳ್ಳಲು ಹೆತ್ತಮ್ಮ ಮತ್ತು ಸಹೋದರಿ ಪರಿತಪಿಸಿದ್ದು ಅಷ್ಟಿಷ್ಟಲ್ಲ. ಮನೆಮಗ ಸಾವಿನ ಕುಣಿಕೆಯಲ್ಲಿ ಒದ್ದಾಡುತ್ತಿರುವುದನ್ನ ಕಣ್ಣಾರೆ ಕಂಡ ಅಮ್ಮ-ಮಗಳು ಕೂಡಲೇ ನೇಣಿಗೆ ಬಳಸಿದ್ದ ಶಾಲ್ ಕತ್ತರಿಸಿದರೂ ಆತ ಅವರ ಮಡಿಲಲ್ಲೇ ಪಾಣಬಿಟ್ಟ ಹೃದಯವಿದ್ರಾವಕ ಘಟನೆ ಹೀರಾಪುರದ ಅರಳಿಕಟ್ಟೆ ಪ್ರದೇಶದಲ್ಲಿ ಸಂಭವಿಸಿದೆ.
ಹೀರಾಪುರದ ಅರಳಿಕಟ್ಟೆ ಪ್ರದೇಶದ ಮನೆಯೊಂದರಲ್ಲಿ ಇಂಜಿನಿಯರಿಂಗ್​ ವಿದ್ಯಾರ್ಥಿ ಪ್ರವಿಣಕುಮಾರ ಕೋಳಕರ್​(21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿರಿಮದುವೆ ತಂದ ಆಪತ್ತು; ಕೋವಿಡ್​ಗೆ ವರನ ತಂದೆ, ವಧುವಿನ ತಾಯಿ ಬಲಿ; ಒಂದೇ ಕುಟುಂಬದ 32 ಜನರಿಗೆ ಸೋಂಕು
ಪ್ರವೀಣಕುಮಾರ ಕೋಳಕರ್​ ಬಿಇ ಅಂತಿಮ ವರ್ಷ ಓದುತ್ತಿದ್ದ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಪರೀಕ್ಷೆ ನಡೆದಿರಲಿಲ್ಲ. ತಂದೆ ನಾಗೇಂದ್ರ ಕೆಎಸ್​ಆರ್​ಪಿ ಪೇದೆ. ಗುರುವಾರ ತಂದೆ ಕೆಲಸಕ್ಕೆ ಹೋದಾಗ ಮನೆಯಲ್ಲಿ ತಾಯಿ ಮತ್ತು ಅಕ್ಕ ಇದ್ದರು. ಈ ವೇಳೆ ಶಾಲ್​ನಿಂದ ಫ್ಯಾನ್​ಗೆ ನೇಣು ಬಿಗಿದುಕೊಂಡಿದ್ದಾನೆ.
ಎಷ್ಟೊತ್ತಾದರೂ ಕೋಣೆಯಿಂದ ಪ್ರವೀಣ್​ ಹೊರ ಬರದಿದ್ದರಿಂದ ಅನುಮಾನಗೊಂಡು ಬಾಗಿಲು ತೆರೆದಾಗ ನೇಣಿಗೆ ಕೊರಳೊಡ್ಡಿರುವುದು ಕಂಡು ಬಂದಿದೆ. ಗಾಬರಿಗೊಂಡ ಅಕ್ಕ ಮತ್ತು ಅವ್ವ, ಶಾಲು ಕತ್ತರಿಸಿ ಪ್ರವೀಣ್​ನನ್ನು ಕೆಳಗಿಳಿಸಿ ಮಡಿಲಲ್ಲಿ ಹಾಕಿಕೊಂಡ ಕೆಲ ಸೆಕೆಂಡ್​ಗಳಲ್ಲೇ ಉಸಿರಾಟ ನಿಂತಿದೆ. ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಫಲ ನೀಡಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಇನ್​ಸ್ಪೆಕ್ಟರ್​ ಸೋಮಲಿಂಗ ಕಿರದಳ್ಳಿ, ಎಎಸ್​ಐ ಹಣಮಂತರಾಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪ್ರವೀಣ್ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರವೀಣ್​ ನಾಲ್ವರು ಸಹೋದರಿಯರು ಮತ್ತು ಪಾಲಕರನ್ನು ಅಗಲಿದ್ದಾನೆ.
video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
