ಬೆಂಗಳೂರು:ಪಿಯುಸಿಯಲ್ಲಿ ಗಣಿತ ಓದದಿದ್ದರೂ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಸಿಗುವಂತಾದರೆ! ಹೌದು ಇಂಥದ್ದೊಂದು ಹೊಸ ವಿದ್ಯಮಾನ ಸದ್ದಿಲ್ಲದೆ ನಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು 2022-23ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಅಪ್ರೂವಲ್ ಪ್ರೊಸೆಸ್ ಹ್ಯಾಂಡ್​ಬುಕ್ ಬಿಡುಗಡೆ ಮಾಡಿ ಹೊಸ ಕಾಲೇಜು, ಶಿಕ್ಷಣ ಸಂಸ್ಥೆ ಹಾಗೂ ಕೋರ್ಸ್​ಗಳ ಆರಂಭ ಹಾಗೂ ಪ್ರವೇಶಕ್ಕೆ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ. ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯಲ್ಲಿ ಕಡ್ಡಾಯವಾಗಿ ಓದಿರಬೇಕಾದ ವಿಷಯಗಳ ಪಟ್ಟಿಯನ್ನು ಇನ್ನಷ್ಟು ವಿಸ್ತಾರಗೊಳಿಸಿದೆ. ಇದರಿಂದಾಗಿ ವಿಜ್ಞಾನದಲ್ಲಿ ಪಿಸಿಎಂಬಿ/ಸಿ ಹೊರತಾಗಿ ಇತರ ಐಚ್ಛಿಕ ವಿಷಯಗಳನ್ನು ವ್ಯಾಸಂಗ ಮಾಡಿದವರೂ ಹಲವು ಕೋರ್ಸ್​ಗಳಿಗೆ ಪ್ರವೇಶ ಗಿಟ್ಟಿಸಬಹುದು ಎಂದು ತಿಳಿಸಿದೆ.
ಈ ಮೊದಲು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳನ್ನು ಕಡ್ಡಾಯವಾಗಿತ್ತು. ನೂತನ ರಾಷ್ಟ್ರಿಯ ಶಿಕ್ಷಣ ನೀತಿ ಅನ್ವಯ ಈ ಪಟ್ಟಿಗೆ ಇನ್ನಷ್ಟು ವಿಷಯ ಸೇರಿಸುವುದಾಗಿ ಕಳೆದ ವರ್ಷವೇ ಘೋಷಿಸಿತ್ತು. ಇದೀಗ ವಿಜ್ಞಾನ ಹಾಗೂ ಇತರ ವಿಭಾಗದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಲು ಅನುವಾಗುವಂತೆ ವಿವಿಧ ಕೋರ್ಸ್​ಗಳಿಗೆ ಅರ್ಹತಾ ಮಾನದಂಡಗಳನ್ನು ಘೋಷಿಸಿದೆ. ಕೆಲ ಇಂಜಿನಿಯರಿಂಗ್ ಕೋರ್ಸ್​ಗಳಿಗೆ ನಿಗದಿಪಡಿಸಿದ 14 ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಓದಿದ್ದರೆ ಸಾಕು ಎಂದು ತಿಳಿಸಿದೆ.
ಯಾರ್ಯಾರು ಅರ್ಹರು?:ಇಂಜಿನಿಯರಿಂಗ್ ಕೋರ್ಸ್​ಗಳಿಗೆ ಒಟ್ಟು 14 ವಿಷಯ ಪರಿಗಣಿಸುವುದಾಗಿ ತಿಳಿಸಿದೆ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಇನ್​ಫಾಮೇಷನ್ ಟೆಕ್ನಾಲಜಿ, ಜೀವಶಾಸ್ತ್ರ, ಇನ್​ಫಾಮೇಟಿಕ್ಸ್ ಪ್ರಾಕ್ಟೀಸ್, ಬಯೋಟೆಕ್ನಾಲಜಿ, ಟೆಕ್ನಿಕಲ್ ವೆಕೇಷನಲ್ ಸಬ್ಜೆಕ್ಟ್, ಕೃಷಿ, ಇಂಜಿನಿಯರಿಂಗ್ ಗ್ರಾಫಿಕ್ಸ್, ಬಿಜಿನೆಸ್ ಸ್ಟಡೀಸ್ ಹಾಗೂ ಎಂಟರ್​ಪ್ರಿನ್ಯೂರ್​ಶಿಪ್ ಕೋರ್ಸ್​ಗಳನ್ನು ಓದಿದವವರು ಆಯಾ ಕೋರ್ಸ್​ಗಳ ಅಗತ್ಯಕ್ಕೆ ಅನುಗುಣವಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡಬಹುದು ಎಂದು ತಿಳಿಸಿದೆ.
ಪದವಿ ಹಾಗೂ ಡಿಪ್ಲೊಮಾದಲ್ಲಿನ ಪ್ರಮುಖ 29 ಕೋರ್ಸ್​ಗಳ ಪಟ್ಟಿ ನೀಡಿರುವ ಎಐಸಿಟಿಇ, ಈ ಪೈಕಿ 18 ಕೋರ್ಸ್​ಗಳಿಗಷ್ಟೇ ಗಣಿತ ವಿಷಯ ಓದಿರಬೇಕು. ಇನ್ನುಳಿದ 11ರಲ್ಲಿ ಇದು ಐಚ್ಛಿಕವಾಗಿರಲಿದೆ. 22 ಕೋರ್ಸ್​ಗಳಿಗೆ ರಸಾಯನಶಾಸ್ತ್ರ ಅಥವಾ ಭೌತಶಾಸ್ತ್ರ ಇಲ್ಲವೇ ಎರಡನ್ನೂ ಓದಿರುವುದು ಕಡ್ಡಾಯ ಎಂದು ತಿಳಿಸಿದೆ. ಆದರೆ, ಇದರಲ್ಲಿಯೇ 11ಕ್ಕೂ ಅಧಿಕ ಕೋರ್ಸ್​ಗಳಿಗೆ ಒಟ್ಟಾರೆ 14 ವಿಷಯಗಳಲ್ಲಿ ಒಂದನ್ನು ಐಚ್ಛಿಕವಾಗಿ ಓದಿದ್ದರೆ ಪರಿಗಣಿಸಲಿದೆ. ಆದರೆ, ಅಭ್ಯರ್ಥಿಗಳು ಕನಿಷ್ಠ ಶೇ.45, ಮೀಸಲಾತಿ ವರ್ಗದವರು ಕನಿಷ್ಠ 40 ಅಂಕಗಳನ್ನು ಗಳಿಸಿರಬೇಕು ಎಂದು ಸೂಚಿಸಿದೆ.
ಈ ಕೋರ್ಸ್​ಗಳಿಗೆ ಅವಕಾಶ:ಆರ್ಕಿಟೆಕ್ಚರ್, ಪ್ಯಾಕೇಜಿಂಗ್ ಟೆಕ್ನಾಲಜಿ ಹಾಗೂ ಫ್ಯಾಷನ್ ಟೆಕ್ನಾಲಜಿ ಕೋರ್ಸ್​ಗಳಿಗೆ ದ್ವಿತೀಯ ಪಿಯುಸಿಯಲ್ಲಿ ಎಐಸಿಟಿಇ ಸೂಚಿಸಿರುವ 14 ವಿಷಯಗಳಲ್ಲಿ ಯಾವುದಾದರೂ ಮೂರನ್ನು ಓದಿರುವ ಯಾವುದೇ ವಿಭಾಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ. ಇದಲ್ಲದೆ, ಪ್ಲಾನಿಂಗ್, ಅಪ್ಲೈಡ್ ಆರ್ಟ್ಸ್ ಆಂಡ್ ಕ್ರಾಫ್ಟ್್ಸ ಡಿಸೈನ್, ಹೋಟೇಲ್ ಮ್ಯಾನೇಜ್​ವೆುಂಟ್ ಆಂಡ್ ಕೇಟರಿಂಗ್ ಟೆಕ್ನಾಲಜಿ ಕೋರ್ಸ್​ಗಳಿಗೆ ದ್ವಿತೀಯ ಪಿಯುಸಿಯನ್ನು ಪಾಸಾದ ಎಲ್ಲರಿಗೂ ಪ್ರವೇಶ ನೀಡಲಾಗುತ್ತದೆ. ಸಾಮಾನ್ಯ ವರ್ಗದವರು ಶೇ.45, ಇತರರು ಶೇ.40 ಅಂಕ ಪಡೆದಿರಬೇಕು ಎಂದು ಹೇಳಿದೆ.
ಇಂಟಿಗ್ರೇಟೆಡ್ ಕೋರ್ಸ್:ಐದು ವರ್ಷಗಳ ಇಂಟಿಗ್ರೇಟೆಡ್/ಡ್ಯುಯಲ್ ಕೋರ್ಸ್​ಗಳಿಗೂ ಇದೇ ನಿಯಮ ಅನ್ವಯ ವಾಗಲಿವೆ. 3 ವರ್ಷದ ವೆಕೇಷನಲ್ ಪದವಿ ಕೋರ್ಸ್​ಗಳಿಗೆ ದ್ವಿತೀಯ ಪಿಯು ಪಾಸಾದ ವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಪರೀಕ್ಷಾ ಯಶಸ್ಸಿಗೆ ಸಿದ್ಧತಾ ಸೂತ್ರ; ಇಲ್ಲಿವೆ ಕೆಲವು ಟಿಪ್ಸ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 20 =
Remember me
