ಬೆಂಗಳೂರುಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿ ಮೂಲಕ ಹಂಚಿಕೆ ಮಾಡುವ ಇಂಜಿನಿಯರಿಂಗ್ ಸೀಟುಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸರ್ಕಾರಿ ಇಂಜಿನಿಯರಿಂಗ್ ಸೀಟುಗಳು ಬಿಕರಿಯಾಗಿವೆ. ಕೇವಲ 3,500 ಸೀಟುಗಳಷ್ಟೇ ಉಳಿದಿವೆ.
ರಾಜ್ಯದ ಸರ್ಕಾರಿ ಮತ್ತು ಖಾಸಗಿ ಇಂಜಿಜಿಯರಿಂಗ್ ಕಾಲೇಜುಗಳು ಸೇರಿ ಒಟ್ಟು 58 ಸಾವಿರ ಸೀಟುಗಳು ಕೆಇಎ ಸಿಇಟಿ-2023ರಲ್ಲಿ ಲಭ್ಯವಾಗಿದ್ದವು. ಇದರಲ್ಲಿ 54,500 ಸೀಟುಗಳು ಭರ್ತಿಯಾಗಿದ್ದು, 3,500 ಸೀಟುಗಳಷ್ಟೇ ಬಾಕಿ ಉಳಿದಿವೆ. ಶೇ.75ಕ್ಕೂ ಹೆಚ್ಚಿನ ಸೀಟುಗಳು ಕಂಪ್ಯೂಟರ್ ಸೈನ್ಸ್ ಮತ್ತು ಇದಕ್ಕೆ ಸಂಬಂಧಿತ ಕೋರ್ಸ್‌ಗಳಾಗಿವೆ.
ಹೆಚ್ಚು ಸೀಟು ಖಾಲಿಯಾಗಿದ್ದು ಇದೇ ಮೊದಲು:
ಪ್ರತಿ ವರ್ಷ ಶೇ.50 ರಷ್ಟು ಸೀಟುಗಳು ಉಳಿಯುತ್ತಿದ್ದವು. 2021-22ರಲ್ಲಿ 30 ಸಾವಿರ, 2022-23ರಲ್ಲಿ 15 ಸಾವಿರ ಸೀಟುಗಳು ಉಳಿದಿದ್ದವು. ಇದೇ ಮೊದಲ ಬಾರಿಗೆ 3,500 ಸೀಟುಗಳಷ್ಟೇ ಬಾಕಿ ಉಳಿದಿವೆ.
ಕೋರ್ಸ್‌ನಲ್ಲಿ ಬದಲಾವಣೆ:
ಹಿಂದಿನ ವರ್ಷಗಳಲ್ಲಿ ಸಿವಿಲ್, ಮೆಕಾನಿಕಲ್‌ಗೆ ವಿಭಾಗಕ್ಕೆ ಸಂಬಂಧಿಸಿ ಕೋರ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಆದರೆ, ಕಳೆಚ 3-4 ವರ್ಷಗಳಿಂದ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ಕೋರ್ಸ್‌ಗಳ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ.
ಕಂಪ್ಯೂಟರ್ ಸೈನ್ಸ್ ಜತೆಗೆ ರೊಬೊಟಿಕ್, ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಸೇರಿ ಇನ್ನಿತರೆ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಅಲ್ಲದೆ, ತಾಂತ್ರಿಕತೆಗೆ ಸಂಬಂಧಿಸಿದ ಕೋರ್ಸ್‌ಗಳಿಗೆ ಉದ್ಯೋಗವಕಾಶಗಳು ದೊಡ್ಡಮಟ್ಟದಲ್ಲಿ ದೊರೆಯುತ್ತಿರುವ ಕಾರಣ, ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ, ಬದಲಾದ ಕಾಲಘಟ್ಟದಲ್ಲಿ ಕಾಲೇಜುಗಳಲ್ಲಿ ಕೊರ್ಸ್‌ಗಳನ್ನು ಬದಲಾವಣೆ ಮಾಡಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಎನ್‌ಇಪಿ ಆಶಯದಂತೆ ಇಂಜಿನಿಯರಿಂಗ್‌ನಲ್ಲಿ ಕನ್ನಡ ಮಾಧ್ಯಮವನ್ನು ಪರಿಚಯಿಸಲಾಯಿತು. ಚಿಕ್ಕಬಳ್ಳಾಪುರ, ಮೈಸೂರು, ಬೀದರ್‌ನಲ್ಲಿ ತಲಾ ಒಂದು ಕಾಲೇಜುಗಳಿಗೆ 60 ಇನ್‌ಟೇಕ್‌ಗಳಿದ್ದವು. ಯಾವುದೇ ವಿದ್ಯಾರ್ಥಿಗಳು ಪ್ರವೇಶ ಪಡೆದಿರಲಿಲ್ಲ. ಈ ವರ್ಷ ಕೂಡ ಚಿಕ್ಕಬಳ್ಳಾಪುರದ ಎಸ್‌ಜೆಸಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದಿದ್ದರು. ಕೊನೆಗೆ ಪ್ರವೇಶವನ್ನು ಹಿಂಪಡೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 15 =
Remember me
