ಬೆಂಗಳೂರು:ನಾಗರಿಕ ಸೇವೆಗಳ ಅಧಿನಿಯಮದ ಪ್ರಕಾರ 4 ವರ್ಷಕ್ಕೂ ಹಿಂದಿನ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ಸರ್ಕಾರಿ ನೌಕರನ ವಿರುದ್ಧ ತನಿಖೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 2005-06ರಲ್ಲಿನ ಕರ್ತವ್ಯಲೋಪ ಆರೋಪಕ್ಕೆ ಸಂಬಂಧಿಸಿ 2022ರಲ್ಲಿ ನೀಡಲಾಗಿದ್ದ ಚಾರ್ಜ್ ಮೆಮೋ ಹಾಗೂ ಪ್ರಕರಣದ ತನಿಖಾಧಿಕಾರಿ ನೇಮಿಸಿದ್ದ ಆದೇಶ ರದ್ದುಪಡಿಸಿದೆ.
ಹೈಕೋರ್ಟ್ ಹೇಳಿದ್ದೇನು?: ಪ್ರಶ್ನಿಸಿ ಕರ್ನಾಟಕ ಗೃಹ ಮಂಡಳಿ ನಿವೃತ್ತ ಇಂಜಿನಿಯರ್​ಗಳಾದ ಅನಿಲ್​ಕುಮಾರ್ ಹಾಗೂ ಟಿ. ಮಲ್ಲಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಸ್.ಜಿ. ಪಂಡಿತ್ ಅವರಿದ್ದ ಪೀಠ ಮಾನ್ಯ ಮಾಡಿದೆ. ನಿವೃತ್ತ ನೌಕರರಾಗಿರುವ ಅರ್ಜಿದಾರರ ವಿರುದ್ಧದ ಆರೋಪಗಳು 4 ವರ್ಷಕ್ಕೂ ಹಿಂದಿನ ಘಟನೆಗೆ ಸಂಬಂಧಿಸಿದ್ದಾಗಿದೆ. 2005-06ರಲ್ಲಿ ನಡೆದಿರುವ ಘಟನೆ ಕುರಿತು ತನಿಖೆ ಆರಂಭಿಸುವ ಹಾಗೂ ತನಿಖಾ ಪ್ರಕ್ರಿಯೆ ಬಗ್ಗೆ 2022ರ ಜೂ.21ರಂದು ದೋಷಾರೋಪ ಮೆಮೋ ಹೊರಡಿಸಲಾಗಿದೆ. 4 ವರ್ಷಕ್ಕಿಂತ ಹಳೆಯ ಪ್ರಕರಣಗಳಲ್ಲಿ ನಿವೃತ್ತ ನೌಕರರ ವಿರುದ್ಧ ಚಾರ್ಜ್ ಮೆಮೋ ಹೊರಡಿಸಲು ಕೆಸಿಎಸ್​ಆರ್ ನಿಯಮ 214 (2)(ಬಿ)(ಜಿಜಿ)ರ ಅಡಿಯಲ್ಲಿ ನಿರ್ಬಂಧವಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಹೊರಡಿಸಿರುವ ಆರೋಪ ಮೆಮೋ ಮಾನ್ಯವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?:ಕೆಎಚ್​ಬಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್​ಗಳಾಗಿದ್ದ ಅನಿಲ್ ಕುಮಾರ್ ಹಾಗೂ ಮಲ್ಲಣ್ಣ ಕ್ರಮವಾಗಿ 2018ರ ಜೂ.30 ಹಾಗೂ 2020ರ ಆ.31ರಂದು ನಿವೃತ್ತರಾಗಿದ್ದರು. ಈ ಮಧ್ಯೆ, 2006ರಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ 2022ರ ಜೂ.21ರಂದು ಆರೋಪ ಮೆಮೋ ಜಾರಿಗೊಳಿಸಲಾಗಿತ್ತು. ಜತೆಗೆ, ಆರೋಪದ ತನಿಖೆಗೆ ಅಧಿಕಾರಿಯನ್ನು ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + three =
Remember me
