ಗುಂಡ್ಲುಪೇಟೆ/ಎಚ್.ಡಿ.ಕೋಟೆ:ಬಂಡೀಪುರ ಹುಲಿ ಯೋಜನೆಯ ಗುಂಡ್ರೆ ವಲಯದಲ್ಲಿ ಮೀನುಗಳನ್ನು ಅಕ್ರಮವಾಗಿ ಬೇಟೆ ಆಡುತ್ತಿದ್ದವರನ್ನು ಹಿಡಿಯಲು ಹೋಗಿ ಸಾವಿಗೀಡಾದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಮಹೇಶ್ ಮನೆಗೆ ಭಾನುವಾರ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಸಾಂತ್ವನ ಹೇಳಿದರು. ಎಚ್.ಡಿ. ಕೋಟೆ ತಾಲೂಕಿನ ಬ್ರಹ್ಮಗಿರಿ ಹಾಡಿಗೆ ಸಚಿವರು ತೆರಳಿದಾಗ ಮಹೇಶ್ ಚಿಕ್ಕಮ್ಮ ಸುಶೀಲಾ, ಎನ್. ಬೇಗೂರಿನಲ್ಲಿ
ವೈರ್​ಲೆಸ್ ಆಪರೇಟರ್ ಆಗಿದ್ದ ಮಹೇಶ್​ನನ್ನು ಕರೆದೊಯ್ದಿರುವ ಅರಣ್ಯಾಧಿಕಾರಿಗಳೇ ಆತನ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆ ನೌಕರರ ಸಾವಿನ ಸುತ್ತ ಅನುಮಾನವಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ನೌಕರರ ಸಾವಿಗೆ ಕಾರಣರಾದವರು ಎಷ್ಟೇ ಪ್ರಭಾವಿಗಳಾದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಮೃತ ನೌಕರರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದರು. ಅರಣ್ಯ ಇಲಾಖೆಯಿಂದ 10 ಲಕ್ಷ ರೂ. ಪರಿಹಾರದಲ್ಲಿ ಮುಂಗಡವಾಗಿ 1 ಲಕ್ಷ ರೂ. ಮತ್ತು ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ನೀಡಿದರು. ಶುಕ್ರವಾರ ರಾತ್ರಿ ಗುಂಡ್ರೆ ಅರಣ್ಯ ವಲಯದ ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನು ಹಿಡಿಯಲು ನದಿಗೆ ಇಳಿದಿದ್ದವರನ್ನು ಬೆನ್ನಟ್ಟಿದ್ದ ಅರಣ್ಯ ಇಲಾಖೆಯ ಬ್ರಹ್ಮಗಿರಿ ಹಾಡಿಯ ದಿನಗೂಲಿ ನೌಕರ ಶಿವಕುಮಾರ್ ಮತ್ತು ಕಾಯಂ ನೌಕರ ಚಾಮರಾಜನಗರ ಜಿಲ್ಲೆಯ ಪುಣಜನೂರು ಗ್ರಾಮದ ಮಹೇಶ್ ಅವರನ್ನು ಮೀನುಗಾರರು ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದರು ಎಂದು ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + six =
Remember me
