ಬೆಂಗಳೂರು:ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಶೋ ಬಿಗ್ ಬಾಸ್ ಕನ್ನಡ 10 ರ ಗ್ರ್ಯಾಂಡ್ ಫಿನಾಲೆ ನಿನ್ನೆ ಮುಕ್ತಾಯವಾಗಿದೆ. ಕಾರ್ತಿಕ್ ಮಹೇಶ್ ಬಿಬಿಕೆ 10 ರ ವಿನ್ನರ್​​​ ಆಗಿ ಹೊರಹೊಮ್ಮಿದ್ದಾರೆ. ಡ್ರೋನ್ ಪ್ರತಾಪ್ ಮೊದಲನೇ ರನ್ನರ್ ಅಪ್ ಆಗಿದ್ದಾರೆ. ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಈ ಎಲ್ಲದರ ಮಧ್ಯೆ ನಿರಾಸೆಯಾಗಿರುವುದು ಮಾತ್ರ ವಿನಯ್​​​​ ಫ್ಯಾನ್ಸ್​​​ಗೆ. ಹೌದು, ಬಿಗ್​ಬಾಸ್ ಮನೆಯ ಆನೆ ಎಂದೇ ಗುರುತಿಸಿಕೊಂಡಿದ್ದ ವಿನಯ್ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 10’ರ ವಿನ್ನರ್ ಆಗುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ ಅವರು ಟಾಪ್​ 3 ಸ್ಥಾನಕ್ಕೂ ಬರಲೂ ಆಗಲಿಲ್ಲ. ಇದೇ ಕಾರಣಕ್ಕೆ ವಿನಯ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ. ಜೊತೆಗೆ ವಿನಯ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ವಿನಯ್​​​ ಅವರಿಗೆ ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿಗೆ ಖುಷಿ ಆಗಿದೆ.

A post shared by Vinay Gowda (@vinaygowdaactor)

ಸ್ಟ್ರಾಂಗ್ ಸ್ಪರ್ಧಿಬಿಗ್​​​​ ಬಾಸ್​​ ವೀಕ್ಷಕರಿಗೆ ಗೊತ್ತಿರುವ ಹಾಗೆ ಆರಂಭದಿಂದಲೂ ವಿನಯ್ ಗೌಡ ಅವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡವರು. ಸುದೀಪ್ ಕೈ ಎತ್ತುವ ಇಬ್ಬರು ಸ್ಪರ್ಧಿಗಳ ಪೈಕಿ ತಾವೂ ಒಬ್ಬರು ಎಂದು ವಿನಯ್ ಕೂಡ ಅಂದುಕೊಂಡಿದ್ದರು. ಆದರೆ ಶೋ ಲೆಕ್ಕಚಾರವೇ ಬೇರೆಯಾಗಿತ್ತು. ವಿನಯ್ ಗೌಡ ಅವರು ಮೂರನೇ ರನ್ನರ್​ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಇದನ್ನು ವಿನಯ್ ಅವರು ಸಹ ಯಾವುದೇ ಬೇಸರವಿಲ್ಲದೆ ಸ್ವೀಕರಿಸಿದ್ದಾರೆ.
ಕಲರ್ಸ್ ಪೋಸ್ಟ್ ಶೇರ್ ಮಾಡಿದ ವಿನಯ್ಕಲರ್ಸ್ ಕನ್ನಡ ವಾಹಿನಿ ಎಲ್ಲಾ ವಿಜೇತರ ಪಟ್ಟಿಯನ್ನು ತನ್ನ ಪೇಜ್​​​​​​​ನಲ್ಲಿ ​​​ಶೇರ್ ಮಾಡಿದ್ದು ವಿನಯ್ ಮೂರನೇ ರನ್ನರ್ ಅಪ್ ಎಂಬುದನ್ನು ಪೋಸ್ಟ್ ಮಾಡಿದೆ. ಈ ಪೋಸ್ಟರ್​ನ ವಿನಯ್ ಗೌಡ ಅವರು ಕೂಡ ತಮ್ಮ ವಾಲ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿನಯ್ ಅಭಿಮಾನಿಗಳು ‘ನೀವು ನಿಜವಾದ ವಿನ್ನರ್’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನೀವು ಎಲ್ಲರ ಹೃದಯ ಗೆದ್ದಾಯಿತು, ‘ಕಿಂಗ್ ಯಾವಾಗಲೂ ಕಿಂಗ್’, ‘ನೀವೇ ಚಾಂಪಿಯನ್’, ‘ನಿಮ್ಮದು ಅದ್ಭುತ ಆಟ’, ‘ಲವ್ ಯೂ ಬಾಸ್’ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ವಿಶೇಷವೆಂದರೆ ವಿನಯ್ ಅವರನ್ನು ಕಿಚ್ಚ ಸುದೀಪ್ ಅವರೇ ಮೆಚ್ಚಿಕೊಂಡಿದ್ದಾರೆ. ಸದ್ಯ ಬಿಗ್ ಬಾಸ್ ಮುಕ್ತಾಯವಾಗಿದೆ. ಈ ವರ್ಷಾಂತ್ಯಕ್ಕೆ ಮತ್ತೊಂದು ಸೀಸನ್ ಜೊತೆ ಕಲರ್ಸ್ ಕನ್ನಡ ವಾಹಿನಿ ಬರುವುದಕ್ಕೆ ಸಿದ್ಧತೆ ನಡೆಸಿದೆ.
ದರ್ಶನ್ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಈ ರೀತಿ ಉತ್ತರಿಸಿದ ಸುದೀಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
