ಬೆಂಗಳೂರು:ಲೀಲಮ್ಮನವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಅತಿಯಾದ ಪ್ರೀತಿ. ತಮ್ಮ ಜೀವನದಲ್ಲಿ ಎಂದು ಯಾರನ್ನೂ ದ್ವೇಷ ಮಾಡಲಿಲ್ಲ. ಊರಲ್ಲಿರೋ ಪಶುಗಳಿಗೆ ನೆರವಾಗಲೆಂದೇ ಅವರು ಪಶು ಆಸ್ಪತ್ರೆಯನ್ನ ಕಟ್ಟಿಸಿದರು. ಆಪ್ತರು ಹೇಳುವ ಪ್ರಕಾರ ತೋಟದಲ್ಲಿನ ಚೇಳು, ಗೋಡೆ ಮೇಲಿನ ಹಲ್ಲಿಯನ್ನು ಅಮ್ಮ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ಸೋಲದೇವನಹಳ್ಳಿಯಲ್ಲಿರುವ ಮನೆಯಲ್ಲಿ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಾಸವಿದ್ದರು. ಇದೀಗ ಈ ಮನೆಯಲ್ಲಿ ಲೀಲಾವತಿ ಅವರು ಮುದ್ದಿನಿಂದ ಸಾಕಿದ್ದ ಬ್ಲ್ಯಾಕಿ ನಾಯಿ ಕೂಡ ಮನೆಯ ಒಡತಿಯಿಲ್ಲದೆ ರೋದಿಸುತ್ತಿದೆ. ಮನೆಯಲ್ಲಿ ಹಾಕಿದ್ದ ಟಿವಿಯಲ್ಲಿ ಲೀಲಮ್ಮನವರ ಫೋಟೋ ನೋಡುತ್ತಾ ಕಣ್ಣೀರು ಹಾಕುತ್ತಿದೆ.
ಬ್ಲ್ಯಾಕಿ ನಾಯಿ ಮನೆ ಮುಂದೆ ಕೂತಿದ್ದು, ಬಾಗಿಲನ್ನು ಬಿಟ್ಟು ಕದಲುತ್ತಿಲ್ಲ. ಮನೆಯ ಆವರಣದಲ್ಲೇ ಗಂಟೆಗಳ ಕಾಲ ಕದಲದೇ ಕುಳಿತಿದೆ. ನಾಯಿ ಕುಳಿತಿರುವ ಭಂಗಿ ನೋಡಿದಾಗ ತನ್ನ ಮನೆಯೊಡತಿ ಬರುವುದಕ್ಕೆ ಕಾಯುತ್ತಿದೆಯೇನೋ ಎನ್ನುವ ರೀತಿಯಲ್ಲಿ ಭಾಸವಾಗುತ್ತಿದೆ.
ಲೀಲಮ್ಮನವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಅವರ ನಿವಾಸದಲ್ಲಿ ಭಾವ ಚಿತ್ರವನ್ನಿಟ್ಟು ಕಂಬನಿ ಮಿಡಿಯಲಾಗಿದೆ. ಅಮ್ಮನವರ ನಿವಾಸದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಅಭಿಮಾನಿಗಳು ಮನೆಯತ್ತ ಬಂದು ಹೋಗುತ್ತಿದ್ದಾರೆ. ಅವರ ಮನೆಯ ಸಿಬ್ಬಂದಿ ಕೂಡ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ತೋಟದಲ್ಲಿವೆ ಸಾಕಷ್ಟು ನಾಯಿಗಳುಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಸಾಕಷ್ಟು ನಾಯಿಗಳನ್ನು ಸಾಕಲಾಗಿದೆ. ವಿವಿಧ ತಳಿಯ ನಾಯಿಗಳನ್ನು ಲೀಲಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು.

ಹಿರಿಯ ನಟಿ ಲೀಲಾವತಿ ನಿಧನ ಹಿನ್ನೆಲೆ ‘ನಮ್ಮ ಜಾತ್ರೆ’ ನಾಳೆಗೆ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
