ಬೆಂಗಳೂರು:ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ರಾಜ್ಯಾದ್ಯಂತ ಮತ್ತೆ ಆರಂಭಗೊಂಡ ಮರುದಿನವೇ ಬಿಯರ್ ಹಾಗೂ ವೈನ್ ಹೊರತುಪಡಿಸಿ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್)ಮೇಲಿನ ದರ ಏರಿಕೆಗೊಂಡಿದೆ. ಬೆಲೆ ಹೆಚ್ಚಳದ ಹೊರತಾಗಿಯೂ ಮದ್ಯದ ಬೇಡಿಕೆ ಅಧಿಕಗೊಂಡಿದ್ದು, ಮಂಗಳವಾರ ಕೂಡ ಹಲವೆಡೆ ದಾಸ್ತಾನು ಖಾಲಿಯಾಗಿದೆ. ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6 ಹೆಚ್ಚಿಸಲಾಗಿದೆ. 90 ಎಂಎಲ್ ಬಾಟಲ್ ಮದ್ಯದ ಬೆಲೆ 85 ಪೈಸೆ ಹಾಗೂ 180 ಎಂಎಲ್ ಬಾಟಲ್ ಮದ್ಯ 2 ರೂ.ಏರಿಕೆಯಾಗಿದೆ. ಪ್ರತಿ ಬಲ್ಕ್ ಲೀಟರ್ ಆಧಾರದಲ್ಲಿ ಅಬಕಾರಿ ಸುಂಕದ ದರ ಹೆಚ್ಚಳಗೊಂಡಿವೆ.
ಕಳೆದ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6 ಹೆಚ್ಚಿಸಿತ್ತು. ಏಪ್ರಿಲ್​ನಿಂದಲೇ ಇದು ಜಾರಿಯಾಗಬೇಕಿತ್ತಾದರೂ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. 42 ದಿನಗಳಿಂದ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಸೋಮವಾರ (ಮೇ 4) ಮರುಆರಂಭವಾಗಿದೆ. ಹೊಸ ದರ ಅನ್ವಯ ಪ್ರಕಾರ ಮದ್ಯ ಮಾರಾಟ ಮಾಡಲಾಗುತ್ತದೆ. ರಾಜ್ಯ ಪಾನೀಯ ನಿಗಮದಲ್ಲಿ (ಕೆಎಸ್​ಬಿಸಿಎಲ್) ಸಂಗ್ರಹವಾಗಿರುವ ಮದ್ಯವನ್ನೂ ಹೊಸ ದರದ ಅನ್ವಯವೇ ಮಾರಾಟ ಮಾಡುವಂತೆ ಅಬಕಾರಿ ಇಲಾಖೆ ಮದ್ಯದಂಗಡಿ ಮಾಲೀಕರಿಗೆ ಸೂಚಿಸಿದೆ. ಕಳೆದ ವರ್ಷ ಬಿಯರ್, ವೈನ್ ಹಾಗೂ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿತ್ತು. ಈ ವರ್ಷ ಲಿಕ್ಕರ್​ಗಷ್ಟೇ ಸೀಮಿತವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ:7 ಲಕ್ಷ ಕೋಟಿ ರೂಪಾಯಿ ಕೇವಲ ಎರಡೇ ದಿನದಲ್ಲಿ ಕೈ ಬಿಟ್ಟು ಹೋಯಿತು!
ದೇಶಾದ್ಯಂತ ಏರಿದ ನಶೆ:ಲಾಕ್​ಡೌನ್ ನಿಯಮ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ದೇಶಾದ್ಯಂತ ಭರ್ಜರಿ ವಹಿವಾಟು ನಡೆದಿದೆ. ಉತ್ತರ ಪ್ರದೇಶದಲ್ಲಿ ಒಂದೇ ದಿನ 100 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಆಂಧ್ರದಲ್ಲಿ ಶೇ.75 ತುಟ್ಟಿ:ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಶೇ.75 ಏರಿಕೆ ಆಗಿದೆ. ದೆಹಲಿ ಸರ್ಕಾರ ಕೂಡ ಶೇ.70 ಏರಿಕೆ ಮಾಡಿದೆ. ಈ ದರವನ್ನು ಕರೊನಾ ಶುಲ್ಕ ಎಂದು ಕರೆಯಲಾಗಿದೆ.
242 ಕೋಟಿ ರೂ. ವಹಿವಾಟು:ರಾಜ್ಯಾದ್ಯಂತ ಮೊದಲ ದಿನ 45 ಕೋಟಿ ರೂ. ಮದ್ಯದ ವಹಿವಾಟು ನಡೆದರೆ, ಎರಡನೇ ದಿನ 242 ಕೋಟಿ ರೂ. ದಾಟಿದೆ. ಮಂಗಳವಾರ ಒಂದೇ ದಿನ 182 ಕೋಟಿ ರೂ.ಗಳ 36.37 ಲಕ್ಷ ಲೀಟರ್ ಮದ್ಯ ಹಾಗೂ 15 ಕೋಟಿ ರೂ. ಮೌಲ್ಯದ 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಎರಡು ದಿನದಲ್ಲಿ 10.92 ಲಕ್ಷ್ಷ ಲೀಟರ್ ಬಿಯರ್, 44.42 ಲಕ್ಷ ಲೀಟರ್ ಐಎಂಎಲ್ ಮಾರಾಟವಾಗಿರುವುದು ಹೊಸ ದಾಖಲೆಯಾಗಿರುವುದಾಗಿ ಅಬಕಾರಿ ಇಲಾಖೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 3 =
Remember me
