|ಸಂದೀಪ್ ಸಾಲ್ಯಾನ್ಬಂಟ್ವಾಳ
ಮದುವೆಯ ಸಂಭ್ರಮ ಸ್ಮರಣೀಯವಾಗಿಸಲು ಹಲವರು ಹಲವು ರೀತಿ ವಿಶೇಷತೆ ಮಾಡಿಕೊಳ್ಳುತ್ತಾರೆ. ಪರಿಸರ ಪ್ರೇಮಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಮಣಿ ರಾಮಕುಂಜ ಅವರ ಮಗಳು ಮೇಧಾ ಹಾಗೂ ರಂಜನ್ ಆಚಾರ್ಯ ಮದುವೆಯ ಆಮಂತ್ರಣ ಇಂಥ ವೈಶಿಷ್ಟೃಗಳೊಂದಿಗೆ ಗಮನ ಸೆಳೆಯುತ್ತಿದೆ. ಪರಿಸರ ಪ್ರೀತಿಯೊಂದಿಗೆ ಪ್ಲಾಸ್ಟಿಕ್ ಅಪಾಯದ ಕುರಿತು ಜಾಗೃತಿ ಸಂದೇಶ ಆಮಂತ್ರಣದಲ್ಲಿ ಮುದ್ರಿಸಿದ್ದಾರೆ. ಅವರ ಕಾಲೇಜು ವಿದ್ಯಾರ್ಥಿನಿ ಕೂಡ ಇದೇ ಮಾದರಿಯಲ್ಲಿ ವಿವಾಹದ ಆಮಂತ್ರಣ ಮುದ್ರಿಸಿದ್ದಾರೆ.
ವೀಳ್ಯದೆಲೆ ಮಾದರಿಯ ಆಮಂತ್ರಣದ ಒಳಪುಟದಲ್ಲಿ ‘ನಿಮ್ಮಿಂದ ಗಿಡವಾಗಲಿ’ ಎಂಬ ಸಂದೇಶ ನೀಡಿ ತರಕಾರಿ ಬೀಜಗಳನ್ನು ಇಡಲಾಗಿದೆ. ಬದನೆ, ಬೆಂಡೆ, ಅಲಸಂಡೆ, ಹರಿವೆ ಬೀಜಗಳಿವೆ. ಆಮಂತ್ರಣದಲ್ಲಿ ಪುರೋಹಿತರು ಹಾಗೂ ಪಾಕಶಾಲೆಯ ನೇತೃತ್ವ ವಹಿಸಿದವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಆಮಂತ್ರಣದ ಕೊನೆಯ ಪುಟದಲ್ಲಿ ಪ್ಲಾಸ್ಟಿಕ್‌ನಿಂದಾಗುವ ಅಪಾಯ, ಪರಿಸರ ಜಾಗೃತಿಯ ಮಾಹಿತಿ ಮುದ್ರಿಸಲಾಗಿದೆ. ಮದುವೆ ಆಮಂತ್ರಣ ತಲುಪಿದ ಪ್ರತಿ ಮನೆಗೂ ಪ್ಲಾಸ್ಟಿಕ್ ಜಾಗೃತಿಯ ಮಾಹಿತಿ ಹಾಗೂ ತರಕಾರಿ ಬೀಜಗಳು ತಲುಪಿವೆ.
ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯದ ಬಗ್ಗೆ ಮದುವೆ ಆಮಂತ್ರಣ ಪತ್ರದಲ್ಲಿ ಜಾಗೃತಿ ಮೂಡಿಸಲಾಗಿದೆ. ಜತೆಗೆ ತರಕಾರಿ ಬೀಜಗಳನ್ನು ನೀಡಲಾಗಿದೆ. ಮದುವೆ ದಿನ ಎಲ್ಲ ಅತಿಥಿಗಳಿಗೆ ಬಟ್ಟೆಚೀಲ ವಿತರಿಸಲಾಗುವುದು.|ಪ್ರೊ.ರಾಜಮಣಿ ರಾಮಕುಂಜ, ನಿವೃತ್ತ ಪ್ರಾಧ್ಯಾಪಕರು
ಅತಿಥಿಗಳಿಗೆ ಬಟ್ಟೆಚೀಲ ವಿತರಣೆ:ಪ್ಲಾಸ್ಟಿಕ್ ಬಳಕೆಯಿಂದ ಅಪಾಯದ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮ ನಿರಂತರ ನಡೆಸುತ್ತಿರುವ ರಾಜಮಣಿ ರಾಮಕುಂಜ ಆಯೋಜನೆಯ ಕಾರ್ಯಕ್ರಮಗಳು ಪ್ಲಾಸ್ಟಿಕ್ ಮುಕ್ತವಾಗಿರುತ್ತವೆ. ಡಿ.14ರಂದು ನಡೆಯುವ ಮಗಳ ಮದುವೆಯೂ ಪ್ಲಾಸ್ಟಿಕ್ ಮುಕ್ತವಾಗಿರಬೇಕೆಂಬುದು ಅವರ ಕನಸು. ಮದುವೆಗೆ ಬಂದ ಅತಿಥಿಗಳಿಗೆ ಬಟ್ಟೆಚೀಲ ವಿತರಣೆ ನಡೆಯಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಬೊಮ್ಮಗೌಡ ಮತ್ತು ತುಳಸಿ ಗೌಡ ಹಾಗೂ ಅವರ ಸಂಗಡಿಗರು, ಸಿದ್ದಿ ಜನಾಂಗದವರು ಈ ಮದುವೆಯಲ್ಲಿ ಭಾಗವಹಿಸಲಿದ್ದಾರೆ.
ಗುರುವನ್ನು ಅನುಕರಿಸಿದ ಶಿಷ್ಯೆ:ಪ್ರೊ.ರಾಜಮಣಿ ರಾಮಕುಂಜ ಅವರ ಕಾಲೇಜು ವಿದ್ಯಾರ್ಥಿನಿ ರಾಜಶ್ರೀ ಅವರ ವಿವಾಹ ಅಶ್ವಿನ್ ಕುಮಾರ್ ಜತೆ ಡಿ.10ರಂದು ನಡೆಯಲಿದೆ. ಗುರುವಿನ ಹಾದಿಯನ್ನೇ ಅನುಕರಿಸಿರುವ ರಾಜಶ್ರೀ ತಮ್ಮ ಮದುವೆ ಆಮಂತ್ರಣದಲ್ಲೂ ಆಹಾರ ಪದಾರ್ಥ ವ್ಯರ್ಥ ಮಾಡದಂತೆ ಜಾಗೃತಿ ಮೂಡಿಸಿದ್ದಾರೆ. ಜತೆಗೆ ಆತ್ಮನಿರ್ಭರ ಭಾರತದ ಕಲ್ಪನೆಯನ್ನೂ ನೀಡಿದ್ದಾರೆ.

ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್​ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!

ಅಂಗಡಿ ಹುಡುಗರ ಮೇಲೆ ಹಲ್ಲೆ ಮಾಡಿ 1.90 ಲಕ್ಷ ರೂ. ದೋಚಿದ್ದ ಪುಡಿ ರೌಡಿಗಳ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
