ಹೆಣ್ಣಿಗೆ ಸಮಾನತೆ ಸಿಗುವಂತಾಗಲು ಆಕೆಗೆ ಆಸ್ತಿಯಲ್ಲಿ ಸಿಗಬೇಕಾದ ಸಮಾನ ಹಕ್ಕನ್ನು ನೀಡುವ ಮಾನಸಿಕತೆ ಜನರಲ್ಲಿ ಬದಲಾವಣೆ ಆಗಬೇಕಿದೆ. ಈ ಒಂದು ದಿಟ್ಟ ನಿಲುವು ಕೈಗೊಂಡಲ್ಲಿ ಸಮಾಜದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಕಾಣಲು ಸಾಧ್ಯ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪ್ರತಿಪಾದಿಸಿದರು. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಾರಿಶಕ್ತಿ ಸಂಭ್ರಮ’ ಸಂವಾದದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದರು. ಮಹಿಳೆಯರ ಸಾಧನೆಗೆ ಕಠಿಣ ಪರಿಶ್ರಮ, ಗುರಿ ಸಾಧನೆಗೆ ಸತತ ಪ್ರಯತ್ನ ಹಾಗೂ ಅವಕಾಶಗಳನ್ನು ಸದ್ಬಳಕೆ ಕುರಿತು ಅವರು ಕಿವಿಮಾತು ಹೇಳಿದರು.
ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಮಹಿಳಾ ಸಿಇಒಗಳ ಕಾರ್ಯನಿರ್ವಹಣೆ ಕುರಿತು ಖಾಸಗಿ ಸಂಸ್ಥೆಯೊಂದು ಸರ್ವೆ ಮಾಡಿದೆ. ಆ ವರದಿಯಲ್ಲಿ ಉಲ್ಲೇಖಿಸಿರುವಂತೆ ಮಹಿಳಾ ಸಿಇಒಗಳ ಕ್ಷಮತೆ ಹಾಗೂ ಸಾಧನೆ ಪುರುಷರಿಗಿಂತ ಹೆಚ್ಚು ಇದೆ. ಇಂತಹ ಹಲವು ಬದಲಾವಣೆಗಳು ಮಹಿಳೆಯರಿಂದ ಸಾಧ್ಯವಾಗಿದೆ ಎಂದು ಅವರು ಸಮರ್ಥಿಸಿದರು. ‘ಮಹಿಳೆಯರಿಗೆ ಸಮಾನತೆ ಸ್ವಸಾಮರ್ಥ್ಯದಿಂದ ಸಾಧ್ಯವಾಗಬೇಕೆ ಅಥವಾ ಮೀಸಲಾತಿ ಅನಿವಾರ್ಯತೆ ಇದೆಯೇ?’ ಎಂಬ ವಿದ್ಯಾರ್ಥಿನಿ ವಿನುತಾ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಲಿನಿ ರಜನೀಶ್, ಪ್ರಸ್ತುತ ಶಾಸನಸಭೆ ಹೊರತುಪಡಿಸಿ ಗ್ರಾಮ ಪಂಚಾಯಿತಿಯಿಂದ ಮಹಾನಗರ ಪಾಲಿಕೆವರೆಗೆ ಮಹಿಳಾ ಮೀಸಲಾತಿಯಿದೆ. ಇದರಿಂದ ಆಕೆ ರಾಜಕೀಯವಾಗಿ ಮೇಲೆ ಬರಲು ಸಾಧ್ಯವಾಗಿದೆ. ಮುಖ್ಯವಾಗಿ ಕೆಳ ಹಂತದಲ್ಲಿ ಒಂದೂ ಬಾರಿ ಅಧಿಕಾರ ಸಿಗದವರಿಗೆ ಮೀಸಲಾತಿ ಅಗತ್ಯ ಇದೆ. ಆದರೆ, ಆನಂತರ ಬರುವ ಪೀಳಿಗೆಯವರಿಗೆ ಮೀಸಲು ಅಗತ್ಯವಿರುವುದಿಲ್ಲ. ಸ್ವಸಾಮರ್ಥ್ಯದಿಂದ ಮೇಲೆ ಬಂದವರು ಸಾಕಷ್ಟು ಇದ್ದು, ಅವರ ಪ್ರೇರಣೆಯನ್ನೂ ಪಡೆಯುವುದು ಉತ್ತಮ ಎಂದರು.
ಮಹಿಳೆಯರು ಸಾಧನೆ ಮಾಡಲು ಹೆಚ್ಚಾಗಿ ತಾಳ್ಮೆ ವಹಿಸಬೇಕು. ಸ್ಪಷ್ಟ ಗುರಿ ಹೊಂದಿ ರಬೇಕು. ಯಾವ ಸಮಸ್ಯೆ ಬಂದರೂ ಅದನ್ನು ದೂರಗೊಳಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು. ಯಾವುದೇ ಕ್ಷೇತ್ರಗಳಲ್ಲೂ ಸಾಧನೆ ಮಾಡುವಾಗ ಸೋಲಾದರೆ ಅನುಭವ ಎಂದು ಕೊಳ್ಳಬೇಕು, ಗೆದ್ದಲ್ಲಿ ಯಶಸ್ಸು ಸಿಗುತ್ತದೆ ಎಂಬ ಗಟ್ಟಿ ನಿಲುವು ಹೊಂದಿರಬೇಕು.
| ಸ್ನೇಹಾ ರಾಕೇಶ್ ಉದ್ಯಮ
ಜನಸೇವೆಯ ಸಂಕಲ್ಪ ಇರಲಿ
ಹೊಸ ಪೀಳಿಗೆಯ ಮಹಿಳೆಯರಲ್ಲಿ ಐಎಎಸ್ ಹುದ್ದೆ ಕನಸು ಹೆಚ್ಚುತ್ತಿದೆ. ಅದನ್ನು ನನಸಾಗಿಸಿಕೊಂಡವರು ಹಲವರಿದ್ದಾರೆ. ಆದರೆ, ಆ ಹುದ್ದೆ ಪಡೆಯುವ ಆಕಾಂಕ್ಷಿತರಲ್ಲಿ ಜನಸೇವೆ ಮಾಡಲು ದೃಢ ಸಂಕಲ್ಪ ಇರಬೇಕು. ಕೇವಲ ಕೆರಿಯರ್​ಗಾಗಿ ಮಾತ್ರ ಪರೀಕ್ಷೆ ಪಾಸು ಮಾಡುತ್ತೇವೆ ಎಂಬ ಕಾರಣಕ್ಕೆ ಐಎಎಸ್ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಶಾಲಿನಿ ರಜನೀಶ್ ಕಿವಿಮಾತು ಹೇಳಿದರು. ಸಂವಾದದಲ್ಲಿ ಹಲವು ವಿದ್ಯಾರ್ಥಿನಿಯರು ಐಎಎಸ್​ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಹಿಳೆಯರು ಯಶಸ್ಸು ಸಾಧಿಸುವ ಮಾರ್ಗ ಯಾವುದು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಕ್ಕೆ ಸಮರ್ಪಕವಾದ ಉತ್ತರ ಹಾಗೂ ಮಾರ್ಗದರ್ಶನದ ಮಾತುಗಳ ಮೂಲಕ ವಿದ್ಯಾರ್ಥಿನಿಯರ ಕನಸಿಗೆ ಶಾಲಿನಿ ರಜನೀಶ್ ನೀರೆರೆದರು.ಹಿಂದಿಗಿಂತ ಈಗ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಲು ಬೇಕಾದ ಮಾರ್ಗದರ್ಶನ ವಿಪುಲವಾಗಿದೆ. ಇದಕ್ಕೆ ಯುಪಿಎಸ್​ಸಿ ವೆಬ್​ಸೈಟ್​ನಲ್ಲಿ ಪರೀಕ್ಷಾ ತಯಾರಿಯಿಂದ ಹಿಡಿದು ವಿಷಯ ಆಯ್ಕೆ, ತಯಾರಿ, ಪಠ್ಯಕ್ರಮ, ಪ್ರಶ್ನೆಪತ್ರಿಕೆ ವಿವರಗಳು ಲಭ್ಯವಿದೆ. ಜತೆಗೆ ಐಎಎಸ್ ಪರೀಕ್ಷೆ ಬರೆಯಲಿರುವ ಇನ್ನಿತರರೊಂದಿಗೆ ಸಂಪರ್ಕ, ಸಂವಹನ ಕೂಡ ಅಗತ್ಯ. ನಾನೂ ಕೂಡ ಐಎಎಸ್ ಪರೀಕ್ಷಾರ್ಥಿಗಳಿಗೆ ಮುಖತ:, ಸಂವಾದ ಹಾಗೂ ಲೇಖನಗಳ ಮೂಲಕ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದೇನೆ. ಹೆಚ್ಚು ಸವಾಲಿನ ಈ ಪರೀಕ್ಷಾ ತಯಾರಿ, ಗುರಿ ಸಾಧಿಸುವ ಛಲ ಬೇಕು. ಮಧ್ಯೆ ಮಧ್ಯೆ ಬರುವ ಅಡ್ಡಿ-ಆತಂಕಗಳನ್ನು ಮೆಟ್ಟಿ ನಿಲ್ಲುವ ಮನೋಬಲವೂ ಅಗತ್ಯ ಎಂದು ಸಲಹೆ ನೀಡಿದರು.
ಪ್ರಶ್ನೆಗಳಿಗೆ ಉತ್ತರಿಸಿದ ಅತಿಥಿಗಳು
* ಮಹಿಳಾ ಕಾನೂನು ಬಳಸಿ ಪುರುಷರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಜವೇ. ಇದಕ್ಕೆ ಪರಿಹಾರವೇನು?
| ಸಾದಿಯಾ ಆಕ್ಸ್​ಫರ್ಡ್ ಕಾಲೇಜ್
ಸಪ್ತಮಿ ಗೌಡ:ಇಂತಹ ಪ್ರಕರಣ ಅಲ್ಲಲ್ಲಿ ನಡೆಯುತ್ತಿರಬಹುದು. ಆದರೆ, ಮಹಿಳೆಯರು ತಮ್ಮ ಹಕ್ಕು ಹಾಗೂ ರಕ್ಷಣೆಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆ ಹೊರತು ತಪ್ಪಾಗಿ ಉಪಯೋಗಿಸಿಕೊಳ್ಳಬಾರದು.
* ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಇರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ?
| ತೃಪ್ತಿಗೌಡ ಸೆಂಟ್ರಲ್ ಕಾಲೇಜ್
ಶಾಲಿನಿ ರಜನೀಶ್:ನಮ್ಮ ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚಿನ ರಾಜ್ಯ ಬಜೆಟ್​ನಲ್ಲಿ ಇಂತಹ ಸಂಘಗಳಿಗೆ 1 ಲಕ್ಷ ರೂ. ಮೊತ್ತದ ನೆವನ್ನು ‘ಸ್ತ್ರೀ ಸಾಮರ್ಥ್ಯ’ ಯೋಜನೆಯಡಿ ನೀಡಲಿದ್ದು, ಇದರಿಂದ ಈ ಸಂಘಗಳು ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಸಬಲತೆ ಸಾಧಿಸಬಹುದು. ಗ್ರಾಮ ಸಭೆಗಳಲ್ಲಿ ಯುವ ಮಹಿಳೆಯರು ಹೆಚ್ಚು ಪಾಲ್ಗೊಂಡು ಸ್ಥಳೀಯ ಸಮಸ್ಯೆಗಳ ಬಗ್ಗೆ ದನಿಯೆತ್ತಬೇಕು. ಸರ್ಕಾರ ಯುವಜನತೆಗೆ ಕೌಶಲ ಒದಗಿಸಲು ‘ಯುವಕಣಜ ಡಾಟ್ ಕಾಂ’ ವೆಬ್​ಸೈಟ್​ನಲ್ಲಿ 540 ಬಗೆಯ ತರಬೇತಿ ಒಳಗೊಂಡ ಯೋಜನೆಗಳನ್ನು ಅಡಕಗೊಳಿಸಲಾಗಿದೆ.
* ನಗರ ಪ್ರದೇಶಗಳಲ್ಲೇ ಹೆಚ್ಚಿನ ಕಡೆ ಶೌಚಾಲಯ ಇಲ್ಲದೆ ಮಹಿಳೆಗೆ ಸಮಸ್ಯೆ ಆಗುತ್ತಿದೆ. ಇದನ್ನು ಪರಿಹರಿಸುವುದು ಹೇಗೆ?
| ಭೂಮಿಕಾ ಎಂಎಲ್​ಎ ಕಾಲೇಜ್
ಸ್ನೇಹಾ ರಾಕೇಶ್:ನಗರಗಳಲ್ಲಿ ಬಸ್ ನಿಲ್ದಾಣ ಸೇರಿದಂತೆ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ವಿುಸುವುದು ಸ್ಥಳೀಯ ಸರ್ಕಾರದ ಕರ್ತವ್ಯ ಆಗಿದೆ. ಇವುಗಳನ್ನು ಅನುಷ್ಠಾನಕ್ಕೆ ಬರುವಂತೆ ನಾವು ಒತ್ತಡ ಹೇರಬೇಕು. ಕಾಲೇಜುಗಳಲ್ಲೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹ ಇರಬೇಕು.
* ತಮ್ಮ ತಂದೆ ಪೊಲೀಸ್ ಅಧಿಕಾರಿ ಆಗಿದ್ದು ನಿಮ್ಮ ಸಾಧನೆಯಲ್ಲಿ ವಹಿಸಿದ ಪಾತ್ರ ಏನು?
| ಮೇರಿ ಜೋಸ್ ಫಿನ್ ಫಿನ್ ಸೆಂಟ್ರಲ್ ಕಾಲೇಜ್
ಸಪ್ತಮಿ ಗೌಡ:ನನ್ನ ವ್ಯಕ್ತಿತ್ವ ನಿರ್ವಣದಲ್ಲಿ ತಂದೆಯ ಪಾತ್ರ ಬಹಳಷ್ಟಿದೆ. ಎಂದೂ ಇಂಥದ್ದೇ ಕೆಲಸ ಮಾಡು, ಇಂಥದ್ದೇ ಕೆರಿಯರ್ ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿಲ್ಲ. ನಾನು 5 ವರ್ಷ ಇದ್ದಾಗಲೇ ಓಟ, ಈಜು ವಿಭಾಗದಲ್ಲಿ ಪ್ರೋತ್ಸಾಹ ನೀಡಿದರು. ಇದರಿಂದ ನಾನು ಜಾಗತಿಕ ಮಟ್ಟದ ಈಜುಪಟುವಾಗಲು ಸಾಧ್ಯವಾಯಿತು. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದಾಗಿ ಹೇಳಿದಾಗ ತಂದೆ ಪ್ರೋತ್ಸಾಹಿಸಿದ್ದರಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಮನೆಯಲ್ಲಿ ಗಂಡು ಮಕ್ಕಳಿಗೆ ನೀಡುವ ಪ್ರೋತ್ಸಾಹ ಹೆಣ್ಣುಮಕ್ಕಳಿಗೂ ದೊರೆತಲ್ಲಿ ಸಾಧನೆ ಮಾಡಲು ಸಾಧ್ಯ.
ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

ಈ ಒಂದು ಮಾತಿಗೆ ನಡೆದೇ ಹೋಯ್ತು ಘೋರ ದುರಂತ: ಯುವಕನ ಪರಿಚಯವೇ 48ರ ಮಹಿಳೆ ಪ್ರಾಣಕ್ಕೆ ಕುತ್ತಾಯ್ತು!

ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಹೆಸರು ಕೈಬಿಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
