ಬೆಂಗಳೂರು:ಸಾರ್ವಜನಿಕರು ಯಾವುದೇ ರೀತಿಯ ಸಮಸ್ಯೆ, ಪರಿಹಾರ ಹಾಗೂ ಮಾಹಿತಿಗಾಗಿ ಗೂಗಲ್​ನಲ್ಲಿ ಸಿಗುವ ಸಹಾಯವಾಣಿಗಳಿಗೆ ಕರೆ ಮಾಡುತ್ತಿರುವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟಿಪಿ ನಂಬರ್ ಹಂಚಿಕೊಳ್ಳುವ ಮೂಲಕ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಸಿಐಡಿ ಸೈಬರ್ ವಿಭಾಗದ ಎಸ್​ಪಿ ಶರತ್ ಹೇಳಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ‘ಸೈಬರ್ ಅಪರಾಧ ಮತ್ತು ಸುರಕ್ಷತೆ’ ಬಗ್ಗೆ ಮಂಗಳವಾರ ಆಯೋಜಿಸಿದ್ದ ವೆಬಿನಾರ್​ನಲ್ಲಿ ಮಾತನಾಡಿದರು.
ಸೈಬರ್ ವಂಚಕರು ಪ್ರತಿಷ್ಠಿತ ಕಂಪನಿಗಳಿಗೆ ಹೋಲುವ ರೀತಿಯಲ್ಲೇ ಗೂಗಲ್​ನಲ್ಲಿ ಹೆಸರು, ಸಹಾಯವಾಣಿ ಸಂಖ್ಯೆ ಹಾಗೂ ವಿಳಾಸ ಅಪ್​ಲೋಡ್ ಮಾಡುತ್ತಿದ್ದಾರೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳ ಪರಿಹಾರ ಹಾಗೂ ಕಚೇರಿಗಳ ವಿಳಾಸಕ್ಕಾಗಿ ಗೂಗಲ್​ನಲ್ಲಿ ಹುಡುಕುತ್ತಿರುವ ಜನರೇ ಸೈಬರ್ ವಂಚಕರ ಟಾರ್ಗೆಟ್. ಗೂಗಲ್​ನಲ್ಲಿ ಸಿಗುವ ನಂಬರ್​ಗಳಿಗೆ ಕರೆ ಮಾಡಿದರೆ, ಸಹಾಯ ಮಾಡುವ ನೆಪದಲ್ಲಿ ವೈಯಕ್ತಿಕ ವಿವರ ಪಡೆದು ಮೋಸ ಮಾಡುತ್ತಿದ್ದಾರೆ ಎಂದರು.
ಯಾವುದೇ ಕಂಪನಿಯ ಗ್ರಾಹಕರು, ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಯಾ ಕಂಪನಿಯ ಆಪ್​ಗಳ ಮುಖಾಂತರವೇ ಮುಟ್ಟಿಸಬೇಕು. ಗೂಗಲ್​ನಲ್ಲಿ ಸಿಗುವ ಅನಾಮಿಕ ನಂಬರ್​ಗಳಿಗೆ ಒಮ್ಮೆ ಕರೆ ಮಾಡಿದರೆ ಸಾಕು, ಸೈಬರ್ ವಂಚಕರು ಹಿಂಬಾಲಿಸುತ್ತಾರೆ. ನಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಆಮಿಷಗಳನ್ನು ಒಡ್ಡಿ ಯಾಮಾರಿಸುತ್ತಾರೆ ಎಂದರು.
ವಿದ್ಯಾವಂತರೇ ಹಳ್ಳಕ್ಕೆ:ಪ್ರತಿಯೊಂದು ಸೈಬರ್ ವಂಚನೆಗೂ ಒಟಿಪಿ ನಂಬರ್ (ಒನ್ ಟೈಂ ಪಾಸ್​ವರ್ಡ್) ಮೂಲ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರ ಒಟಿಪಿ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲೂ ವಂಚನೆಗೆ ಬಳಕೆ ಆಗುತ್ತಿದೆ. ಹೀಗಾಗಿ, ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬಾರದು. ಇದು ಸೈಬರ್ ಕ್ರೖೆಂ ತಡೆಗೆ ಸೂಕ್ತ ಕ್ರಮ. ಪ್ರಸಕ್ತ ವರ್ಷ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ದೂರು ನೀಡಿದವದರಲ್ಲಿ ಬಹುತೇಕರು ವಿದ್ಯಾವಂತರಾಗಿದ್ದಾರೆ. ಗೌಪ್ಯ ಮಾಹಿತಿಯನ್ನು ಸೈಬರ್ ವಂಚಕರಿಗೆ ಕೊಟ್ಟು ಹಣ ಕಳೆದುಕೊಂಡವರಾಗಿದ್ದಾರೆ. ನಿಮ್ಮ ದಡ್ಡತನ ಹಾಗೂ ನಿರ್ಲಕ್ಷ್ಯವನ್ನೇ ಸೈಬರ್ ವಂಚಕರ ಬಂಡವಾಳವಾಗಿದೆ ಎಂದು ಸಲಹೆ ನೀಡಿದರು.
ವಿವೇಚನೆಯಿಂದ ಅಂತರ್ಜಾಲ ಬಳಸಿ
ಬಹುತೇಕರು ಅಂತರ್ಜಾಲ ಬಳಸುತ್ತಿದ್ದಾರೆ. ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದಾರೆ. ಅದರ ಜೊತೆಗೆ ಸೈಬರ್ ವಂಚಕರು ಹೆಚ್ಚಾಗುತ್ತಿದ್ದಾರೆ. ಅಂತರ್ಜಾಲ ಬಳಕೆಯ ಕುರಿತು ಅರಿವಿಲ್ಲದಿರುವುದೇ ವಂಚನೆಗೆ ದಾರಿಯಾಗಿದೆ. ವಿವೇಚನೆ ಹಾಗೂ ಸುರಕ್ಷತೆಯಿಂದ ಅಂತರ್ಜಾಲ ಬಳಸಿದರೆ ಸೈಬರ್ ವಂಚನೆ ಪ್ರಮಾಣ ಕಡಿಮೆಯಾಗುತ್ತದೆ. ಗೌಪ್ಯ ಮಾಹಿತಿ ಹಂಚಿಕೊಳ್ಳದೇ ಪ್ರತಿಯೊಬ್ಬರು ಸೈಬರ್ ಶುಚಿತ್ವ ಪಾಲಿಸಬೇಕಿದೆ ಎಂದು ವಿಜ್ಞಾನಿ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದರು.
ಸೈಬರ್ ಅಪರಾಧಗಳಲ್ಲಿ 30 ಬಗೆ
30 ಬಗೆಯ ಸೈಬರ್ ಅಪರಾಧಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ, ಅಕ್ಟೋಬರ್ ತಿಂಗಳನ್ನು ‘ಸೈಬರ್ ಅಪರಾಧ ತಡೆ ಮಾಸ’ ಎಂದು ಘೊಷಿಸಿದೆ. ನಾವು ಬಳಸುತ್ತಿರುವ ಮೊಬೈಲ್ ಆಪ್​ಗಳು ಸುರಕ್ಷಿತವೇ ಎಂಬುದು ಖಾತ್ರಿಪಡಿಸಿಕೊಳ್ಳಬೇಕು. ಪಾಸ್​ವರ್ಡ್​ಗಳನ್ನು ಆಗಾಗ ಬದಲಾಯಿಸುತ್ತಿರಬೇಕು ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಜಿ. ಅನಂತಪ್ರಭು, ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
