
ಬೆಂಗಳೂರು:ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಬರುವ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಅಳವಡಿಸಲಾಗಿರುವ ಮಾಹಿತಿ ತಂತ್ರಜ್ಞಾನ ಸೇವೆ ತಂತ್ರಾಂಶಗಳು ಹಾಗೂ ಹಾರ್ಡ್ ವೇರ್ ಗಳನ್ನು ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ನ.24ರಿಂದ 26ರವರೆಗೆ 3 ದಿನಗಳ ಕಾಲ ಮಾಹಿತಿ ತಂತ್ರಜ್ಞಾನ ಆಧರಿತ ವಿದ್ಯುತ್ ಸೇವೆ ಲಭ್ಯವಿರುವುದಿಲ್ಲ.ಈ ಅವಧಿಯಲ್ಲಿ ಆನ್ ಲೈನ್ ಸೇವೆಗಳಾದ ಹೊಸ ವಿದ್ಯುತ್ ಸಂಪರ್ಕ, ಹೆಸರು/ ಲೋಡ್ ಬದಲಾವಣೆ, ನಗದು ಪಾವತಿ, ಆನ್ ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಗಳು ಹಾಗೂ ಇತರ ಸೇವೆಗಳು ಲಭ್ಯವಿರುವುದಿಲ್ಲ.ಆನ್ ಲೈನ್ ಸೇವೆಗಳ ಅಲಭ್ಯತೆಯನ್ನು ಗಮನಿಸಿ ಗ್ರಾಹಕರು ಹಾಗೂ ಗುತ್ತಿಗೆದಾರರು ತಮ್ಮ ಅವಶ್ಯಕತೆಗಳನ್ನು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬೆಸ್ಕಾಂ ವಿನಂತಿಸಿದೆ.ಈ ಅವದಿಯಲ್ಲಿ ವಿದ್ಯುತ್ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ವಿರುವುದಿಲ್ಲ. ಗ್ರಾಹಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆನ್ ಲೈನ್ ಸೇವೆ ಲಭ್ಯಇಲ್ಲದ ಪಟ್ಟಣಗಳ ವಿವರ:
ಬೆಸ್ಕಾಂ: ಬೆಂಗಳೂರು ನಗರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ,ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿ ಬಿದನೂರು.
ಸೆಸ್ಕ್: ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್.್ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ ಹಾಗೂ ಚೆನ್ನರಾಯಪಟ್ಟಣ.ಮೆಸ್ಕಾಂ: ಬಂಟ್ವಾಳ, ಕಡೂರು, ತರಿಕೇರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು.
ಜೆಸ್ಕಾಂ: ಮಾನವಿ, ಸಿಂಧನೂರು, ಬೀದರ್, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್, ಭಾಲ್ಕಿ, ಶಹಬಾದ್, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್ ಹಾಗೂ ಹೊಸಪೇಟೆ.
ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸೇವನೂರು, ಸಿರಸಿ, ಕುಮಟಾ, ಬಾಗಲಕೋಟೆ, ರಮಬಕವಿ-ಬನಹಟ್ಟಿ, ಗದಗ, ಗೋಕಾಕ್, ಹಾವೇರಿ, ಇಳಕಲ್, ಮುಧೋಳ, ರಾಣೆಬೆನ್ನೂರು ಹಾಗೂ ವಿಜಾಪುರ ನಗರದಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಂಶ ಸೇವೆಗಳು ಲಭ್ಯವಿರುವುದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
