ಬೀದರ್:ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಅವರಿಂದ ನೋಟಿಸ್ ಜಾರಿಯಾಗಿದೆ.
ವಸತಿ ಯೋಜನೆಯಡಿ ಫಲಾನುಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ನೋಟಿಸ್​ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!
ಭಾಲ್ಕಿಯಲ್ಲಿ 91 ಕೋಟಿ ರೂ. ಅಕ್ರಮ ನಡೆದಿದೆ‌ ಎಂಬ ಆರೋಪವಿದೆ. 9 ಸಾವಿರಕ್ಕೂ ಹೆಚ್ಚು ಮನೆಗಳು ಬೋಗಸ್ ಫಲಾನುಭಾವಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಖುದ್ದು ರಾಜೀವ್ ಗಾಂಧಿ ವಸತಿ ನಿಗಮದ ಎಂ.ಡಿ ನೇತೃತ್ವದಲ್ಲಿ ನಡೆದ ತನಿಖೆಯಿಂದ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಖಂಡ್ರೆಗೆ ನೋಟಿಸ್ ಜಾರಿಯಾಗಿದೆ.
2015-16 ರಿಂದ 2018-19 ರವರೆಗೆ ಅನುಷ್ಠಾನಗೊಂಡ ಮನೆಗಳ ಆಯ್ಕೆಯಲ್ಲಿ ಭಾರಿ ಅಕ್ರಮ ಪತ್ತೆ ಹಚ್ಚಿದ ರಾಜೀವ ಗಾಂಧಿ ವಸತಿ ನಿಗಮದ ತಂಡ ತನಿಖೆ ನಡೆಸುವ ಮೂಲಕ ಅಕ್ರಮ ಬಯಲು ಮಾಡಿದ್ದಾರೆ.
ಇದನ್ನೂ ಓದಿ:36 ತಾಸು ಕರೊನಾ ಕರ್ಫ್ಯೂ: ಇಂದು ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಬಂದ್
ಖುದ್ದು ಶಾಸಕರ ಆಪ್ತ ಸಾಹಯಕರಾದ ಬಸವರಾಜ ಹಾಗೂ ಉಮೇಶ ಇಬ್ಬರು ಅವರ ಖಾಸಗಿ ಮೊಬೈಲ್ ಬಳಸಿ ಜತೆಗೆ ಶಾಸಕರ ಮನೆಯಿಂದ ಖಾಸಗಿ ಕಂಪ್ಯೂಟರ್​ಗಳನ್ನು ಬಳಕೆ ಮಾಡಿಕೊಂಡು ಜನರಿಗೆ ಮನೆ ಮಂಜೂರಾತಿ ಆದೇಶ ಪತ್ರವನ್ನು ನೀಡುವ ಮೂಲಕ ಭಾರಿ ಅಕ್ರಮ ಎಸಗಿರುವ ಬಗ್ಗೆ ತನಿಖೆಯಿಂದ ಬಯಲಾದ ಹಿನ್ನಲೆಯಲ್ಲಿ ಡಿ.ಸಿ ಹಾಗೂ ಸಿಇಓ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
Photo Gallery| ಬರ್ತಡೇ ಖುಷಿಯಲ್ಲಿ ಸಂಯುಕ್ತಾ: ಸ್ಯಾಂಡಲ್​ವುಡ್​ ಬೆಡಗಿಯ ಮುದ್ದಾದ ಚಿತ್ರಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + sixteen =
Remember me
