ಬೆಂಗಳೂರು:ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಜತೆಗೆ ಸ್ವಾತಂತ್ರ್ಯ ಯೋಧ ಎಚ್.ಎಸ್. ದೊರೆಸ್ವಾಮಿ ಫೋಟೋ ತೆಗೆಸಿಕೊಂಡಿದ್ದು, ಅವರ ಮನೆಗೂ ಹೋಗಿ ಬರುತ್ತಾರೆ. ಇಂತಹವರ ಜತೆ ಏನು ಸಂಬಂಧವೆಂದು ಹೇಳಲಿ. ಇದಕ್ಕಾಗಿ ಕ್ಷಮೆ ಕೇಳ್ತಾರಾ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಕಿಡಿಕಾರಿದರು.
ಮಾಧ್ಯಮದವರ ಮುಂದೆ ಅಮೂಲ್ಯ ಜತೆಗೆ ದೊರೆಸ್ವಾಮಿ ತೆಗೆಯಿಸಿಕೊಂಡ ಫೋಟೋ ಪ್ರದರ್ಶಿಸಿದ ಅವರು, ಈ ಕಾರಣಕ್ಕೆ ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಅನ್ನಲ್ಲ. ಸ್ವಾತಂತ್ರ್ಯ ಹೋರಾಟಗಾರರು, ಅವರ ಬಗ್ಗೆ ಗೌರವವಿದ್ದು, ಕಾಂಗ್ರೆಸ್​ನವರ ತಾಳಕ್ಕೆ ತಕ್ಕಂತೆ ಕುಣಿಯುವುದು ಬೇಡವೆಂದು ಮನವಿ ಮಾಡಿಕೊಂಡರು. ಶಾಸಕ ಬಸನಗೌಡ ಪಾಟೀಲ್ ನೀಡಿದ ಹೇಳಿಕೆಯನ್ನು ಹಿಡಿದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಧರಣಿ ಮಾಡುತ್ತಾರೆ.
ಆದರೆ, ಪಾಕಿಸ್ತಾನ ಜಿಂದಾಬಾದ್ ಎಂದವರ ವಿರುದ್ಧ ಏನು ಮಾಡಿದಿರಿ? ಅಮೂಲ್ಯ ಜತೆಗೆ ಫೋಟೊ ತೆಗೆಯಿಸಿಕೊಂಡಿದ್ದಕ್ಕಾಗಿ ದೊರೆಸ್ವಾಮಿ ಅವರ ಕ್ಷಮೆಗೆ ಒತ್ತಾಯಿಸುವಿರಾ? ಎಂದು ಈಶ್ವರಪ್ಪ ಕೇಳಿದರು. ಯತ್ನಾಳ್​ರನ್ನು ಪಕ್ಷದಿಂದ ಹೊರ ಹಾಕಬೇಕು ಎನ್ನುತ್ತಿದ್ದಾರೆ. ಈ ಹಿಂದೆ ನರೇಂದ್ರ ಮೋದಿ ಅವರನ್ನು ಕೊಲೆಗಡುಕ ಎಂದು ಸಿದ್ದರಾಮಯ್ಯ ಹೇಳಿದಾಗಲೇ ಕಾಂಗ್ರೆಸ್​ನವರು ಹೊರಗೆ ಹಾಕಬೇಕಿತ್ತು. ಸದನ ನಡೆಯಲು ಬಿಡಲ್ಲವೆಂದು ಹೇಳಿದ್ದು, ಅದ್ಹೇಗೆ ಬಿಡಲ್ಲವೆಂದು ನಾವು ನೋಡುತ್ತೇವೆ ಎಂದು ಸವಾಲೆಸೆದರು.
ಪಾಪ, ಕಾಂಗ್ರೆಸ್​ನಲ್ಲೆ ಮಿಂಚಲಿಲ್ಲ
ಸಿದ್ದರಾಮಯ್ಯ ಹೋದಲ್ಲೆಲ್ಲ ಮಿಂಚ್ತಾರೆ. ಪಾಪ, ಕಾಂಗ್ರೆಸ್​ನಲ್ಲೇ ಮಿಂಚಲಿಲ್ಲ. ಅವರ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಚಾಯಿಸಿದರು. ಯಡಿಯೂರಪ್ಪ ಜನ್ಮ ದಿನದ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡು ಮಿಂಚಿದರು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ, ಹೊರಗಡೆ ಎಲ್ಲೆಡೆ ಮಿಂಚ್ತಾರೆ. ಆದರೆ, ಕಾಂಗ್ರೆಸ್​ನಲ್ಲೇ ಮಿಂಚಲ್ಲ. ಇದೀಗ ಮತ್ತೆ ಕಾಂಗ್ರೆಸ್​ಗೆ 4 ಕಾರ್ಯದರ್ಶಿಗಳನ್ನು ನೇಮಿಸಲು ಹೇಳಿ ಪಕ್ಷವನ್ನು ಒಡೆಯಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ಲೇವಡಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
