ಶಿವಮೊಗ್ಗ:ನಲಪಾಡ್ ಪರಪ್ಪನ ಅಗ್ರಹಾರದಲ್ಲಿ ಇದ್ದು ಬಂದವನು. ಪಿಎಫ್ಐ ಹಾಗೂ ಎಸ್​ಡಿಪಿಐನಂತಹ ರಾಷ್ಟ್ರದ್ರೋಹಿಗಳ ಪರ ನಲಪಾಡ್ ಇದ್ದಾನೆ. ಬಜರಂಗದಳ ಬ್ಯಾನ್ ಮಾಡು ಎಂದು ಹೇಳಲು ಇವನ್ಯಾರು ಎಂದು ಮಾಜಿ ಸಚಿವ ಈಶ್ವರಪ್ಪ ಪ್ರಶ್ನಿಸಿದರು.
ಮೊಹಮ್ಮದ್ ನಲಪಾಡ್ ಈ ಹಿಂದೆ ಬಜರಂಗದಳ ಬ್ಯಾನ್ ಮಾಡಲಿ ಎಂಬ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಉದ್ಯೋಗವಿಲ್ಲದೇ ಭಯೋತ್ಪಾದನಾ ಚಟುವಟಿಕೆ ಮಾಡ್ತಾರೆ ಅಂತಾ ಹೇಳ್ತಾನೆ. ಕೇವಲ ಮುಸಲ್ಮಾನರಿಗೆ ಮಾತ್ರ ನಿರುದ್ಯೋಗ ಸಮಸ್ಯೆ ಇದೆಯಾ? ಹಿಂದೂ – ಮುಸ್ಲಿಂರನ್ನು ಒಡೆದು ಕಾಂಗ್ರೆಸ್ ಈ ದೇಶ ಹಾಳು ಮಾಡಿದೆ. ಪಾಕಿಸ್ತಾನ – ಹಿಂದೂಸ್ತಾನ ಮಾಡಿ ಆಯ್ತು. ಇದೀಗ ಹಿಂದೂ – ಮುಸ್ಲಿಮರನ್ನು ದೂರ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.
ಮುಸಲ್ಮಾನ ರಾಷ್ಟ್ರ ಭಕ್ತರಿಗೆ ನಾನು ಪ್ರಾರ್ಥನೆ ಮಾಡುತ್ತೇನೆ. ನಲಪಾಡ್ ರಾಷ್ಟ್ರದ್ರೋಹಿಗಳ ಪರವಾಗಿದ್ದಾನೆ. ಇಂತವರನ್ನು ದೂರ ಇಡಿ. ಹೆತ್ತವರು ನಿಮ್ಮ ಮನೆ ಯುವಕರು ಪಿಎಫ್ಐ, ಎಸ್​ಡಿಪಿಐ ಸೇರದಂತೆ ಗಮನ ಹರಿಸಿ ಎಂದು ಈಶ್ವರಪ್ಪ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 16 =
Remember me
