ಬಾಗಲಕೋಟೆ:ದಾವಣಗೆರೆಯ ಚನ್ನಗಿರಿ ಲಾಕಪ್ ಡೆತ್ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತ ಆದಿಲ್ ಕುಟುಂಬಸ್ಥರು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ದೂಷಿಸಿ, ಮಾತನಾಡುತ್ತಿದೆ. ಈ ವಿಚಾರ ಕುರಿತು ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯ ಸರ್ಕಾರ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ರಣವೀರ್​ ನಾಚಿಕೆ ಇಲ್ಲದವ, ಪ್ಯಾಂಟ್​ ಧರಿಸದೆ ನನ್ನ ಪಕ್ಕದಲ್ಲಿ ಕೂರುತ್ತಿದ್ದ: ಪರಿಣೀತಿ ಚೋಪ್ರಾ
“ಮೃತ ಆದಿಲ್ ತಂದೆಯೇ ಎರಡು ಹೇಳಿಕೆ ನೀಡಿದ್ದಾರೆ. ಒಮ್ಮೆ ಲೋ ಬಿಪಿ ಅಂತಾ ಹೇಳಿದ್ರೆ, ಮತ್ತೊಂದೆಡೆ ಲಾಕಪ್ ಡೆತ್ ಅಂತಿದ್ದಾರೆ. ರಾಜ್ಯ ಸರ್ಕಾರ ಇಲ್ಲಿಯವರೆಗೂ ಪರಿಹಾರ ಕೊಟ್ಟಿಲ್ಲ ಅನ್ನೋದೇ ಆಶ್ಚರ್ಯ. ಮುಸ್ಲಿಂ ಅಂದೋಡನೆ ಪರಿಹಾರ ಘೋಷಣೆ ಮಾಡೋದು ಸರ್ಕಾರದ ನಿಲುವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ನೇಹಾ ಪ್ರಕರಣದಿಂದ ಚನ್ನಗಿರಿ ಪ್ರಕರಣಗಳೇ ಸಾಕ್ಷಿ” ಎಂದರು.
“ಸಿಎಂ, ಗೃಹ ಸಚಿವರು ಭಿನ್ನ ಹೇಳಿಕೆ ಕೊಡುತ್ತಾರೆ. ನೇಹಾ ಕೊಲೆ ವೈಯಕ್ತಿಕ ಅಂತ ಒಬ್ಬರು ಹೇಳಿದ್ರೆ, ಇದಕ್ಕೂ ಲವ್ ಜಿಹಾದ್​ಗೂ ಸಂಬಂಧ ಇಲ್ಲ ಅಂತ ಮತ್ತೊಬ್ಬರು ಹೇಳುತ್ತಾರೆ. ಏನೇ ತೀರ್ಮಾನಕ್ಕೆ ಬರಬೇಕಾದ್ರೂ ತನಿಖೆ ನಂತರ ಬರಬೇಕು. ನೀವು ಸತ್ಯ ಹರಿಶ್ಚಂದ್ರರು ತಾನೆ? ಪ್ರಕರಣ ಸಿಬಿಐಗೆ ಯಾಕೆ ಕೊಡ್ತಿಲ್ಲ? ಈ ರೀತಿ ಕೊಲೆ, ಸುಲಿಗೆ ಹಿಂದೆಂದು ನೋಡಿರಲಿಲ್ಲ. ಈ ಎಲ್ಲಾ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ” ಎಂದು ಹೇಳಿದರು.
ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
