ಬೆಂಗಳೂರು:ಗೋ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ರಾಜ್ಯಮಟ್ಟದಲ್ಲಿ ಪ್ರಾಯೋಗಿಕವಾಗಿ ಗೋ ಮಾತಾ ಸಹಕಾರ ಸಂ ಸ್ಥಾಪಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದ ಅವರು, ಬಜೆಟ್​ನಲ್ಲಿ ಪ್ರಸ್ತಾಪಿತ ಇಲಾಖೆ ಕಾರ್ಯಕ್ರಮಗಳಿಗೆ ಆದ್ಯತೆ ಅನುಸಾರ ಅನುಷ್ಠಾನದ ಕಾಲಮಿತಿಯನ್ನು ನೀಡಿದರು.
ಸಾಧ್ಯತಾ ವರದಿಗೆ ಸಲಹೆ:ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ 2022&23ನೇ ಸಾಲಿನ ಬಜೆಟ್​ನ ಘೋಷಣೆಗಳ ಅನುಷ್ಠಾನದ ಸಿದ್ಧತೆ ಪರಾಮರ್ಶಿಸಿದ ಅವರು, ಸೌಂದರ್ಯವರ್ಧಕ, ಔಷಧಗಳಲ್ಲಿ ಬಳಸಲಾಗುವ ಮೆಣಸಿನಕಾಯಿಯಿಂದ ಔಷಧ ಯುಕ್ತ ತೈಲ ಉತ್ಪಾದನೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಶು ಸಂಗೋಪನಾ ಇಲಾಖೆ* ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಮಾದರಿ ಪಶುಚಿಕಿತ್ಸಾಲಯ. ಬಾಡಿಗೆ ಆಧಾರದಲ್ಲಿ 50 ಪಶು ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಅನುಮತಿ
* ಸಿಬ್ಬಂದಿ ಹುದ್ದೆಗೆ ಜೆಒಸಿ ಹಾಗೂ ಡಿಪ್ಲೊಮಾ ವ್ಯಾಸಂಗ ಪೂರೈಸಿದ ಅಭ್ಯರ್ಥಿಗಳ ನೇಮಕ
* ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್​ ಸಾಮರ್ಥ್ಯದ ಮೆಗಾ ಡೈರಿಯಡಿ ಯುಎಚ್​ಟಿ ಟಕಕ್ಕೆ ಬೇಕಾದ 20 ಕೋಟಿ ರೂ. ಅನುದಾನ ಒದಗಿಸುವುದಕ್ಕಾಗಿ ಪ್ರಸ್ತಾವನೆ
* ಗೋಶಾಲೆಗಳನ್ನು 31ರಿಂದ 100ಕ್ಕೆ ಹೆಚ್ಚಿಸುವುದಕ್ಕೆ ಪೂರಕವಾಗಿ 70 ಹೊಸ ಗೋಶಾಲೆ ಸ್ಥಾಪಿಸಲು ನಿವೇಶನ ಗುರುತು
* ಪುಣ್ಯಕೋಟಿ ದತ್ತು ಯೋಜನೆಯ ಪೋರ್ಟಲ್​ ಜೂನ್​ ಅಂತ್ಯದಲ್ಲಿ ಪ್ರಾರಂಭಿಸುವುದು.
* ಗೋ ತಳಿಗಳನ್ನು ಸಂರಸಲು ಹಾಗೂ ಅವುಗಳ ಸಂತತಿ ಹೆಚ್ಚಿಸಲು ಕೆಎಂಎ್​ ಮೂಲಕ 2,000 ಗೋವು ತಳಿಗಳು ರೈತರಿಗೆ ಹಂಚಿಕೆ. ಇದಕ್ಕಾಗಿ ನಾಲ್ಕು ಕೋಟಿ ರೂ. ಅನುದಾನ ನಿಗದಿ
* ಶಿವಮೊಗ್ಗದ ಪಶುವೈದ್ಯಕಿಯ ಕಾಲೇಜಿನಲ್ಲಿ ಗೋಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಾಮಾಣೀಕರಣದ ಅಭಿವೃದ್ಧಿಗೆ ಸಂಶೋಧನಾ ಕೋಶ ಸ್ಥಾಪನೆಗೆ ಕ್ರಮ
* ಕುರಿಗಾಹಿಗಳಿಗೆ ವಸತಿ ಜತೆಗೆ ಕುರಿದೊಡ್ಡಿ ನಿರ್ಮಿಸಲು <5 ಲಕ್ಷ ಸಹಾಯಧನ.
ಆರು ಲಕ್ಷ ಮನೆಗಳ ನಿರ್ಮಾಣಕ್ಕೆ ಗಡುವು
ಬೆಂಗಳೂರು:ಅಮೃತ ಯೋಜನೆ ಒಳಗೊಂಡು ವಿವಿಧ ವಸತಿ ಯೋಜನೆಗಳಡಿ ಆರು ಲಕ್ಷ ಮನೆಗಳ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್​ ಒಳಗೆ ಪೂರ್ಣಗೊಳಿಸಬೇಕು ಎಂಬ ಗಡುವನ್ನು ಸಿಎಂ ಬಸವರಾಜ ಬೊಮ್ಮಾಯಿ ವಿಧಿಸಿದರು. ಅರಣ್ಯ, ಕಂದಾಯ, ವಸತಿ, ಪಶು ಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿತ ಬಜೆಟ್​ ಘೋಷಣೆ ಹಾಗೂ ಕಾರ್ಯಕ್ರಮಗಳಿಗೆ ಅನುಷ್ಠಾನದ ಕಾಲಮಿತಿ ನೀಡಿ, ಚಾಚೂತಪ್ಪದೇ ಪಾಲಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಮಟ್ಟದ ಆಡಳಿತವನ್ನು ಚುರುಕುಗೊಳಿಸಲೆಂದು ಜಿಲ್ಲಾಧಿಕಾರಿಗಳೊಂದಿಗೆ ಭಾನುವಾರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸೋಮವಾರ ಚರ್ಚಿಸಲು ಸಿಎಂ ನಿರ್ಧರಿಸಿದ್ದಾರೆ. ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭ ಬೊಮ್ಮಾಯಿ ಮಾತನಾಡಿ, ಲಾನುಭವಿಗಳ ಆಯ್ಕೆಗೆ ಗರಿಷ್ಠ ಮೂರು ತಿಂಗಳು ಸಾಕು. ನಿವೇಶನ ಹಂಚಿಕೆಗೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಆಸ್ತಿಗೆ ಡಿಪಿಆರ್​ ಸಲ್ಲಿಸುವುದಕ್ಕೂ ಆದ್ಯತೆ ನೀಡಬೇಕು ಎಂದರು.
ಮುಖ್ಯಾಂಶಗಳು* ಪ್ಲಾ$್ಯಸ್ಟಿಕ್​ ನಿಯಂತ್ರಣಕ್ಕೆ ವಿಶ್ವ ಬ್ಯಾಂಕ್​ ನಿಗದಿಪಡಿಸಿದ ದೊಡ್ಡ ಮೊತ್ತ ಬಳಕೆಗೆ ರ್ನಿದಿಷ್ಟ ಯೋಜನೆ* ಸಂರತ ಮೀಸಲು ಅರಣ್ಯ ಪ್ರದೇಶಗಳಿಗೆ 5 ಕೋಟಿ ರೂ. ವಿಶೇಷ ಅನುದಾನ* ಮಾನವ&ಪ್ರಾಣಿ ಸಂರ್ಷ ನಿಯಂತ್ರಿಸಲು ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ <100 ಕೋಟಿ ಅನುದಾನ* ಬೆಳಗಾವಿ ಹಿಡ್ಕಲ್​ ಅಚ್ಚುಕಟ್ಟು ಪ್ರದೇಶದಲ್ಲಿ ಪಧಾಮ, ಚಿಟ್ಟೆಗಳ ಉದ್ಯಾನ ಅಭಿವೃದ್ಧಿ.
ತೋಟಗಾರಿಕಾ ಇಲಾಖೆ* ಮೆಣಸು ಮತ್ತು ಇತರ ಸಾಂಬಾರು ಪದಾರ್ಥಗಳ ಗುಣಮಟ್ಟವನ್ನು ಹೆಚ್ಚಿಸಲು ವ್ಯಾಪಾರಸ್ಥರ ಸಲಹೆ ಪಡೆದು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ
* ತೋಟಗಾರಿಕೆಯಲ್ಲಿ ವಿನೂತನ ತಂತ್ರಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸುವ ನಿಟ್ಟಿನಲ್ಲಿ ಐಐಎಸ್ಸಿ ತರಿಂದ ಸಲಹೆ ಪಡೆದುಕೊಳ್ಳುವುದು
* ಕೊಡಗು ಮತ್ತು ಜಾಂಬೋಟಿ ಜೇನುತುಪ್ಪಗಳನ್ನು ಜನಪ್ರಿಯಗೊಳಿಸಲು ಹಾಗೂ ಹೆಚ್ಚಿಸಲು ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಕೈಗೊಳ್ಳಲು ಕ್ರಮ
ಆಗಸ್ಟ್​ನೊಳಗೆ ಹೊಸ ಆರ್​ಟಿಸಿರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿ ತಲಾ 100 ಗ್ರಾಮಗಳಿಗೆ ಹೊಸ ಆರ್​ಟಿಸಿಗಳನ್ನು ಆಗಸ್ಟ್​ ಒಳಗೆ ವಿತರಿಸಬೇಕು ಎಂದು ಬೊಮ್ಮಾಯಿ ಸೂಚಿಸಿದರು. ಕೃಷಿ ಜಮೀನು ಮತ್ತು ಇತರೆ ಸ್ವತ್ತುಗಳ ಡ್ರೋನ್​ ಆಧಾರಿತ ಸರ್ವೆ ಕಾರ್ಯವನ್ನು ಕೈಗೊಂಡು ದಾಖಲೆಗಳ ಡಿಜಿಟಲೀಕರಣ ಹಾಗೂ ಪೋಡಿ ಕೆಲಸಗಳು ಸೂಕ್ತವಾಗಿ ಆಗಬೇಕು. ಆರ್​.ಟಿ.ಸಿ ವಿತರಣೆ ಪರಿಶೀಲನಾ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕು ಎಂದರು. ಬೆಂಗಳೂರಿನಲ್ಲಿ ಹೆಚ್ಚಿನ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಲು ಕ್ರಮವಹಿಸಬೇಕು. ಎಲ್ಲ ಪಾರಂಪರಿಕ ನೋಂದಾಯಿತ ಶಾಶ್ವತ ದಾಖಲೆಗಳ ಆಧುನೀಕರಣ ಆಗಬೇಕು ಎಂದರು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ* ಆಕಾಂಗಳ ತಾಲೂಕುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರ್ನಿದಿಷ್ಟ ಮಾರ್ಗಸೂಚಿ ರೂಪಿಸುವುದು
* ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿಗೆ 1500 ಕೋಟಿ ರೂ.ಗಳ ಅನುದಾನದಡಿ ಮಾಸ್ಟರ್​ ಪ್ಲಾನ್​ ರೂಪಿಸಿ ಮೇಲ್ವಿಚಾರಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
