ಜೈಪುರ:ಉತ್ತರ ಭಾರತದಲ್ಲಿರುವ ವೀರಶೈವ ಸಮಾಜದ ಬಂಧುಗಳಿಗೆ ಧರ್ಮ-ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಜೈಪುರದಲ್ಲಿ ಶೀಘ್ರದಲ್ಲೇ ಕಾಶೀ ಜಂಗಮವಾಡಿ ಮಠವನ್ನು ನಿರ್ಮಿಸುವ ಉದ್ಧೇಶ ಹೊಂದಿರುವುದಾಗಿ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ವೀರಶೈವ ಸಮಾಜದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಇದನ್ನೂ ಓದಿ:ಮಂಗಳೂರು ಕಮಿಷನರ್ ಸೇರಿ 7 ಐಪಿಎಸ್​ ಅಧಿಕಾರಿಗಳ ವರ್ಗಾವಣೆ; ಯಾರು, ಎಲ್ಲಿಗೆ? ಇಲ್ಲಿದೆ ವಿವರ…
ಹರ್ಯಾಣ, ಪಂಜಾಬ್, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಲಕ್ಷಾಂತರ ವೀರಶೈವರಿದ್ದು, ರಾಜಸ್ಥಾನ ರಾಜ್ಯ ಒಂದರಲ್ಲೇ 50 ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರಿದ್ದಾರೆ. ಆ ಎಲ್ಲ ರಾಜ್ಯಗಳ ವೀರಶೈವ ಸಮಾಜ ಬಾಂಧವರಿಗೆ ಧಾರ್ಮಿಕ ಮಾರ್ಗದರ್ಶನವನ್ನು ಗುರಿಯಾಗಿಸಿಕೊಂಡು ಶೀಘ್ರದಲ್ಲೇ ಜೈಪುರದಲ್ಲಿ ಕಾಶೀ ಜಂಗಮವಾಡಿ ಶಾಖಾಮಠವನ್ನು ತೆರೆದು ಮಹಾರಾಷ್ಟ್ರದ ಶ್ರೀಗುರುಸಿದ್ದೇಶ್ವರ ಮಣಿಕಂಠ ಶಿವಾಚಾರ್ಯರಿಗೆ ಅಲ್ಲಿನ ಜವಾಬ್ದಾರಿ ನೀಡುವುದಾಗಿ ಜಗದ್ಗುರುಗಳು ವಿವರಿಸಿದ್ದಾರೆ.
ಇದನ್ನೂ ಓದಿ:ಆರತಕ್ಷತೆಗೂ ಮುನ್ನ ನವದಂಪತಿ ನಡುವೆ ವಾಗ್ವಾದ; ಪತ್ನಿಯನ್ನು ಇರಿದು ತಾನೂ ಪ್ರಾಣ ಬಿಟ್ಟ ಗಂಡ!
ಸಮಾವೇಶದಲ್ಲಿ ರಾಜಸ್ಥಾನದ ಸುಮಾರು 50ಕ್ಕೂ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು ಜಗದ್ಗುರು ಪಂಚಾಚಾರ್ಯರ ಪಂಚಕಲಶ ಸಾಕ್ಷಿಯಾಗಿ ನಡೆದ ವಿವಾಹ ಮಹೋತ್ಸವದ ವೈದಿಕ ಮಾರ್ಗದರ್ಶನವನ್ನು ದಹಿವಡ್ಕರ್ ಮಹಾರಾಜರು ನಿರ್ವಹಿಸಿದರು. ಸಮಾವೇಶಕ್ಕೂ ಮುನ್ನು ಕಾಶೀ ಜಗದ್ಗುರುಗಳ ಭವ್ಯ ಸಾರೋಟು ಉತ್ಸವವು ಜೈಪುರದ ರಾಜಮಾರ್ಗದಲ್ಲಿ ನಡೆಯಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 2 =
Remember me
