ಬೆಂಗಳೂರು:ಕರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವುದರಿಂದ ಸುಮಾರು 1200 ರಿಂದ 1300 ಕೋಟಿ ರೂ. ಆದಾಯ ಖೋತಾ ಆಗಬಹುದೆಂದು ಅಂದಾಜು ಮಾಡಲಾಗಿದೆ. ಮಾಲ್​ಗಳು, ಪಬ್​ಗಳು ಬಂದ್ ಆಗುತ್ತಿರುವುದರಿಂದ ವಹಿವಾಟು ಸ್ಥಗಿತವಾಗಿ ಆದಾಯ ಖೋತಾ ಆಗಲಿದೆ.
ಮೊದಲೇ ತೆರಿಗೆ ಸಂಗ್ರಹ ಸುಮಾರು 2000 ಕೋಟಿ ರೂ. ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ 1300 ಕೋಟಿ ರೂ. ಕಡಿಮೆಯಾಗಬಹುದೆಂದು ಹಣಕಾಸು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈ ತಿಂಗಳಿನಲ್ಲಿ ಸುಮಾರು 9000 ಕೋಟಿ ರೂ.ಗಳ ತೆರಿಗೆ ಸಂಗ್ರಹಣೆಯ ಗುರಿ ಇದೆ. 2 ವಾರಗಳಲ್ಲಿ 4500 ಕೋಟಿ ಸಂಗ್ರಹವಾಗಿದ್ದರೂ ಸಹ, ಉಳಿದ ಎರಡು ವಾರಗಳಲ್ಲಿ 4500 ಕೋಟಿ ರೂ. ಸಂಗ್ರಹವಾಗಬೇಕು.
ಒಂದು ವಾರಕ್ಕೆ 2250 ಕೋಟಿ ರೂ. ಸಂಗ್ರಹವಾಗಬೇಕು. ರಿಟೇಲ್ ವಹಿವಾಟು, ಪೆಟ್ರೋಲ್ ಮತ್ತು ಡಿಸೇಲ್ ಬಂಕ್​ಗಳಲ್ಲಿ ವಹಿವಾಟು ಇದ್ದೇ ಇರುತ್ತದೆ. ಅವುಗಳಿಂದ 1000 ಕೋಟಿ ರೂ. ತನಕ ತೆರಿಗೆ ಬರಬಹುದು. ಆದರೆ ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯೂ ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗುತ್ತಿದೆ.
ಸಂಯೋಜಿತ ಎಚ್​ಐವಿ ಔಷಧ ಬಳಸಿ ಕರೊನಾ​ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಿದ ಭಾರತೀಯ ವೈದ್ಯರು!

ಮಕ್ಕಳಿಗೆ ಮುತ್ತು ಕೊಡುವ ಮುನ್ನ ಎಚ್ಚರವಹಿಸಿ ಎಂದು ತನ್ನ ಮಗುವಿಗಾದ ನೋವನ್ನು ವಿವರಿಸಿದ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
