ದಾವಣಗೆರೆ:ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಮಂದಿ ಉತ್ತಮ ಅಂಕ ಗಳಿಸಿ ಸಡಗರ ಸಂಭ್ರಮದಲ್ಲಿದ್ದಾರೆ. ಆದರೆ, ಮನಕಲಕುವ ಘಟನೆಯೊಂದರಲ್ಲಿ ಪಿಯು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕಗಳಿಸಿದ್ದರೂ ಇಂದು ಸಂಭ್ರಮಿಸಲು ಅವಳೇ ಇಲ್ಲ.
ಇದನ್ನೂ ಓದಿ:ಜನಿವಾರ ತೋರಿಸಿ ದುಬೆಯಿಂದ ಬಚಾವಾದೆ: ರೋಚಕ ಮಾಹಿತಿ ಬಿಚ್ಚಿಟ್ಟ ದೂರುದಾರ ತಿವಾರಿ!
ಹೌದು, ದಾವಣಗೆರೆಯ ಅನುಷಾ ರಕ್ತ ಕ್ಯಾನ್ಸ್‌ರ್‌ನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವೈದ್ಯಳಾಗುವ ಕನಸು ಕಟ್ಟಿಕೊಂಡಿದ್ದ ಅನುಷಾ ಹಗಲು ರಾತ್ರಿ ಕಷ್ಟಪಟ್ಟು ಓದಿ ಒಳ್ಳೆಯ ನಿರೀಕ್ಷೆಯೊಂದಿಗೆ ಪಿಯು ಪರೀಕ್ಷೆ ಎದುರಿಸಿದ್ದಳು. ಆದರೆ, ವಿಧಿಯಾಟ ಏನಿತ್ತೋ 5 ಪರೀಕ್ಷೆಗೆ ಹಾಜರಾಗಿದ್ದ ಅನುಷಾ ಕೊನೆಯ ಪರೀಕ್ಷೆ ಬರೆಯುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಳು.
ಬ್ಲಡ್‌ ಕ್ಯಾನ್ಸರ್‌ ಎಂಬ ಮಹಾಮಾರಿ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವಕ್ಕೆ ಕುತ್ತಾಯ್ತು. ತಮ್ಮ ಮಗಳ ಬಗ್ಗೆ ಬಸವರಾಜಪ್ಪ ಹಾಗೂ ಮಂಜಮ್ಮ ದಂಪತಿ ಭಾರಿ ಕನಸು ಕಂಡಿದ್ದರು. ಮಗಳ ಆಸೆಗೆ ಒತ್ತಾಸೆಯಾಗಿ ನಿಂತಿದ್ದರು. ಆದರೆ ಅವರು ಕನಸು ಇಂದು ಕನಸಾಗೇ ಉಳಿದಿದೆ.
ಇದನ್ನೂ ಓದಿ:VIDEO: ಕಚ್ಚಿ ಕಚ್ಚಿ ತಿನ್ನಲಾ.. ಚುಚ್ಚಿ ಚುಚ್ಚಿ ಕೊಲ್ಲಲಾ.. ಅಂತಿದ್ದಾರೆ ಹರಿಪ್ರಿಯಾ!
ಗಣಿತದಲ್ಲಿ ನೂರಕ್ಕೆ ನೂರು ಅಂಕಸಿದ್ದಗಂಗಾ ಪದವಿಪೂರ್ವ ಕಾಲೇಜಿನ ಸೈನ್ಸ್‌ ವಿದ್ಯಾರ್ಥಿನಿಯಾಗಿದ್ದ ಅನುಷಾ ತಾನು ಎದುರಿಸಿದ ಐದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾಳೆ. ಗಣಿತದಲ್ಲಿ 100ಕ್ಕೆ 100 ಅಂಕ ಗಳಿಸಿರುವ ಅನುಷಾ, ಕನ್ನಡ 92, ಫಿಸಿಕ್ಸ್‌ 91, ಕೆಮಿಸ್ಟ್ರಿ 89 ಹಾಗೂ ಬಯೋಲಾಜಿ 95 ಅಂಕ ಗಳಿಸಿದ್ದಾಳೆ. ಬದುಕಿದ್ದರೆ, ಉಳಿದ ಇನ್ನೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುತ್ತಿದ್ದಳು ಎಂಬ ಭರವಸೆ ಇತ್ತು. ಇಂದು ಸಂಭ್ರಮ ಪಡಬೇಕಾಗಿದ್ದ ಜೀವ ಇಲ್ಲದೇ ಪಾಲಕರ ಆಶಾಗೋಪುರ ಕಳಚಿ ಬಿದ್ದಂತಾಗಿದೆ.(ದಿಗ್ವಿಜಯ ನ್ಯೂಸ್​)
ಇದುವರೆಗೂ ನಾನು ಹಾರಿಸಿದ್ದು ಕಾಗೆಯಲ್ಲ ಎಂದ ಡ್ರೋನ್ ಪ್ರತಾಪ್…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
