ಬೆಂಗಳೂರು:ಕರೊನಾ ಮೂರನೇ ಅಲೆ ಅಬ್ಬರ ಇಳಿಮುಖಗೊಂಡು ಕ್ರಮೇಣ ಆರ್ಥಿಕತೆ ಚೇತರಿಕೆಯತ್ತ ಸಾಗಿದೆ. ಆದರೂ ಜನರ ಆಶೋತ್ತರಗಳಿಗೆ ಸ್ಪಂದನೆ, ಬದ್ಧತಾ ವೆಚ್ಚ ಸರಿದೂಗಿಸಲು ಪೂರ್ವ ನಿರ್ಧಾರದಂತೆ ರಾಜ್ಯ ಸರ್ಕಾರ ಸಾಲಕ್ಕೆ ಮೊರೆ ಹೋಗಿದೆ.
ಪ್ರತಿ ವಾರ 5,000 ಕೋಟಿ ರೂ.ಗಳಂತೆ ಮಾರ್ಚ್ ಅಂತ್ಯದೊಳಗೆ ಒಟ್ಟು 50,000 ಕೋಟಿ ರೂ. ಅಭಿವೃದ್ಧಿ ಸಾಲ (ಎಸ್​ಡಿಎಲ್) ಎತ್ತುವಳಿ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್​ಗೆ ಈಗಾಗಲೆ ಮಾಹಿತಿ ನೀಡಿದೆ.
ಪ್ರಸಕ್ತ ಹಣಕಾಸು ವರ್ಷ (2021-22) 71,332 ಕೋಟಿ ರೂ. ಸಾಲ ಮಾಡಲು ತೀರ್ವನಿಸಿದ್ದರೂ ಮೊದಲ ಒಂಭತ್ತುಗಳ ತಿಂಗಳ ಕಾದು ನೋಡುವ ತಂತ್ರ ಅನುಸರಿಸಿತು. ಇದರಿಂದ ಜನವರಿ 11ರ ತನಕ 22,000 ಕೋಟಿ ರೂ. ಸಾಲವನ್ನಷ್ಟೇ ಪಡೆದುಕೊಂಡಿದೆ. ಆರ್ಥಿಕ ವರ್ಷದ ಮೊದಲ ಆರು ತಿಂಗಳು ಸಾಲ ಪಡೆಯದೆ ಕ್ರೋಡೀಕೃತ ಆರ್ಥಿಕ ಸಂಪನ್ಮೂಲದಲ್ಲಿ ಸಂಬಳ, ಪಿಂಚಣಿ, ಬದ್ಧತಾ ವೆಚ್ಚಗಳ ಜತೆಗೆ ಅಭಿವೃದ್ಧಿ ವೆಚ್ಚವನ್ನು ಸರಿದೂಗಿಸಿದೆ. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಪರಿಷ್ಕರಣೆ, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ 14,000 ಕೋಟಿ ರೂ. ಪಾವತಿ, ಆದಾಯ ಸಂಗ್ರಹಣೆಯಲ್ಲಿ ಗುರಿ ತಲುಪುವ ನಿರೀಕ್ಷೆಯಲ್ಲಿತ್ತು.
ಖೋತಾ ಖಚಿತ:ಕರೊನಾ ಮೂರನೇ ಅಲೆ ಅಪ್ಪಳಿಸಿದ್ದರಿಂದ ಸೋಂಕು ನಿಯಂತ್ರಣ ಹಾಗೂ ಜನರ ಜೀವ, ಜೀವನ ರಕ್ಷಣೆಗಾಗಿ ಬಿಗಿ ನಿರ್ಬಂಧಗಳನ್ನು ವಿಧಿಸಬೇಕಾದ ಸ್ಥಿತಿ ತಲೆದೋರಿತು. ಹಿಂದಿನ ಎರಡು ಬಾರಿಯ ಲಾಕ್​ಡೌನ್​ನಿಂದ ಜನ ಜೀವನ ಸರಿದಾರಿಗೆ ಮರಳಿಲ್ಲ. ಔದ್ಯೋಗಿಕ, ವಹಿವಾಟು ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲ. ಈ ಬಿಕ್ಕಟ್ಟು ನಿವಾರಣೆಯಾಗುವ ಮುನ್ನ ಮತ್ತೆ ಜಾರಿಯಾದ ನಿರ್ಬಂಧಗಳಿಂದ ಕೈಗಾರಿಕಾ ವಲಯ ಮುಕ್ತವಾಗಿಟ್ಟರೂ ಜನ-ಜೀವನ, ವಹಿವಾಟು ವ್ಯತ್ಯಯವಾಗಿದೆ. ಇದರಿಂದ ಆದಾಯ ಸಂಗ್ರಹಕ್ಕೂ ಹೊಡೆತ ಬಿದ್ದಿದ್ದು, ಹಿಂದಿನ ವರ್ಷಗಳಂತೆ ಈ ಬಾರಿಯೂ ಒಟ್ಟು ಆದಾಯದಲ್ಲಿ 20,000 ಕೋಟಿ ರೂ ಖೋತಾ ಆಗಲಿರುವುದು ಬಹುತೇಕ ಖಚಿತವೆಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ಮುಕ್ತ ಮಾರುಕಟ್ಟೆಯಿಂದ ಸಾಲ:ಖರ್ಚು-ವೆಚ್ಚ, ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕಾದ ಅಭಿವೃದ್ಧಿ ಯೋಜನೆಗಳಿಗೆ ನಿಗದಿ ಪ್ರಮಾಣದ ಸಾಲ ಪಡೆಯುವುದು ಅನಿವಾರ್ಯವಾಗಿದೆ. ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸಾಲ ಎತ್ತುವಳಿಯಾಗಲಿದ್ದು, ಪ್ರತಿ ವಾರ ನಡೆಯುವ ಆರ್​ಬಿಐ ಹರಾಜು ಪ್ರಕ್ರಿಯೆಯಲ್ಲಿ 5,000 ಕೋಟಿ ರೂ. ಸಾಲ ಪಡೆಯುವತ್ತ ಹೆಜ್ಜೆಯಿಟ್ಟಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ತಲಾ 20,000 ಕೋಟಿ ರೂ.ನಂತೆ ಒಟ್ಟು 40,000 ಕೋಟಿ ರೂ. ಹಾಗೂ ಆರ್ಥಿಕ ವರ್ಷದ ಕೊನೆ ತಿಂಗಳಾದ ಮಾರ್ಚ್​ನಲ್ಲಿ 10,000 ಕೋಟಿ ರೂ. ಅಭಿವೃದ್ಧಿ ಸಾಲ ಎತ್ತುವಳಿ ಮಾಡಲಿದೆ. ಇದಕ್ಕೂ ಮುನ್ನ ಅಕ್ಟೋಬರ್ ಹಾಗೂ ನವೆಂಬರ್​ನಲ್ಲಿ ಮೂರು ಕಂತುಗಳಲ್ಲಿ ತಲಾ 2,000 ಕೋಟಿ ರೂ., ಡಿಸೆಂಬರ್​ನಲ್ಲಿ ಮೂರು ಕಂತುಗಳಲ್ಲಿ ತಲಾ 2,000 ಕೋಟಿ ರೂ., ಮತ್ತೊಂದು ಕಂತಿನಲ್ಲಿ 4,000 ಕೋಟಿ ರೂ. ಎತ್ತಿದೆ. ಹಾಗೆಯೇ ಜನವರಿಯಲ್ಲಿ ಎರಡು ಕಂತುಗಳಲ್ಲಿ ತಲಾ 5,000 ಕೋಟಿ ರೂ. ಸೇರಿ ಜ.11ರ ತನಕ ಒಟ್ಟಾರೆ 22,000 ಕೋಟಿ ರೂ ಸಾಲ ಪಡೆಯಲಾಗಿದೆ ಎಂದು ಮೂಲಗಳು ವಿವರಿಸಿವೆ.
ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + four =
Remember me
