ರಾಯಚೂರು:ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ಪುತ್ಥಳಿ ನಿರ್ವಿುಸಿ, ನಿತ್ಯ ಪೂಜೆ ಮಾಡುವ ಮೂಲಕ ರೈತನೊಬ್ಬ ಎಲ್ಲರಿಗೂ ಅಚ್ಚರಿ ಮೂಡುವಂತೆ ಮಾಡಿದ್ದಾನೆ. ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಈ ರೀತಿ ಅಭಿಮಾನ ಮೆರೆಯುತ್ತಿರುವ ರೈತ. ತಮ್ಮ ಜಮೀನಿನಲ್ಲಿ ಎಚ್​ಡಿಡಿ ಪುತ್ಥಳಿ ಸ್ಥಾಪಿಸಿ, ಅದರ ಮೇಲೆ ಭಾರತ ರತ್ನ, ಕನ್ನಡದ ಕಣ್ಮಣಿ, ದೇವದುರ್ಗ ತಾಲೂಕಿನ ದೊರೆ ಎಂದೆಲ್ಲ ಬಿರುದುಗಳನ್ನು ಬರೆಸಿದ್ದಾನೆ. ಕೃಷ್ಣಾ ನದಿ ನೀರನ್ನು ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ಬರಡು ಭೂಮಿಗೆ ಹರಿಸಿದ್ದಕ್ಕಾಗಿ, ಅಭಿಮಾನದಿಂದ ಈ ರೀತಿ ಮಾಡುತ್ತಿದ್ದಾರೆ.
ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿ ಈ ಪುತ್ಥಳಿ ನಿರ್ವಿುಸಿರುವೆ. ನಾನು ರಾಜಕಾರಣಿಯಲ್ಲ. ರಾಜಕೀಯ ಬೇಕಾಗಿಲ್ಲ. 2017ರಲ್ಲಿ ಪುತ್ಥಳಿ ನಿರ್ಮಾಣ ಆರಂಭಿಸಲಾಗಿತ್ತು. ಅಡತಡೆಗಳಿಂದ ಪೂರ್ಣವಾಗಿರಲಿಲ್ಲ. ಈಗ ಕೈಗೂಡಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸುತ್ತೇನೆ. ಪೂಜಿಸುತ್ತೇನೆ.
| ಪ್ರಭುರೆಡ್ಡಿಎಚ್​ಡಿಡಿ ಮೂರ್ತಿ ನಿರ್ವಿುಸಿರುವ ರೈತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
