ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಜತೆ ಎಸಿಪಿ ವೆಂಕಟೇಶ್ ಪ್ರಸನ್ನ ಸ್ನೇಹ ಆರೋಪ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆಯುತ್ತಿದೆ. 4 ವರ್ಷಗಳ ಹಿಂದೆ ರವಿ ಪೂಜಾರಿ ಬಲಗೈ ಬಂಟ ಭೂಗತ ಪಾತಕಿ ಕಲಿಯೋಗೇಶ್ ದುಬೈನಲ್ಲಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ಎಸಿಪಿ ವೆಂಕಟೇಶ್ ಭಾಗವಹಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಸಿಸಿಬಿ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ್ದು ಬೆಳಗಾವಿ ಜಿಲ್ಲಾಡಳಿತ, ಅದೂ ಗಡಿಯಲ್ಲಿ…
ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ರವಿ ಪೂಜಾರಿಯನ್ನು ಬಂಧಿಸಿದ ಪೊಲೀಸರು, ರಾಜ್ಯಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಪೂಜಾರಿ ಮತ್ತು ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನಡುವೆ ಸ್ನೇಹ ಇರುವುದು ಬೆಳಕಿಗೆ ಬಂದಿತು. ಈ ಬಗ್ಗೆಯೂ ಪ್ರತ್ಯೇಕ ತನಿಖೆಗೆ ಸರ್ಕಾರ ಸೂಚನೆ ನೀಡಿತ್ತು. ಸಿಸಿಬಿಯ ಪ್ರತ್ಯೇಕ ತಂಡ ತನಿಖೆ ಕೈಗೊಂಡಾಗ ಹಲವು ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ.
ಇದನ್ನೂ ಓದಿ:ಐಎಸ್​ಐಎಸ್ ಕಮಾಂಡರ್ ಜಿಯಾ ಉಲ್ ಹಕ್ ಸೇರಿ ಮೂವರು ಪ್ರಮುಖರು ಆಫ್ಘನ್​ನಲ್ಲಿ ಸೆರೆ
ಪೂಜಾರಿ ಸಹಚರ ಮಂಗಳೂರಿನ ದಿನೇಶ್ ಶೆಟ್ಟಿ, ದುಬೈನಲ್ಲಿ ತಲೆಮರೆಸಿಕೊಂಡಿರುವ ವಿಶ್ವನಾಥ್ ಕೊರಂಗು ಶೆಟ್ಟಿ (ಇ ಮೇಲ್ ಹೇಳಿಕೆ) ಹಾಗೂ ಮಂಗಳೂರು ಸಿಸಿಬಿ ಘಟಕದ ಮುಖ್ಯಪೇದೆಯೊಬ್ಬ ಬೆಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!
ರಿಯಲ್​ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮಿಗಳು ಸೇರಿ ಶ್ರೀಮಂತರಿಗೆ ಬೆದರಿಕೆ ಒಡ್ಡಿ ಸುಲಿಗೆ ಮಾಡುತ್ತಿದ್ದ ರವಿ ಪೂಜಾರಿ ಮತ್ತು ಕಲಿ ಯೋಗೇಶ್ ಜತೆ ಎಸಿಪಿ ನಿರಂತರ ಸಂಪರ್ಕದಲ್ಲಿದ್ದರು. ಸರ್ಕಾರದ ಅನುಮತಿ ಪಡೆಯದೆ ದುಬೈಗೆ ಬಂದಿದ್ದ ಎಸಿಪಿಗೆ ಕಲಿಯೋಗೇಶ್ ಪಾರ್ಟಿ ಆಯೋಜಿಸಿದ್ದ. ಅದಕ್ಕೆ ತಗುಲಿದ 16 ಲಕ್ಷ ರೂ. ವೆಚ್ಚವನ್ನು ನಾನೇ ಭರಿಸಿದ್ದೇನೆ ಎಂದು ವಿಶ್ವನಾಥ್ ಶೆಟ್ಟಿ ಬೆಂಗಳೂರು ಸಿಸಿಬಿ ಪೊಲೀಸರಿಗೆ ಹೇಳಿರುವುದಾಗಿ ತಿಳಿದುಬಂದಿದೆ. ದುಬೈ ಪ್ರವಾಸ ಮತ್ತು ಪೂಜಾರಿ ಜತೆ ಸ್ನೇಹದ ಕುರಿತು ಎಸಿಪಿಗೆ ಸಹಾಯಕರಾಗಿದ್ದ ಮುಖ್ಯಪೇದೆ ಹಾಗೂ ರಶೀದ್ ಮಲಬಾರಿ ವಕೀಲ ನೌಷದ್ ಕೊಲೆ ಪ್ರಕರಣದ ಆರೋಪಿ ದಿನೇಶ್ ಶೆಟ್ಟಿ ಸಹ ಸಾಕ್ಷ್ಯ ಹೇಳಿಕೆ ನೀಡಿದ್ದಾನೆ. ರವಿ ಪೂಜಾರಿ ಗ್ಯಾಂಗ್​ನಿಂದ ಉದ್ಯಮಿಗಳಿಗೆ ಬೆದರಿಕೆ ಕರೆ ಬಂದಾಗ ತಾವೇ ನಿಂತು ಪ್ರಸನ್ನ ಬಗೆಹರಿಸುತ್ತಿದ್ದರು. ವಕೀಲ ನೌಷಾದ್ ಕೊಲೆ ಹಾಗೂ ಬಿಜೆಪಿ ನಾಯಕರ ಕೊಲೆಗಳ ಬಗ್ಗೆ ಪ್ರಸನ್ನಗೆ ಮಾಹಿತಿ ಇದ್ದರೂ ತಡೆಯಲು ಯತ್ನಿಸಿಲ್ಲ ಎಂದು ದಿನೇಶ್ ಶೆಟ್ಟಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ:ವಿವೇಚನೆಯಿಂದ ನಿರ್ಧರಿಸಿ, ಶೈಕ್ಷಣಿಕ ವರ್ಷ ಆರಂಭಕ್ಕೆ ಹಲವು ತೊಡಕುಗಳು
2015ರಲ್ಲಿ ಪೊಲೀಸರಿಗೆ ಸೆರೆಯಾಗುವ ಮುನ್ನ ಬನ್ನಂಜೆ ರಾಜನಿಂದ ಕೂಡ ಪ್ರಸನ್ನ ಸಹಾಯ ಪಡೆದಿದ್ದರು. ಬಂಧನದ ನಂತರ ಬನ್ನಂಜೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದರು ಎಂದು ವಿಶ್ವನಾಥ್ ಶೆಟ್ಟಿ ಹೇಳಿದ್ದಾನೆ. ಈ ಎಲ್ಲರ ಹೇಳಿಕೆ ಲಿಖಿತವಾಗಿ ಪಡೆದಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!
ನ್ಯಾಯಾಂಗ ಬಂಧನದಲ್ಲಿ ಪೂಜಾರಿ:ರಾಜ್ಯದಲ್ಲಿ 97 ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿಯನ್ನು ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಕರೊನಾ ಸೋಂಕು ಹಿನ್ನೆಲೆಯಲ್ಲಿ ತನಿಖೆ ನಿಲ್ಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಾಣದ ಹಂಗು ತೊರೆದು ಜೀವ ಉಳಿಸುವ ತಾಯಂದಿರಿಗೆ ನಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
