ಬೆಂಗಳೂರು:ವಸತಿ ಪ್ರದೇಶದಲ್ಲಿ ಪತ್ನಿಯನ್ನು ಆಟೋದಲ್ಲಿ ಕೂರಿಸಿಕೊಂಡು ಗಂಡ ಸುತ್ತಾಡುತ್ತಿದ್ದ. ಸಂಪಾದನೆ ಏನೂ ಇರಲಿಲ್ಲ. ಆದರೂ ಮೋಜು-ಮಸ್ತಿಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿದ್ದರು… ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ದಂಪತಿಯೀಗ ಕಂಬಿ ಎಣಿಸುತ್ತಿದ್ದಾರೆ.
ಬೈರತಿಬಂಡೆ ನಿವಾಸಿ ಜಯಂತಿ ಕುಟ್ಟಿಯಮ್ಮ(29) ಮತ್ತು ಬಾಬು ಅಲಿಯಾಸ್ ಮಾರ್ಕೆಟ್ ಬಾಬು (33) ಬಂಧಿತರು. ಇವರಿಂದ 62 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನ ಮತ್ತು 5.5 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಷ್ಟಕ್ಕೂ ಈ ದಂಪತಿ ಮಾಡಿದ್ದಾದರೂ ಏನು ಗೊತ್ತಾ? ಅವರ ದುಷ್ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ.
ತಮಿಳುನಾಡು ಮೂಲದ ಬಾಬು ಆಟೋ ಚಾಲಕ. ಈತ ಪತ್ನಿ ಜಯಂತಿಯನ್ನು ಜತೆಯಲ್ಲಿ ಕರೆದುಕೊಂಡು ವಸತಿ ಪ್ರದೇಶದಲ್ಲಿ ತಿರುಗಾಡಿಸುತ್ತಿದ್ದ. ಬೀಗ ಹಾಕಿರುವ ಮನೆಗಳನ್ನು ದಂಪತಿ ಗುರುತಿಸುತ್ತಿದ್ದರು. ನಂತರ ಜಯಂತಿಯನ್ನು ಕಳುಹಿಸಿ ಮನೆ ಮುಂದೆ ಆಟೋದಲ್ಲಿ ಬಾಬು ಕಾಯುತ್ತಿದ್ದ. ಇತ್ತ ನಕಲಿ ಕೀ ಬಳಸಿ ಜಯಂತಿ, ಮನೆ ಬೀಗ ತೆಗೆದು ಚಿನ್ನಾಭರಣ ಕದ್ದು ಬಂದು ಗಂಡನ ಆಟೋದಲ್ಲಿ ಪರಾರಿ ಆಗುತ್ತಿದ್ದಳು.
ಕದ್ದ ಚಿನ್ನಾಭರಣ ಗಿರವಿ ಅಥವಾ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು. ಅ.28ರ ರಾತ್ರಿ 2.30ರಲ್ಲಿ ಆನೇಪಾಳ್ಯದಲ್ಲಿ ಶಿಕ್ಷಕರ ಮನೆಗೆ ನುಗ್ಗಿ 149 ಗ್ರಾಂ ಚಿನ್ನಾಭರಣ ದೋಚಿ ಪರಾರಿ ಆಗುತ್ತಿದ್ದಾಗ ಮನೆ ಮಾಲೀಕರು ಅದೇ ಸಮಯಕ್ಕೆ ಬಂದಿದ್ದರು. ಗಾಬರಿಗೊಂಡ ಶಿಕ್ಷಕ, ಕಳ್ಳಿಯನ್ನು ಹಿಡಿಯಲು ಹಿಂಬಾಲಿಸಿದಾಗ ದಂಪತಿ ತಪ್ಪಿಸಿಕೊಂಡಿದ್ದರು. ಈ ಕುರಿತು ಶಿಕ್ಷಕ ಕೊಟ್ಟ ದೂರು ಮತ್ತು ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ 6 ಪ್ರಕರಣಗಳು ಪತ್ತೆಯಾಗಿವೆ.
ಮಾವ-ಸೊಸೆ ನಡುವೆ ಅಕ್ರಮ ಸಂಬಂಧ, ಗುಟ್ಟು ರಟ್ಟಾಗುತ್ತಿದ್ದಂತೆ ನಡೆಯಿತು ಭೀಕರ ಹತ್ಯೆ!

ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 6 =
Remember me
