ಬೆಂಗಳೂರು:ಕಾಂಗ್ರೆಸ್ ಸೇರಿದ ವೇಲು ನಾಯ್ಕರ್, ಇದೀಗ ತಮ್ಮ ಆಪ್ತರಾಗಿದ್ದ ಮುನಿರತ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಮುನಿರತ್ನ ಆಪ್ತರು ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಶಾಸಕ ಮುನಿರತ್ನಗೆ ಶಾಕ್​ ನೀಡಿದ ಡಿಕೆ ಬ್ರದರ್ಸ್​​; RRನಗರ ಕ್ಷೇತ್ರದಲ್ಲಿ ಆಪರೇಷನ್​ ಹಸ್ತ
ಈ ಸಂದರ್ಭ, “ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸೋದು ಹೇಗೆ ಎಂದು ಕೇಳಿದೆವು. ಅದಕ್ಕೆ ಮುನಿರತ್ನ ನಿಮ್ಮಗಳದ್ದು ಈಸ್ಟ್ ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ, ಇಲ್ಲ ಕೆಲಸ ಮಾಡ್ತಿರಾ? ಅಂತ ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸೋದು ಹನಿಟ್ರ್ಯಾಪ್ ಮಾಡೋದು ಹೆದರಿಸೋದು ಅವರು ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಅವರು ಸಚಿವರಾದ ಮೇಲೂ ವಿಧಾನಸೌಧ ಚೇಂಬರ್​ನಲ್ಲೆಲ್ಲ ಬರೀ ಆಂಟಿರೇ ಇರ್ತಿದ್ರು.
ಇದನ್ನೂ ಓದಿ:ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಾತು ಕೊಟ್ಟಿದ್ದೇನೆ; ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ಮುನಿರತ್ನ
ಜೆಪಿ ಪಾರ್ಕ್‌‌ನಲ್ಲಿ ಸ್ಟುಡಿಯೋ ಇದೆ, ಡಾಲರ್ಸ್ ಕಾಲೊನಿಯಲ್ಲೊಂದು ಸ್ಟುಡಿಯೋ ಇದೆ. ಸಿನಿಮಾ ಪ್ರೊಡ್ಯುಸರ್ ಅಲ್ವಾ ಹಂಗಾಗಿ ಹನಿಟ್ರ್ಯಾಪ್ ಮಾಡೋದು ಹೆದರಿಸೋದು” ಎಂದು ಆರೋಪ ವೇಲು ನಾಯ್ಕರ್ ಮಾಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್, ಆರ್ ಆರ್ ನಗರ ಕೈ ನಾಯಕಿ ಕುಸುಮಾ ಹನುಮಂತರಾಯಪ್ಪ ಹಾಜರಿದ್ದರು.
ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ! ಎಲ್ಲೆಲ್ಲಿ ಶಾಲಾ ಕಾಲೇಜುಗಳಿಗೆ ರಜೆ?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 4 =
Remember me
