ಕೊಡಗು:ಮರದಿಂದ ಕೆಳಗೆ ಬಿದ್ದು ಪೊಲೀಸ್​ ಸಿಬ್ಬಂದಿಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಕುಶಾಲನಗರ ತಾಲೂಕಿನ ಕಾನ್​ಬೈಲ್​ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ (40) ಮೃತ ದುರ್ದೈವಿ. ಮಾವಿನ ಮರ ಕಸಿಮಾಡಲು ಮರ ಏರಿದ್ದ ಸಮಯದಲ್ಲಿ ರಕ್ತದೊತ್ತಡ (ಬಿಪಿ) ಕಡಿಮೆಯಾಗಿ, ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್​ಗೆ ಬಿದ್ದ ಪರಿಣಾಮ ಲೋಕೇಶ್​ ಮೃತಪಟ್ಟಿದ್ದಾರೆ.
ಲೋಕೇಶ್​ ಅವರು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ 10 ವಷ೯ಗಳಿಂದ ಗನ್ ಮ್ಯಾನ್ ಆಗಿದ್ದರು. ಲೋಕೇಶ್ ನಿಧನಕ್ಕೆ ಅಪ್ಪಚ್ಚು ರಂಜನ್ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೆಳೆತಿಯ ಸಹಾಯಕ್ಕೆ ನಿಂತ ಬಾಲ್ಯದ ಸ್ನೇಹಿತೆಯರು…ಇದು ನಿಜವಾದ ಸ್ನೇಹ
ಮೃತದೇಹವನ್ನು ಮಡಿಕೇರಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪ್ಪಚ್ಚು ರಂಜನ್ ಹಾಗೂ ಮಾಜಿ ಸ್ಪೀಕರ್​ ಕೆ.ಜಿ ಬೋಪಯ್ಯ‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪಚ್ಚು ರಂಜನ್​ ಅವರು ಕಣ್ಣೀರು ಹಾಕಿದರು.
ದುಃಖದಿಂದಲೇ ಮಾತನಾಡಿದ ಅಪ್ಪಚ್ಚು ರಂಜನ್​, ಎಲ್ಲ ಕೆಲಸದಲ್ಲೂ ಲೋಕೇಶ್​ ನನ್ನೊಂದಿಗೆ ಇರುತ್ತಿದ್ದ. ಪಕೃತಿ ವಿಕೋಪದ ಸಮಯದಲ್ಲೂ ಧೈರ್ಯದಿಂದ ಮುನ್ನುಗುತ್ತಿದ್ದ. ಸಣ್ಣ ವಯಸಿನಲ್ಲೇ ಹೀಗಾಗಿದ್ದು ಬಹಳ ನೋವು ತಂದಿದೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಚಿಪ್ಸ್ ಪ್ಯಾಕೆಟ್​​ ಕದಿಯುವಾಗ ಸಿಕ್ಕಿಬಿದ್ದ ಬಾಲಕ: ಥಳಿಸಿ, ಮಾರ್ಕೆಟ್​​ನಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ರು..

ಕುತ್ತಿಗೆ ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕ: ರಕ್ತಪಿಪಾಸುವಿನ ಜೀವ ತೆಗೆದ ಸ್ನೇಹಿತ

ಮಂಗಗಳ ದಾಳಿ.. ಭಯದಿಂದ ಬಾವಿಗೆ ಬಿದ್ದ ವೃದ್ಧೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + eight =
Remember me
