ಬೆಂಗಳೂರು: ಹಾಲು, ಮೊಸರು, ಮಜ್ಜಿಗೆಯಿಂದ ತರಕಾರಿ, ಹೋಟೆಲ್ ತಿಂಡಿ ತಿನಿಸುಗಳ ಬೆಲೆಗಳು ಏರಿಕೆಯಾಗಿವೆ. ಕಾಂಗ್ರೆಸ್ ಸರ್ಕಾರದಲ್ಲಿ ದುಬಾರಿ ದುನಿಯಾ ಆಗಿದ್ದು, ಬೆಲೆಗಳ ಹೆಚ್ಚಳವೇ ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಜಾರಿ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದು ಬಡವರ ಪರ, ಜನಪರ ಸರ್ಕಾರವೆಂದು ಕೊಚ್ಚಿಕೊಂಡರು. ಬಡವರಿಗೆ ಕೊಟ್ಟಂತೆ ಮಾಡಿ ದುಪ್ಪಟ್ಟು ಕಿತ್ತುಕೊಳ್ಳುವ ದುಃಸಾಹಸಕ್ಕೆ ಕೈಹಾಕಿದೆ ಎಂದು ಕಿಡಿಕಾರಿದ್ದಾರೆ.
ಗ್ಯಾರಂಟಿಗಳಿಂದ ಜನರ ಆದಾಯ ವೃದ್ಧಿಗಿಂತ ಬೆಲೆ ಏರಿಕೆಯು ಇದ್ದಬದ್ದ ಆದಾಯವನ್ನು ಕಸಿದುಕೊಂಡು ಜನರ ಬದುಕು ದುರ್ಬರಗೊಳಿಸಲಿದೆ. ಗ್ಯಾರಂಟಿ ಯೋಜನೆ ನಿಭಾಯಿಸುವುದು ಕಷ್ಟವೆಂದು ಹೇಳುತ್ತಲೇ ಬಂದಿದ್ದೆವು. ಇದೆಲ್ಲ ಸಾಧ್ಯವಾಗಿಸಿದ್ದೇವೆ ಎಂದು ಹೆಮ್ಮೆಯಿಂದ ಬೀಗುತ್ತಾ ಜನರಿಗೆ ಬೆಲೆ ಏರಿಕೆ ಆಘಾತ ನೀಡಿದೆ ಎಂದು ಬೊಮ್ಮಾಯಿ ತಿವಿದಿದ್ದಾರೆ.
ದಲಿತರಿಗೆ ದ್ರೋಹ
ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ 34 ಸಾವಿರ ಕೋಟಿ ರೂ. ಕಾದಿಡಲಾಗಿದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಕಾದಿಟ್ಟ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಿದ್ದರೂ 11 ಸಾವಿರ ಕೋಟಿ ರೂ.ಗಳನ್ನು ಐದು ಗ್ಯಾರಂಟಿಗಳಿಗೆ ಒದಗಿಸಿ ದಲಿತರಿಗೆ ದ್ರೋಹ ಎಸಗಲಾಗಿದೆ.
ಶೋಷಿತ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಿರಿಸಿದ ಅನುದಾನಕ್ಕೆ ಕಾಯ್ದೆ ರಕ್ಷಣೆಯಿದೆ. ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡಿದ್ದ ಕಾಯ್ದೆಯ ಸೆಕ್ಷನ್ 7ಡಿ ತೆಗೆದು ಹಾಕಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಹಾಗಿದ್ದರೆ 11 ಸಾವಿರ ಕೋಟಿ ರೂ. ಗ್ಯಾರಂಟಿಗೆ ಹಂಚಿಕೆ ಮಾಡಲು ಹೇಗೆ ಸಾಧ್ಯವಾಯಿತು ? ಎಂದು ಪ್ರಶ್ನಿಸಿದ್ದಾರೆ.
ಎಸ್‌ಸಿಎಸ್‌ಪಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ, ದಮನಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನಸಿಲ್ಲದೇ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ವರ್ಗಾವಣೆಗೆ ಒಪ್ಪಿರುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಡೆಯ ಬಗ್ಗೆ ಎಸ್‌ಸಿ, ಎಸ್‌ಟಿ ಸಮುದಾಯಗಳ ಅಸಮಾಧಾನ ಎತ್ತಿ ತೋರಿಸುತ್ತದೆ. ಇನ್ನೊಂದೆಡೆ ನಿರ್ಲಕ್ಷಿತ ಸಮುದಾಯಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಬಯಲಾಗಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 17 =
Remember me
