ಹಾಸನ:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಒಂದೇ ದೋಣಿಯಲ್ಲಿ ತೇಲುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಟ್ರಂಪ್ ಶೀಘ್ರ ಚುನಾವಣೆ ಎದುರಿಸಬೇಕಾಗಿರುವುದರಿಂದ ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿ ಸಿಎಎ ಮತ್ತು ಎನ್​ಆರ್​ಸಿ ಅಂತಹ ಸಮಸ್ಯೆಗಳಲ್ಲದ ಸಮಸ್ಯೆಗಳನ್ನು ತಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ನಾನು ಸಿಎಂ ಆಗಿದ್ದಾಗ ಶ್ರೀಶಿವಕುಮಾರ ಸ್ವಾಮೀಜಿ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ಅಭಿವೃದ್ಧಿಗೆ ತಲಾ 25 ಕೋಟಿ ರೂ. ಮೀಸಲಿಟ್ಟಿದ್ದೆ. ಆದರೆ, ಆದಿಚುಂಚನಗಿರಿ ಶ್ರೀಗಳ ಅನುದಾನಕ್ಕೆ ತಡೆಯೊಡ್ಡಿದ್ದಾರೆ. ಇಷ್ಟೊಂದು ಸಣ್ಣತನದ ರಾಜಕಾರಣ ಒಳ್ಳೆಯದಲ್ಲ ಎಂದರು.
ನನಗಿನ್ನೂ ವಯಸ್ಸಾಗಿಲ್ಲ:ರಾಜಕೀಯದಿಂದ ನಿವೃತ್ತಿ ಪಡೆಯುವಷ್ಟು ವಯಸ್ಸು ನನಗಿನ್ನೂ ಆಗಿಲ್ಲ. ಪಕ್ಷ ಸಂಘಟನೆಯಿಂದ ವಿಮುಖನಾಗುವ ಆತುರವೂ ಇಲ್ಲ. ಆರೋಗ್ಯವಿರುವಾಗ ವೈರಾಗ್ಯದ ಮಾತೇಕೆ? ಎಂದ ಎಚ್​ಡಿಕೆ, ಬಿಜೆಪಿಯ 15-20 ಶಾಸಕರು ಜೆಡಿಎಸ್ ಸೇರಲು ಮುಂದಾಗಿದ್ದು ಸರ್ಕಾರ ರಚಿಸುವಂತೆ ಸಲಹೆ ನೀಡುತ್ತಿದ್ದಾರೆ. ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಕ್ರಾಂತಿ ಬಳಿಕ ಸಭೆ:ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕಿದ್ದು ಸಂಕ್ರಾಂತಿ ಬಳಿಕ ಸಭೆ ಕರೆಯುತ್ತೇನೆ. ನಮ್ಮವರು ಪಕ್ಷ ಸಂಘಟನೆ ಮಾಡುವುದು ಬೇಡ. ಡ್ಯಾಮೆಜ್ ಹೇಳಿಕೆ ನೀಡಿ ಮುಜುಗರಕ್ಕೀಡು ಮಾಡದಿದ್ದರೆ ಸಾಕು ಎಂದರು. ಚರ್ಚೆ ಆಗಿಲ್ಲ: ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಸ್ಥಾಪಿಸುವ ಕುರಿತು ಕ್ಯಾಬಿನೆಟ್ ಚರ್ಚೆ ಆಗಿಲ್ಲ. ಡಿ.ಕೆ.ಶಿವಕುಮಾರ್ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಿದ್ದರು. ಅದನ್ನು ವಿವಾದವಾಗಿ ಮಾರ್ಪಡಿಸಿದ್ದು ಸರಿಯಲ್ಲ ಎಂದು ದೂರಿದರು.
ಸಿಎಂ ಕುರ್ಚಿ ಹೋದ ಬಳಿಕ ಕುಮಾರ ಸ್ವಾಮಿ ಅವರಿಗೆ ನೀರಿನಲ್ಲಿನ ಮೀನನ್ನು ಹೊರಗೆ ಬಿಟ್ಟಂತಾಗಿದೆ. ಬಹುಶಃ ಬುದ್ಧಿ ಭ್ರಮಣೆಯಾಗಿ ಕೀಳುಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಜೆಡಿಎಸ್ ಮುಳುಗಿ ಹೋಗುತ್ತಿದೆ. ಆ ಪಕ್ಷಕ್ಕೆ ಯಾರಾದರೂ ಹೋಗುತ್ತಾರಾ?
| ಎಂ.ಪಿ.ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fourteen =
Remember me
