ಮೈಸೂರು:ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬಿಜೆಪಿ-ಜೆಡಿಎಸ್​ ಹಾಗೂ ಕಾಂಗ್ರೆಸ್​ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೊಸ ಬಾಂಬ್​ ಒಂದನ್ನು ಸಿಡಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಎಚ್​ಡಿಕೆ ಪೆನ್‍ಡ್ರೈವ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ. ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದ ಕಾರ್ತಿಕನೇ ಇದರ ಮೂಲ. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹೊಳೆನರಸೀಪುರದಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡು. ಡಿ.ಕೆ.ಸುರೇಶ್, ಡಿಕೆ ಶಿವಕುಮಾರ್ ಬಳಿ ಹೋಗಿದ್ದಾನೆ. ಡಿಕೆಶಿ ಮನೆಯಲ್ಲಿ ಪೆನ್‍ಡ್ರೈವ್‍ನ ಟ್ರಾನ್ಸ್ನ್ಸ್​​ಫರ್ ಮಾಡಿಕೊಂಡಿದ್ದಾನೆ. ಸಮಯ ಬಂದಾಗ ಉಪಯೋಗ ಮಾಡಿಕೊಳ್ಳೋಣ ಅಂತ ಕಳಿಸಿದ್ದಾಗಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಪ್ರತಿಷ್ಠಿತ ಕಾನ್ಸ್​​ ಚಿತ್ರೋತ್ಸವದಲ್ಲಿ ನಟ ಸಾಧು ಕೋಕಿಲ ಭಾಗಿ; ಎ.ಆರ್. ರೆಹಮಾನ್​ ಜತೆಗಿನ ನೆನಪು ಮೆಲಕು ಹಾಕಿದ ಸಾಧು
ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೇ ಎಲ್ಲವೂ ತೀರ್ಮಾನ ಆಗಿದೆ. ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ. ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧಿಸಿಲ್ಲ. ಕೋರ್ಟ್ ಗೆ ಹಾಜರುಪಡಿಸಿಲ್ಲ ಹೇಳಿ. ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತಾ ಬೇಕಾದರೆ ನೀವು ಹೇಳ್ತೀರಿ ಎಂದು ಕಿಡಿಕಾರಿದ್ದಾರೆ.
ಎಸ್‍ಐಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ. ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್‍ಐಟಿಗೆ ಕೊಟ್ಟಿರಲಿಲ್ಲ. ಅವರೇನೂ ಟೆರರಿಸ್ಟಾ ಫೋನ್ ಟ್ಯಾಪ್ ಮಾಡೋಕೆ ಅಂತಾ ಕೆಲವರು ಕೇಳಿದ್ದಾರೆ. ಅವರ ಬಳಿ ಇರೋರೆಲ್ಲಾ ಟೆರರಿಸ್ಟ್​​ಗಳೇ. ಬಹಳಷ್ಟು ಟೆರರಿಸ್ಟ್​​ಗಳು ಇವರುಗಳ ಸುತ್ತಮುತ್ತವೇ ಇದ್ದಾರೆ. ಈಗ ಸಿಎಂ ಪೆನ್ ಡ್ರೈವ್ ಬಗ್ಗೆ ಯಾರ ಮಾತಾಡಬೇಡಿ ಅಂದಿದ್ದಾರೆ. ಏಕೆಂದರೆ ನಿಮ್ಮ ಬುಡಕ್ಕೆ ಬರ್ತಾ ಇದೆಯಲ್ಲ. ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ. ಸಿಎಂ ಅವರೇ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fourteen =
Remember me
